ಗೋರಖಪುರ(ಉತ್ತರಪ್ರದೇಶ)ದಲ್ಲಿ ಪಾಕಿಸ್ತಾನದ ಆದೇಶದ ಮೇರೆಗೆ ಅಫಘಾನಿ ಉಗ್ರರಿಂದ ದಾಳಿ ಸಾಧ್ಯತೆ

ಪಾಕಿಸ್ತಾನವನ್ನು ಸಂಪೂರ್ಣವಾಗಿ ನಿರ್ನಾಮ ಮಾಡುವ ತನಕ ಭಾರತದಲ್ಲಿ ಜಿಹಾದಿ ಉಗ್ರರ ಚಟುವಟಿಕೆಗಳು ನಿಲ್ಲುವುದಿಲ್ಲ !

ಗೋರಖಪುರ (ಉತ್ತರಪ್ರದೇಶ) – ಗುಪ್ತಚರ ಇಲಾಖೆಯ ವರದಿಗನುಸಾರ ಅಫಘಾನಿ ಆತ್ಮಾಹುತಿ ಉಗ್ರರು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದತ್ಯನಾಥ ಇವರ ಗೋರಖಪುರ ಸಹಿತ ಇತರ ಜಿಲ್ಲೆಗಳಲ್ಲಿ ದಾಳಿ ಮಾಡುವ ಸಂಚನ್ನು ರೂಪಿಸಿದ್ದಾರೆ. ಪಾಕಿಸ್ತಾನದ ಗೂಢಚಾರ ಇಲಾಖೆ ಐ.ಎಸ್.ಐ.ನ ಆದೇಶಕ್ಕನುಸಾರ ಅಫಘಾನಿ ಉಗ್ರರು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಇಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಕ್ಷಣಾ ಪಡೆಯಿಂದ ಪಟ್ಟಣದ ಸುಮಾರು ೫೦ ಸ್ಥಳಗಳಲ್ಲಿ ಗುಪ್ತವಾಗಿ ನಿಗಾ ವಹಿಸಲಾಗಿದೆ. ಭಾರತ-ನೇಪಾಳ ಗಡಿಯಲ್ಲಿಯೂ ನಿಗಾವಹಿಸಲಾಗುತ್ತಿದೆ.