ಮಿರತ (ಉತ್ತರಪ್ರದೇಶ)ನಲ್ಲಿ ಮತಾಂಧರಿಂದ ದೇವಸ್ಥಾನದ ಅರ್ಚಕನ ಹತ್ಯೆ

ಸಾಧುಗಳ ಹತ್ಯೆ ಮಾಡಿದ ಮತಾಂಧನ ಮೇಲಿನ ಖಟ್ಲೆಯನ್ನು ತ್ವರಿತಗತಿ ನ್ಯಾಯಾಲಯದಲ್ಲಿ ನಡೆಸಿ !

ಇದು ಸಾಧುಗಳ ಮೇಲಲ್ಲ, ಕೇಸರಿಯ ಮೇಲೆ ಹಾಗೂ ಹಿಂದೂ ಧರ್ಮದ ಮೇಲಿನ ಹಲ್ಲೆ ! – ಹಿಂದೂ ಜನಜಾಗೃತಿ ಸಮಿತಿ

ಅರ್ಚಕ ಕಾಂತಿ ಪ್ರಸಾದ

ಅಬ್ದುಲಾಪುರ ಬಾಜಾರ (ಮಿರತ, ಉತ್ತರ ಪ್ರದೇಶ) – ಇಲ್ಲಿಯ ಒಂದು ಶಿವ ದೇವಸ್ಥಾನದ ಕಮಿಟಿಯ ಉಪಾಧ್ಯಕ್ಷ ಹಾಗೂ ಅರ್ಚಕರೆಂದು ಕಾರ್ಯ ಮಾಡುವ ಕಾಂತಿ ಪ್ರಸಾದ ಈ ಸಾಧುವನ್ನು ಮತಾಂಧ ಮುಸಲ್ಮಾನ ಯುವಕರು ಹಾಡುಹಗಲೇ ಹತ್ಯೆ ಮಾಡಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಈ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತದೆ. ಸಾಧು ಕಾಂತಿ ಪ್ರಸಾದ ಇವರು ಕೇಸರಿ ವಸ್ತ್ರವನ್ನು ಹಾಕಿಕೊಂಡಿದ್ದರೆಂದು ಅನಸ ಕುರೈಶಿ ಈ ಮತಾಂಧನು ಅವರನ್ನು ನಿಂದಿಸಿದನು ಹಾಗೂ ಇದನ್ನು ವಿರೋಧಿಸಿದ್ದರಿಂದ ಮತಾಂಧನು ಹಿಗ್ಗಾಮುಗ್ಗಾ ಥಳಿಸುತ್ತಾ ಆ ಸಾಧುವಿನ ಹತ್ಯೆ ಮಾಡಿದನು. ಇದರಿಂದ ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಕೇಸರಿ ವಸ್ತ್ರ ಹಾಕುವವರನ್ನು ಗುರಿಯಾಗಿಸುತ್ತಿದ್ದಾರೆ, ಎಂಬುದು ಗಮನಕ್ಕೆ ಬರುತ್ತದೆ. ಇದು ಸಾಧುವಿನ ಮೇಲಿನ ಹಲ್ಲೆಯಾಗಿರದೇ ಕೇಸರಿಯ ಮೇಲಿನ ದಾಳಿಯಾಗಿದೆ, ಹಿಂದೂ ಧರ್ಮದ ಮೇಲಿನ ಹಲ್ಲೆಯಾಗಿದೆ, ಎಂದು ನಾವು ತಿಳಿದಿದ್ದೇವೆ. ಇದರಿಂದ ಮತಾಂಧರ ಹಿಂದೂದ್ವೇಷ ಹಾಗೂ ಕೇಸರಿ ದ್ವೇಷ ಕಾಣಿಸುತ್ತದೆ. ಅನಸ ಕುರೈಶಿಯನ್ನು ಬಂಧಿಸಿದ್ದರೂ ಆತನ ಮೇಲಿನ ಖಟ್ಲೆಯನ್ನು ತ್ವರಿತಗತಿ (ಫಾಸ್ಟ್ ಟ್ರ್ಯಾಕ್) ನ್ಯಾಯಾಲಯದಲ್ಲಿ ನಡೆಸಿ ಅವನಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಈ ಘಟನೆಯ ಹಿಂದೆ ಕೋಮುಭಾವನೆಯನ್ನು ಕೆರಳಿಸುವ ಸಂಚು ಇಲ್ಲವಲ್ಲ ಎಂಬುದನ್ನು ಪತ್ತೆ ಹಚ್ಚಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಆಗ್ರಹಿಸಿದ್ದಾರೆ.

ಮೊದಲಿಗೆ ಪಾಲ್ಘರ್, ಬುಲಂದಶಹರ್, ನಾಂದೇಡ್ ಮತ್ತು ಈಗ ಮೀರತ್‌ನಲ್ಲಿ ಸನ್ಯಾಸಿಗಳ ಹತ್ಯಾ ಸರಣಿ ನಡೆಯುತ್ತಲೇ ಇದೆ. ಈ ಘಟನೆಗಳಿಂದ ಹಿಂದೂ ಸಮಾಜದಲ್ಲಿ ಆಕ್ರೋಶದ ಭಾವನೆ ಇದೆ. ಒಂದುವೇಳೆ ಈ ಘಟನೆ ಮುಸಲ್ಮಾನರ ಅಥವಾ ಇನ್ನೊಂದು ಸಮುದಾಯದ ವ್ಯಕ್ತಿಯ ವಿಷಯದಲ್ಲಿ ಸಂಭವಿಸಿದ್ದರೆ, ಜಾತ್ಯತೀತವಾದಿಗಳು ‘ಮಾಬ್ ಲಿಂಚಿಂಗ್’ ಹೇಳುತ್ತಾ ದೇಶದಲ್ಲಿ ಅಲ್ಲೋಲಕಲ್ಲೋಲ ಮಾಡಿ ಹಿಂದುತ್ವವನ್ನು ದೂಷಿಸುತ್ತಿದ್ದರು; ಆದರೆ ಮೃತಪಟ್ಟವರು ಹಿಂದೂ ಸಾಧು ಮತ್ತು ಹಂತಕ ಮುಸಲ್ಮಾನನಾಗಿದ್ದಾನೆ. ಆದ್ದರಿಂದ ಯಾವುದೇ ಪ್ರಗತಿಪರ ನಾಯಕನು ಖಂಡಿಸಿಲ್ಲ. ಇದು ಭಾರತದಲ್ಲಿ ಜಾತ್ಯತೀತತೆಯ ಸೋಲಾಗಿದೆ. ಉತ್ತರ ಪ್ರದೇಶದ ಮಾನ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಸಾಧುಗಳ ಹತ್ಯೆಯ ಮೂಲವನ್ನು ಪತ್ತೆ ಹಚ್ಚಿ ಹಿಂದೂಗಳಿಗೆ ನ್ಯಾಯ ನೀಡುತ್ತಾರೆ ಎಂದು ನಾವು ಆಶಿಸುತ್ತೇವೆ ಎಂದೂ ಶ್ರೀ. ಶಿಂದೆಯವರು ಹೇಳಿದ್ದಾರೆ.