ಇನ್ನು ಕೊರೋನಾದಿಂದ ಕೇವಲ ಭಗವಂತನೇ ಕಾಪಾಡಬಹುದು ! – ಆರೋಗ್ಯ ಸಚಿವ ಬಿ. ಶ್ರೀರಾಮುಲು

ಭಗವಂತನು ಕೇವಲ ಭಕ್ತರ, ಸಾಧಕರ ರಕ್ಷಣೆಯನ್ನು ಮಾಡುತ್ತಾರೆ, ಆದ್ದರಿಂದ ‘ಕೊರೋನಾದಂತಹ ವಿಪತ್ತಿನಲ್ಲಿ ದೇವರು ನಮಗೆ ಕಾಪಾಡಬೇಕು’, ಎಂದು ಯಾರಿಗಾದರು ನಿಜವಾಗಿಯೂ ಅನಿಸುತ್ತಿದ್ದರೆ, ಅವರು ಈಗಿನಿಂದಲೇ ಸಾಧನೆಗೆ, ಧರ್ಮಾಚರಣೆಗೆ ಹಾಗೂ ನೀತಿಯಿಂದ ನಡೆಯಲು ಆರಂಭಿಸಬೇಕು !

ಬಿ. ಶ್ರೀರಾಮುಲು

ಚಿತ್ರದುರ್ಗಾ – ಹೆಚ್ಚಾಗುತ್ತಿರುವ ಕೊರೋನಾದ ಹಾವಳಿಯಿಂದ ಇನ್ನು ಕೇವಲ ಭಗವಂತನೇ ಕಾಪಾಡಬಹುದು, ಎಂದು ಕರ್ನಾಟಕದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಇವರು ನುಡಿದಿದ್ದಾರೆ. ಅವರು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಸದ್ಯ ಕರ್ನಾಟಕದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಒಟ್ಟು ೪೭ ಸಾವಿರದ ೨೫೩ ರಷ್ಟಿದೆ. ಈ ಪೈಕಿ ೧೮ ಸಾವಿರದ ೪೬೬ ರೋಗಿಗಳು ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ರಾಜ್ಯದಲ್ಲಿ ಕೊರೋನಾದಿಂದಾಗಿ ೯೨೮ ಜನರು ಸಾವಿಗೀಡಾಗಿದ್ದಾರೆ.

ಬಿ. ಶ್ರೀರಾಮುಲು ತಮ್ಮ ಮತನ್ನು ಮುಂದುವರೆಸುತ್ತ, ‘ಜಗತ್ತಿನಾದ್ಯಂತ ಕೊರೋನಾದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದ ಎಲ್ಲರೂ ಜಾಗರೂಕತೆಯಿಂದ ಇರಬೇಕು. ಶಾಸಕರಾಗಿರಲಿ, ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ, ಈ ವಿಷಾಣು ಯಾವುದೇ ಭೇದಭಾವ ಮಾಡುವುದಿಲ್ಲ. ಇನ್ನು ೨ ತಿಂಗಳಲ್ಲಿ ರೋಗಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಶೇ. ೧೦೦ ರಷ್ಟಿದೆ ಎಂದು ಹೇಳಿದ್ದಾರೆ. ಸಚಿವರ, ಸರ್ಕಾರದ ನಿರ್ಲಕ್ಷ್ಯ ಅಥವಾ ಶಾಸಕರ ಹೊಂದಾಣಿಕೆ ಇಲ್ಲದೆ ಕೊರೊನಾ ಹೆಚ್ಚಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದ ಆರೋಪಗಳು ಎಂದರು. ವಸ್ತುಸ್ಥಿಯಿಂದ ದೂರ ಇದೆ. ಕೇವಲ ಭಗವಂತನೇ ನಮ್ಮನ್ನು ಈ ಕೊರೋನಾದಿಂದ ಕಾಪಾಡಬಹುದು’ ಎಂದು ಹೇಳಿದರು.