ರಾಮಮಂದಿರದ ಕೆಳಗೆ ‘ಟೈಮ್ ಕ್ಯಾಪ್ಸೂಲ್’ ಅಲ್ಲ, ಬದಲಾಗಿ ‘ತಾಮ್ರಪತ್ರ’ ಇಡಲಾಗುವುದು ! – ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ನ ಸ್ಪಷ್ಟನೆ

ಚಂಪತ ರಾಯ

ಅಯೋಧ್ಯೆ (ಉತ್ತರಪ್ರದೇಶ) – ರಾಮಮಂದಿರದ ಭೂಮಿಯ ೨ ಸಾವಿರ ಅಡಿ ಕೆಳಗೆ ‘ಟೈಮ್ ಕ್ಯಾಪ್ಸೂಲ್’ ಇಡಲಾಗುವುದು ಎಂದು ಪ್ರಸಾರ ಮಾಧ್ಯಮಗಳು ನೀಡಿದ ಮಾಹಿತಿ ತಪ್ಪಿದ್ದು ಭೂಮಿ ಪೂಜೆಯ ಸಮಯದಲ್ಲಿ ದೇವಸ್ಥಾನದ ಕೆಳಗೆ ‘ತಾಮ್ರಪತ್ರ’ ಇಡಲಾಗುವುದು. ಅದರಲ್ಲಿ ದೇವಸ್ಥಾನದ ಬಗ್ಗೆ ಎಲ್ಲ ಮಾಹಿತಿ ಇರಲಿದೆ, ಎಂದು ‘ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ’ನ ಪ್ರಧಾನ ಕಾರ್ಯದರ್ಶಿ ಚಂಪತ ರಾಯ ಇವರು ಪ್ರಸಾರ ಮಾಧ್ಯಮದವರೊಂದಿಗೆ ಮಾತನಾಡುವಾಗ ಸ್ಪಷ್ಟಪಡಿಸಿದರು. ಈ ತಾಮ್ರಪಾತ್ರವನ್ನು ‘ಟೈಮ್ ಕ್ಯಾಪ್ಸೂಲ್’ ಹೇಳುವುದು ಅತ್ಯಂತ ಅಯೋಗ್ಯವಾಗಿದೆ, ಎಂದೂ ಅವರು ಹೇಳಿದರು. ಈ ತಾಮ್ರಪಾತ್ರದ ಮೇಲೆ ಸಂಸ್ಕೃತ ಭಾಷೆಯಲ್ಲಿ ಮಾಹಿತಿಯನ್ನು ಬರೆಯಲಾಗಿದೆ. ಅದರಲ್ಲಿ ದೇವಸ್ಥಾನದ ಹೆಸರು, ಸ್ಥಾನ, ನಕ್ಷತ್ರ, ಸಮಯ ಬರೆಯಲಾಗಿದೆ.