ಶೋಪಿಯಾನಲ್ಲಿ ೩ ಭಯೋತ್ಪಾದಕರ ಹತ್ಯೆ, ಪೂಂಛನಲ್ಲಿ ಪಾಕಿಸ್ತಾನದ ಗುಂಡು ಹಾರಾಟದಲ್ಲಿ ೩ ನಾಗರಿಕರ ಸಾವು

ಪಾಕಿಸ್ತಾನ ಸೈನ್ಯದ ಈ ಕಪಟಿತನವನ್ನು ಶಾಶ್ವತವಾಗಿ ತಡೆಗಟ್ಟಲು ಅದನ್ನು ಸಂಪೂರ್ಣ ಸರ್ವನಾಶ ಮಾಡುವುದು ಅಗತ್ಯವಿದೆ !

ಶೋಪಿಯಾ(ಜಮ್ಮು-ಕಾಶ್ಮೀರ) – ಇಲ್ಲಿ ಜುಲೈ ೧೮ ರಂದು ಬೆಳಿಗ್ಗೆ ನಡೆದ ಚಕಮಕಿಯಲ್ಲಿ ಸೈನಿಕರು ೩ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ ಹಾಗೂ ಅವರಿಂದ ದೊಡ್ಡಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜುಲೈ ೧೭ ರಂದು ರಾತ್ರಿ ಕಾಶ್ಮೀರದ ಪೂಂಛನಲ್ಲಿ ಪಾಕಿಸ್ತಾನದ ಸೈನಿಕರು ಮಾಡಿದ ಗುಂಡು ಹಾರಾಟದಲ್ಲಿ ಭಾರತದ ಮಹಮದ ರಫೀಕ್, ಆತನ ಪತ್ನಿ ರಾಫಿಯಾ ಬಿ ಹಾಗೂ ೧೫ ವರ್ಷದ ಮಗ ಇರಫಾನ್ ಈ ಮೂರು ಜನರ ಹತ್ಯೆಯಾಗಿದೆ. ಪಾಕಿಸ್ತಾನದ ಸೈನ್ಯದ ಗುಂಡುಹಾರಾಟಕ್ಕೆ ಭಾರತೀಯ ಸೈನಿಕರು ಪ್ರತ್ಯುತ್ತರ ನೀಡಿದ್ದಾರೆ.