ಭಾರತೀಯ ಸೈನ್ಯ ಹಾಗೂ ರಾ.ಸ್ವ.ಸೇ.ಸಂಘಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ : ಜೆಎನ್‌ಯುನ ‘ವಿದ್ವಾನ’ನ ವಿರುದ್ಧ ಪ್ರಥಮ ವರ್ತಮಾನ ವರದಿ ದಾಖಲು

  • ಜೆಎನ್‌ಯು ವಿಶ್ವವಿದ್ಯಾಲಯವೆಂದರೆ ದೇಶದ್ರೋಹಿಗಳನ್ನು ನಿರ್ಮಿಸುವ ಬೀಡಾಗಿದೆ ಎಂದು ಅನೇಕ ಬಾರಿ ಬಹಿರಂಗವಾಗಿದ್ದರೂ ಕೇಂದ್ರ ಸರಕಾರ ಈ ವಿಶ್ವವಿದ್ಯಾಲಯವನ್ನು ಏಕೆ ಮುಚ್ಚುತ್ತಿಲ್ಲ, ಎಂಬುದನ್ನು ಜನರಿಗೆ ತಿಳಿಸಬೇಕು !

  • ಪರಾಕೋಟಿಯ ಭಾರತದ್ವೇಷ ಹಾಗೂ ಹಿಂದೂದ್ವೇಷದಿಂದ ಕೂಡಿದ ವಿದ್ಯಾರ್ಥಿಗಳಿರುವ ಇಂತಹ ವಿಶ್ವವಿದ್ಯಾಲಯಗಳನ್ನು ಮುಂದುವರಿಸುವುದೆಂದರೆ ಭಾವಿ ಉಗ್ರರನ್ನು ಪೋಷಿಸಿದಂತಲ್ಲವೇ ?

ನವ ದೆಹಲಿ – ಭಾರತೀಯ ಸೇನೆ ಹಾಗೂ ರಾ.ಸ್ವ.ಸಂಘ ಇವುಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ನೀಡುವ ‘ವಿದ್ವಾನ’ನ ವಿರುದ್ಧ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲಾಗಿದೆ. ಸಾಜಿದ ಬಿನ್ ಸಯಿದ್ ಎಂದು ಹೆಸರಾಗಿದ್ದು ಆತ ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ದ ಅಧ್ಯಕ್ಷನಾಗಿದ್ದಾನೆ.

ಸಾಜಿದ್ ಈತ ಟ್ವೀಟ್‌ನಲ್ಲಿ, ‘ರಾಷ್ಟ್ರೀಯ ಸ್ವಯಂಸೇವಕ ಸಂಘವು ಹೇಳಿದಂತೆ ಭಾರತೀಯ ಸೈನ್ಯವು ಕಾಶ್ಮೀರಿಯರ ನರಸಂಹಾರ ಮಾಡುತ್ತಿದೆ. ಭಾಜಪ ಸರಕಾರವು ಅವರ ಪ್ರಾಂತೀಯ ಆಸೆಗೆ ಕಡಿವಾಣ ಹಾಕಬೇಕು ಹಾಗೂ ಕಾಶ್ಮೀರಿ ನಾಗರಿಕರಿಗೆ ಸ್ವತಃ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರದ ಬಗ್ಗೆ ವಿಶ್ವ ಸಂಸ್ಥೆಯು ಮಂಡಿಸಿದ ನಿಲುವನ್ನು ಅಂಗೀಕರಿಸಬೇಕು. ಕಾಶ್ಮೀರ ಸಮಸ್ಯೆಗಳನ್ನು ಅಂತರರಾಷ್ಟ್ರೀಯ ಸಂಸ್ಥೆಯು ಹಸ್ತಕ್ಷೇಪ ಮಾಡುವುದು ಇದೇ ಯೋಗ್ಯ ಸಮಯವಾಗಿದೆ’ ಎಂದು ಹೇಳಿದ್ದಾನೆ. (ಪಾಕಿಸ್ತಾನವು ಕೂಡ ಇದೇ ನಿಲುವನ್ನು ಇಟ್ಟುಕೊಂಡಿದೆ. ಪಾಕಿಸ್ತಾನದ ಭಾಷೆಯನ್ನು ಮಾತನಾಡುವ ‘ವಿದ್ವಾನ’ ಸಾಬಿತು ಪಡಿಸುವ ವಿಶ್ವವಿದ್ಯಾಲಯದ ಮೇಲೆ ಸರಕಾರ ಈಗಲಾದರೂ ನಿರ್ಬಂಧ ಹೇರುವುದೇ ? – ಸಂಪಾದಕರು)