ಪಾಲಘರ್‌ನಲ್ಲಿಯ ಸಾಧುಗಳ ಹತ್ಯೆ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಎಲ್ಲ ಅರ್ಜಿಗಳ ಮೇಲೆ ಒಟ್ಟಿಗೆ ಆಲಿಕೆ ಆಗಲಿದೆ

ನವ ದೆಹಲಿ – ಪಾಲಘರ್‌ನಲ್ಲಿ ಜನಸಮೂಹದಿಂದಾಗಿದ್ದ ಸಾಧುಗಳ ಹತ್ಯೆಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿದ್ದ ಎಲ್ಲ ಅರ್ಜಿಗಳ ಮೇಲೆ ಸರ್ವೋಚ್ಚ ನ್ಯಾಯಾಲಯವು ಒಟ್ಟಾಗಿ ಆಲಿಕೆ ಮಾಡಲಿದೆ. ನ್ಯಾಯಾಲಯದಲ್ಲಿ ೩ ಸ್ವತಂತ್ರ ಅರ್ಜಿಯನ್ನು ಸಲ್ಲಿಸಲಾಗಿತ್ತು. ಅದರಲ್ಲಿ ಸಿಬಿಐ ಹಾಗೂ ವಿಶೇಷ ತನಿಖಾ ತಂಡದಿಂದ ಈ ಪ್ರಕರಣದ ತನಿಖೆಯಾಗಬೇಕು ಎಂದು ಬೇಡಿಕೆಯನ್ನು ಮಾಡಲಾಗಿದೆ. ಮಹಾರಾಷ್ಟ್ರ ಸರಕಾರವು ಮುಚ್ಚಿರುವ ಲಕೋಟೆಯಲ್ಲಿ ವಿಚಾರಣೆಯ ವರದಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದೆ.