ಬಡತನ ಮತ್ತು ಅತ್ಯಾಚಾರಗಳಿಗೆ ನೊಂದು ಪಾಕಿಸ್ತಾನದ ಹಿಂದೂಗಳು ಇಸ್ಲಾಮ್‌ನ್ನು ಸ್ವೀಕರಿಸುತ್ತಿದ್ದಾರೆ

ಪಾಕಿಸ್ತಾನದ ಸಂತ್ರಸ್ತ ಹಿಂದೂಗಳಿಗಾಗಿ ಭಾರತ ಸರಕಾರ ಈಗಲಾದರೂ ಧ್ವನಿ ಎತ್ತಬೇಕು ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ!

ಭಾರತದಲ್ಲಿನ ಅಲ್ಪಸಂಖ್ಯಾತರ ವಿರುದ್ಧದ ತಥಾಕಥಿತ ಅತ್ಯಾಚಾರಗಳ ಬಗ್ಗೆ ಜಾಗರೂಕ ಇರುವ ವಿಶ್ವ ಮಾನವಧಿಕಾರ ಸಂಘಟನೆಗಳು ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ನರಕಯಾತನೆಗಳ ಬಗ್ಗೆ ಚಕಾರವೆತ್ತುವುದಿಲ್ಲ, ಎಂಬುದನ್ನು ಗಮನದಲ್ಲಿಡಿ ! ಸರಕಾರ ಇಂತಹ ದ್ವಿಮುಖ ಸಂಸ್ಥೆಗಳಿಗೆ ಸ್ಪಷ್ಟೀಕರಣ ಕೇಳಬೇಕು!

ಸಿಂಧ್ – ಬಡತನ ಮತ್ತು ಅತ್ಯಾಚಾರಗಳಿಗೆ ನೊಂದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿನ ಬದಿನ್ ಜಿಲ್ಲೆಯಲ್ಲಿನ ಹಿಂದೂಗಳು ಇಸ್ಲಾಮ್‌ನ್ನು ಸ್ವೀಕರಿಸುತ್ತಿರುವುದು ಬೆಳಕಿಗೆ ಬಂದಿದೆ. ಅರಬಿ ಆಯತಗಳನ್ನು ಓದುವ ಮೂಲಕ ಇಸ್ಲಾಮ್‌ನ್ನು ಸ್ವೀಕರಿಸಿದ ಕೂಡಲೇ ಮೊದಲು ಹಿಂದೂ ಪುರುಷರ ಸುನ್ನತ್ ಮಾಡಲಾಗುತ್ತಿದೆ.

ಇಲ್ಲಿನ ಹಿಂದೂಗಳಿಗೆ ಸಾಮೂಹಿಕ ಭೇದಭಾವಗಳನ್ನು ಎದುರಿಸಬೇಕಾಗುತ್ತಿತ್ತು. ಅವರಿಗೆ ಮನೆ ಖರೀದಿಸಲು, ನೌಕರಿಗಳನ್ನು ಪಡೆಯಲು, ಸರಕಾರಿ ಸೌಲಭ್ಯಗಳ ಲಾಭವನ್ನು ಪಡೆಯಲು ತೀವ್ರ ಸಂಘರ್ಷ ಮಾಡಬೇಕಾಗುತ್ತಿತ್ತು. ಆದರೆ ಈಗ ಮಾತ್ರ ಇಸ್ಲಾಮ್‌ನ್ನು ಸ್ವೀಕರಿಸಿದಾಗಿನಿಂದ ಈ ಹಿಂದೂಗಳು ತೃಪ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದಲ್ಲದೆ ಅವರು ಅತ್ಯಾಚಾರ ಮತ್ತು ಹಿಂಸೆಯಿಂದ ಮುಕ್ತವಾಗಿದ್ದೇವೆ ಎಂದು ಹೇಳುತ್ತಿದ್ದಾರೆ.

ಜೂನ್ ಮಾಸದಲ್ಲಿ ಇಸ್ಲಾಂಗೆ ಮತಾಂತರಗೊಂಡ ಈಗ ಅಸ್ಲಮ್ ಶೇಖ್ ಆಗಿರುವ ಸಾವನ್ ಭಿಲ್ ಅವರು, ಇಂತಹ ಮತಾಂತರಗಳಿಗೆ ಮೌಲಾನಾ ಮತ್ತು ಧಾರ್ಮಿಕ ಸಂಸ್ಥೆಗಳು ಮುಂದಾಳತ್ವವನ್ನು ವಹಿಸುತ್ತವೆ, ಇದಕ್ಕಾಗಿ ಹಿಂದೂಗಳಿಗೆ ನೌಕರಿಗಳನ್ನು ಕೊಡುವುದು, ಭೂಮಿಯನ್ನು ನೀಡುವುದು ಇಂತಹ ಆಮಿಷಗಳನ್ನು ತೋರಿಸಲಾಗುತ್ತದೆ. ನಾವು ಮೊದಲೇ ಬಡವರು ಇಂದಿನ ಕರೋನಾ ಸಾಂಕ್ರಾಮಿಕದಿಂದ ಅದರಲ್ಲಿ ಇನ್ನಷ್ಟು ಹೆಚ್ಚಳವಾಗಿದೆ. ಶ್ರೀಮಂತ ಮುಸಲ್ಮಾನರು ಇತರ ಬಡ ಮುಸಲ್ಮಾನರಿಗೆ ಸಹಾಯ ಮಾಡುತ್ತಾರೆ. ಈಗ ಅದು ನಮಗೂ ಸಿಗಬಹುದು. ಪ್ರತಿಯೊಬ್ಬರೂ ತಮ್ಮ ತಮ್ಮ ಸಮುದಾಯಕ್ಕೆ ಸಹಾಯವನ್ನು ಮಾಡುತ್ತಲೇ ಇರುತ್ತಾರೆ. ಆದರೆ ದೇಶದಲ್ಲಿನ ಇತರ ಬಡ ಹಿಂದೂಗಳಿಗೆ ಸಹಾಯ ಮಾಡಲು ಇಲ್ಲಿ ಹಿಂದೂಗಳೇ ಉಳಿದಿಲ್ಲ’ ಎಂದು ಹೇಳಿದರು.