ರೇಲ್ವೆಯಿಂದ ಚೀನಾದ ಕಂಪನಿಗೆ ನೀಡಿದ್ದ ೪೭೧ ಕೋಟಿ ರೂಪಾಯಿಯ ಗುತ್ತಿಗೆ ರದ್ದು

ನವ ದೆಹಲಿ – ಭಾರತೀಯ ರೇಲ್ವೆಯು ಸಿಗ್ನಲ್ ಹಾಗೂ ದೂರಸಂಪರ್ಕ ಈ ಕೆಲಸಕ್ಕಾಗಿ ‘ಬೀಜಿಂಗ್ ನ್ಯಾಶನಲ್ ರೇಲ್ವೆ ರೀಸರ್ಚ್ ಆಂಡ್ ಡಿಸೈನಿಂಗ್ ಇನ್‌ಸ್ಟಿಟ್ಯೂಟ್ ಆಫ್ ಸಿಗ್ನಲ್ ಆಂಡ್ ಕಮ್ಯುನಿಕೇಶನ್’ ಈ ಚೀನಾದ ಕಂಪನಿಗೆ ನೀಡಿದ್ದ ೪೭೧ ಕೋಟಿ ರೂಪಾಯಿಯ ಗುತ್ತಿಗೆಯನ್ನು ರದ್ದು ಪಡಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಉತ್ತರಪ್ರದೇಶದ ಕಾನಪುರದಿಂದ ಮುಗಲಸರಾಯ ಈ ೪೧೮ ಕಿ.ಮೀ ಉದ್ದದ ಮಾರ್ಗದ ಮೇಲೆ ಈ ಕೆಲಸವಾಗುವುದಿತ್ತು.

‘ಇದನ್ನು ಈ ಸಂಸ್ಥೆಗೆ ೨೦೧೬ ರಂದು ನೀಡಲಾಗಿತ್ತು; ಆದರೆ ಅದು ೪ ವರ್ಷಗಳಲ್ಲಿ ಕೇವಲ ಶೇ. ೨೦ ರಷ್ಟು ಕೆಲಸವನ್ನು ಮಾಡಿದೆ. ನೀಡಿದ ಅವಧಿಯಲ್ಲಿ ಕೆಲಸವಾಗದೇ ಇದ್ದರಿಂದ ಈ ಸಂಸ್ಥೆಯನ್ನು ಹೊರದಬ್ಬಲಾಯಿತು’, ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.