ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ಭಾಜಪದ ಸರಪಂಚನ ಹತ್ಯೆ

ಕಾಶ್ಮೀರದಲ್ಲಿ ಬಿಜೆಪಿ ನಾಯಕರ ಒಂದಾದ ನಂತರ ಒಂದರಂತೆ ಹತ್ಯೆಗಳು ನಡೆಯುತ್ತಿರುವಾಗ ಕೇಂದ್ರದಲ್ಲಿನ ಬಿಜೆಪಿ ಸರಕಾರವು ಈಗಲಾದರೂ ಭಯೋತ್ಪಾದಕರ ವಿರುದ್ಧ ಗಂಭೀರ ಕ್ರಮ ಕೈಗೊಂಡು ಕಾಶ್ಮೀರವನ್ನು ಭಯೋತ್ಪಾದನಾ ಮುಕ್ತಗೊಳಿಸಬೇಕು !

ಸರಪಂಚರಾದ ಸಜ್ಜಾದ್ ಅಹಮದ್

ಶ್ರೀನಗರ – ಕುಲ್‌ಗಾಮ್‌ನಲ್ಲಿ ಭಯೋತ್ಪಾದಕರು ಭಾರತೀಯ ಜನತಾ ಪಕ್ಷದ ಸರಪಂಚರಾದ ಸಜ್ಜಾದ್ ಅಹಮದ್‌ರ ಹತ್ಯೆಯನ್ನು ಮಾಡಿದರು. ಅಹಮದ್ ಇವರು ತಮ್ಮ ಮನೆಯ ಹೊರಗೆ ಕುಳಿತ್ತಿದ್ದಾಗ ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಿ ಅವರ ಹತ್ಯೆಯನ್ನು ಮಾಡಿದರು. ಇದಕ್ಕೂ ಮೊದಲು ಭಯೋತ್ಪಾದಕರು ಜುಲೈ ತಿಂಗಳಿನಲ್ಲಿ ಬಿಜೆಪಿಯ ಬಂದಿಪೋರಾ ಜಿಲ್ಲಾಧ್ಯಕ್ಷ ಮತ್ತು ಅವರ ಇಬ್ಬರು ಸಹಾಯಕರ ಹತ್ಯೆಯನ್ನು ಮಾಡಿದ್ದರು ಮತ್ತು ಜೂನ್ ೭ ರಂದು ಅನಂತನಾಗದಲ್ಲಿನ ಕಾಂಗ್ರೆಸ್‌ನ ಸರಪಂಚರಾದ ಅಜಯ ಪಂಡಿತ ಇವರ ಹತ್ಯೆಯನ್ನು ಮಾಡಿದ್ದರು.