ಬಂಗಾಲದ ಉತ್ತರ ೨೪ ಪರಗಣಾದಲ್ಲಿ ಭಾಜಪ ಕಛೇರಿಯ ಮೇಲೆ ಅಜ್ಞಾತರಿಂದ ನಾಡಬಾಂಬ್‌ನಿಂದ ದಾಳಿ

  • ತೃಣಮೂಲ ಕಾಂಗ್ರೆಸ್‌ನ ರಾಜ್ಯದಲ್ಲಿ ಬಂಗಾಲ ನಾಡಬಾಂಬ್‌ಗಳ ಕಾರ್ಖಾನೆಯಾಗಿದೆ ಹಾಗೂ ಅಲ್ಲಿ ಸಹಜವಾಗಿ ಉಪಯೋಗವಾಗುತ್ತಿದೆ; ಆದರೆ ಪೊಲೀಸರು ಇದರ ಬಗ್ಗೆ ನಿಷ್ಕ್ರಿಯರಾಗಿದ್ದಾರೆ !

  • ಭಾಜಪದ ಕಾರ್ಯಕರ್ತರ ಮೇಲೆ ಸತತ ದಾಳಿ ಆಗುತ್ತಿರುವುದನ್ನು ನೋಡಿದರೆ ಬಂಗಾಲದಲ್ಲಿ ತೃಣಮೂಲ ಕಾಂಂಗ್ರೆಸ್‌ನ ಸರಕಾರವನ್ನು ವಿಸರ್ಜಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ತರುವುದು ಅಗತ್ಯವಿತ್ತು; ಆದರೆ ಅದು ಇಲ್ಲಿಯವರೆಗೆ ಏಕೆ ಜಾರಿಯಾಗಲಿಲ್ಲ, ಎಂಬುದು ಜನತೆಗೆ ಉತ್ತರ ನೀಡಬೇಕು !

ಕೊಲಕಾತಾ (ಬಂಗಾಲ) – ಬಂಗಾಲದ ಉತ್ತರ ೨೪ ಪರಗಣಾ ಜಿಲ್ಲೆಯ ಜಗತದಲದಲ್ಲಿ ಜುಲೈ ೧೯ ರಂದು ಬೆಳಿಗ್ಗೆ ಭಾಜಪದ ಕಛೇರಿಯ ಮೇಲೆ ಅಜ್ಞಾತರು ನಾಡಬಾಂಬ್‌ನಿಂದ ದಾಳಿ ಮಾಡಿದ್ದಾರೆ. ಈ ಸಮಯದಲ್ಲಿ ಕಛೇರಿಯಲ್ಲಿ ಯಾರೂ ಉಪಸ್ಥಿತರಿರಲಿಲ್ಲ. ಆದ್ದರಿಂದ ಇಲ್ಲಿ ಯಾರಿಗೂ ಜೀವಹಾನಿಯಾಗಲಿಲ್ಲ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ. ಭಾಜಪದ ಶಾಸಕ ಅರ್ಜುನ ಸಿಂಹ ಇವರು, ‘ಈ ದಾಳಿಯು ತೃಣಮೂಲ ಕಾಂಗ್ರೆಸ್‌ನ ಗೂಂಡಾಗಳಿಂದ ಆಗಿದೆ’ ಎಂದು ಆರೋಪಿಸಿದ್ದಾರೆ. ಇನ್ನೊಂದೆಡೆ ತೃಣಮೂಲ ಕಾಂಗ್ರೆಸ್ ಈ ಆರೋಪವನ್ನು ತಳ್ಳಿ ಹಾಕಿದೆ.

ಭಾಜಪದ ಶಾಸಕ ಅರ್ಜುನ ಸಿಂಹ

ಈ ಘಟನೆಯ ಹಿಂದಿನ ದಿನ ಅಂದರೆ ಜುಲೈ ೧೮ ರಂದು ಇಲ್ಲಿಯ ಶಾಮನಗರದಲ್ಲಿ ಭಾಜಪದ ಸಭೆಯ ಮೊದಲು ಭಾಜಪದ ಕಾರ್ಯಕರ್ತರ ಮೇಲೆ ನಾಡಬಾಂಬ್‌ಅನ್ನು ಎಸೆಯಲಾಗಿತ್ತು. ಅದರಲ್ಲಿ ಭಾಜಪದ ೪ ಕಾರ್ಯಕರ್ತರು ಗಾಯಗೊಂಡಿದ್ದರು. ಈ ಸಭೆಯ ಸ್ಥಳದಲ್ಲಿ ಅರ್ಜುನ ಸಿಂಹ ಇವರೂ ಉಪಸ್ಥಿತರಿದ್ದರು. ಅವರು ‘ಇದರ ಹಿಂದೆ ತೃಣಮೂಲ ಕಾಂಗ್ರೆಸ್‌ನ ಕೈವಾಡ ಇದೆ’ ಎಂದು ಆರೋಪಿಸಿದ್ದರು.