ದರ್ಶನ ನಿಲ್ಲಿಸುವಂತೆ ಅರ್ಚಕರ ಬೇಡಿಕೆ ಆದರೆ ದರ್ಶನವನ್ನು ಮುಂದುವರೆಸಲು ದೇವಸ್ಥಾನ ಬೋರ್ಡ್‌ನ ನಿರ್ಣಯ
ಭಾಗ್ಯನಗರ – ವಿಶ್ವವಿಖ್ಯಾತ ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನದ ಅರ್ಚಕರು ಹಾಗೂ ಸಿಬ್ಬಂದಿಗಳು ಹೀಗೆ ೧೪೦ ಜನರಿಗೆ ಕೊರೋನಾದ ಸೋಂಕು ತಗಲಿದೆ. ಆದರೂ ದೇವಸ್ಥಾನ ಬೋರ್ಡ್‌ನ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿಯವರು ‘ದೇವಸ್ಥಾನದಲ್ಲಿ ದರ್ಶನವನ್ನು ನಿಲ್ಲಿಸುವ ಯಾವುದೇ ವಿಚಾರ ಇಲ್ಲ’, ಎಂದು ಸ್ಪಷ್ಟಪಡಿಸಿದ್ದಾರೆ. ಕೊರೋನಾದ ಹಾವಳಿ ಆಗಬಾರದು ಅದಕ್ಕಾಗಿ ೨೫ ಮಾರ್ಚ್ ೨೦೨೦ ರಿಂದ ೧೧ ಜೂನ್ ೨೦೨೦ ರ ವರೆಗೆ ದೇವಸ್ಥಾನವನ್ನು ಮುಚ್ಚುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದ್ದರಿಂದ ದೇವಸ್ಥಾನದ ದರ್ಶನವನ್ನು ಪುನಃ ನಿಲ್ಲಿಸುವಂತೆ ದೇವಸ್ಥಾನದ ಅರ್ಚಕ ರಮನಾ ದೀಕ್ಷಿತುಲು ಇವರು ಸರಕಾರದ ಬಳಿ ಬೇಡಿಕೆ ಮಾಡಿದ್ದಾರೆ.
140 #Tirupati Temple Staff Including Priests Test Covid Positive; #TTD Refuses To Stop Public Darshanshttps://t.co/ObU92hcNwv
— ABP News (@ABPNews) July 18, 2020
‘ಕೊರೋನಾ ಸೋಂಕು ಪತ್ತೆಯಾಗಿದ್ದವರ ಪೈಕಿ ೭೦ ಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ, ಅದರಲ್ಲಿ ಕೇವಲ ಒಬ್ಬ ರೋಗಿಯಲ್ಲಿ ಗಂಭೀರವಾದ ಲಕ್ಷಣಗಳು ಪತ್ತೆಯಾಗಿವೆ. ಅದಕ್ಕಾಗಿ ಮುಂಜಾಗರೂಕತೆಯ ಕ್ರಮವೆಂದು ಹಿರಿಯ ಅರ್ಚಕರನ್ನು ಮನೆಯಲ್ಲೇ ಉಳಿಯಲು ಹೇಳಿದ್ದಾರೆ’, ಎಂದು ಸುಬ್ಬಾರೆಡ್ಡಿಯವರು ತಿಳಿಸಿದ್ದಾರೆ.