ಗುರುಗ್ರಾಮ(ಹರಿಯಾಣಾ)ದಲ್ಲಿ ಗೋಮಾಂಸವನ್ನು ಸಾಗಿಸುತ್ತಿದ್ದವನಿಗೆ ಥಳಿತ

ಗುರುಗ್ರಾಮ(ಹರಿಯಾಣಾ) – ಇಲ್ಲಿ ಬಕರಿ ಈದನ ಹಿಂದಿನ ದಿನ ಅಂದರೆ ಜುಲೈ ೩೧ ರಂದು ಒಂದು ‘ಪಿಕಪ್ ವ್ಯಾನ್’ನಿಂದ ಗೋಮಾಂಸವನ್ನು ಸಾಗಿಸುತ್ತಿದ್ದ ಲುಕಮಾನನನ್ನು ಕೆಲವರು ಹಲ್ಲೆಮಾಡಿದ್ದಾರೆ. ಅದರಲ್ಲಿ ಆತ ಗಾಯಗೊಂಡಿದ್ದಾನೆ. ಪೊಲೀಸರ ಮುಂದೆಯೇ ಈ ಹಲ್ಲೆ ನಡೆದಿದೆ, ಎಂದು ಹೇಳಲಾಗುತ್ತಿದೆ. ಈ ಘಟನೆಯ ‘ವಿಡಿಯೋ’ವೊಂದು ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಲುಕಮಾನ ಮುಸಲ್ಮಾನ ಬಹುಸಂಖ್ಯಾತ ಮೆವಾತ್‌ನ ನಿವಾಸಿಯಾಗಿದ್ದಾನೆ. ಮಾಂಸ ಮಾರಾಟ ಮಾಡುವ ವ್ಯವಸಾಯವಿದೆ. ಪೊಲೀಸರು ಆತನ ವಾಹನದಲ್ಲಿದ್ದ ಮಾಂಸವನ್ನು ವಶಪಡಿಸಿಕೊಂಡಿದ್ದು ಅದರ ಪರೀಕ್ಷಣೆಗಾಗಿ ‘ಫಾರೆನ್ಸಿಕ್ ಲ್ಯಾಬ್’ಗೆ ಕಳುಹಿಸಿದ್ದಾರೆ.