‘ಜನವರಿ ೨೦೨೦ ರಲ್ಲಿ ಚೀನಾದಲ್ಲಿ ಸಾವಿರಾರು ಜನರಿಗೆ ಕೊರೋನಾ ವಿಷಾಣುವಿನ (ಕೊರೋನಾ ರೋಗದ) ಸೋಂಕಾಗಿರುವುದು ಗಮನಕ್ಕೆ ಬಂದಿತು. ಆಗ ‘ಕೊರೋನಾ ವಿಷಾಣು ಎಲ್ಲಿ ಉತ್ಪನ್ನವಾಯಿತು ?’, ಎಂಬುದು ಯಾರಿಗೂ ಗೊತ್ತಿರಲಿಲ್ಲ. ‘ಕೊರೋನಾ ವಿಷಾಣುಗಳಿಂದಾಗುವ ಪರಿಣಾಮಗಳು ಯಾವವು ? ಅದರಿಂದ ಜನರ ಜೀವನದ ಮೇಲೆ ಏನು ಪರಿಣಾಮವಾಗಬಹುದು ?’, ಇದರ ಬಗ್ಗೆ ಯಾರ ಅಧ್ಯಯನವೂ ಆಗಿರಲಿಲ್ಲ. ಇಂತಹ ಈ ಕೊರೋನಾ ವಿಷಾಣು ಕೇವಲ ಚೀನಾದಲ್ಲಿಯೇ ಅಲ್ಲ, ಜಗತ್ತಿನ ಪ್ರತಿಯೊಂದು ದೇಶದಲ್ಲಿಯೂ ಕೋಲಾಹಲವೆಬ್ಬಿಸಿದೆ. ಮಾನವ ಜೀವನ ಧ್ವಂಸವಾಗಿದೆ. ಅರ್ಥವ್ಯವಸ್ಥೆಯು ನೆಲಕಚ್ಚಿದೆ. ಈಗ ಜನರು ಕೇವಲ ತಮ್ಮ ಜೀವವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ‘ಇದು ಹೀಗೇಕಾಯಿತು ? ಅದರ ಹಿಂದಿನ ನಿಜವಾದ ಕಾರಣವೇನು ?’, ಇದರ ವಿಶ್ಲೇಷಣೆಯನ್ನು ಮಾಡಬೇಕು’, ಎಂದು ಈಶ್ವರನು ನನಗೆ ಸೂಚಿಸಿದನು. ಈಶ್ವರನು ನನಗೆ ಸೂಚಿಸಿದ ವಿಚಾರಗಳನ್ನು ಮುಂದೆ ನೀಡಲಾಗಿದೆ.
೧. ನಿಷಿದ್ಧವಾಗಿರುವ ‘ಪಶು-ಪಕ್ಷಿಗಳ ಮಾಂಸವನ್ನು ತಿನ್ನಬಾರದು’, ಎಂಬುದು ತಿಳಿದಿದ್ದರೂ ಚೀನಾವು ನಿಸರ್ಗನಿಯಮವನ್ನು ಮುರಿದು ಎಲ್ಲ ಪ್ರಾಣಿಗಳ ಮಾಂಸವನ್ನು ತಿಂದು ನಿಸರ್ಗದ ಮೇಲೆ ಅನ್ಯಾಯ ಮಾಡುವುದು
‘ಚೀನಾದಲ್ಲಿ ೧೪೪ ವಿಧದ ಪ್ರಾಣಿಗಳ ಮಾಂಸವನ್ನು ತಿನ್ನಲಾಗುತ್ತದೆ, ಎಂದು ಹೇಳಲಾಗುತ್ತದೆ. ಅಲ್ಲಿ ಬೇಡಿಕೆ ಇರುವಷ್ಟು ಪ್ರಮಾಣದಲ್ಲಿ ಬೆಳೆ ಬರುವುದಿಲ್ಲವೋ ಅಥವಾ ಚೀನಾ ಬೆಳೆಸುವುದಿಲ್ಲವೋ ?’, ಎಂಬುದು ತಿಳಿಯಲು ಸಾಧ್ಯವಿಲ್ಲ. ‘ಚೀನಾದಲ್ಲಿನ ಜನರು ಎಲ್ಲ ಪ್ರಾಣಿಗಳ ಮಾಂಸವನ್ನು ತಿನ್ನುತ್ತಾರೆ ಮತ್ತು ಇದು ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ. ‘ಯಾವುದೇ ಪ್ರಾಣಿಯಿರಲಿ, ಅದರಲ್ಲಿ ಜೀವಜಂತುಗಳಿರುತ್ತವೆ’, ಇದು ತಿಳಿದಿದ್ದರೂ ಚೀನಾವು ಅದನ್ನು ಸ್ವೀಕರಿಸಿದೆ. ‘ಕೆಲವು ಪಶುಪಕ್ಷಿಗಳು ಮತ್ತು ಪ್ರಾಣಿಗಳ ಮಾಂಸವನ್ನು ಸೇವಿಸಬಾರದು, ಅವು ನಿಷಿದ್ಧವಾಗಿವೆ’, ಎಂಬುದು ತಿಳಿದಿದ್ದರೂ ಚೀನಾ ನಿಸರ್ಗನಿಯಮವನ್ನು ಕಡೆಗಣಿಸಿ ನಿಸರ್ಗದ ಮೇಲೆ ಅನ್ಯಾಯ ಮಾಡಿದೆ.
೨. ಈಶ್ವರನು ನಿರ್ಮಿಸಿದ ಪಶು-ಪಕ್ಷಿಗಳನ್ನು ಕೊಂದು ತಿಂದು ಚೀನಾ ದೊಡ್ಡ ಪಾಪವನ್ನು ಮಾಡುತ್ತಿದೆ
ದೇವರು ನಿರ್ಮಾಣ ಮಾಡಿರುವ ಈ ಪ್ರಾಣಿಗಳನ್ನು ತಿನ್ನುವ ಸಾಹಸವನ್ನು ಚೀನಾದ ಜನರು ಮಾಡಿದ್ದಾರೆ. ಅವುಗಳನ್ನು ಮಾರಾಟ ಮಾಡುವ ಅನೇಕ ಅಂಗಡಿಗಳನ್ನು ತೆರೆಯಲಾಗಿದೆ. ಈ ಅಂಗಡಿಗಳಲ್ಲಿ ಎಲ್ಲ ಪಶುಪಕ್ಷಿಗಳ ಮಾಂಸ ಸಿಗುತ್ತದೆ. ‘ಅವುಗಳಲ್ಲಿ ಜೀವಜಂತುಗಳಿರುವುದರಿಂದ ಅವುಗಳಿಂದ ಮಾನವನಿಗೆ ತೊಂದರೆಯಾಗಬಹುದು’, ಎಂಬುದು ಪ್ರಗತಿಶೀಲ ಚೀನಾಗೆ ತಿಳಿದಿದ್ದರೂ ನಾಲಿಗೆ ಚಪಲತೆಗಾಗಿ ದೇವರು ನಿರ್ಮಿಸಿದ ಪ್ರಾಣಿಗಳ ಮತ್ತು ಪಕ್ಷಿಗಳನ್ನು ಚೀನಾ ಹತ್ಯೆಯನ್ನು ಮಾಡುತ್ತಿದೆ. ಅವುಗಳ ಉಪಯೋಗವನ್ನು ತಮ್ಮ ಆಹಾರಕ್ಕಾಗಿ ಮಾಡಿ ಅವುಗಳನ್ನು ನಾಶ ಮಾಡುತ್ತಿದೆ. ಅವರು ದೊಡ್ಡ ಪಾಪವನ್ನು ಮಾಡುತ್ತಿದ್ದಾರೆ ಎಂಬುದು ಚೀನಾಗೆ ಇದುವರೆಗೆ ತಿಳಿದಿಲ್ಲ.
೩. ಒಬ್ಬ ವ್ಯಕ್ತಿಯು ಒಂದು ಪಕ್ಷಿಯನ್ನು ಕೊಂದು ಅದರಿಂದ ಸೂಪ್ ಮಾಡಿ ಕುಡಿದ ನಂತರ ಅವನ ಶರೀರದಲ್ಲಿ ಕೊರೋನಾದ ವಿಷಾಣುಗಳ ಜನ್ಮವಾಯಿತು ಹಾಗೂ ಈ ವಿಷಾಣು ಅಲ್ಪಾವಧಿಯಲ್ಲಿ ಚೀನಾದಲ್ಲಿನ ಅನೇಕ ಜನರನ್ನು ಬಲಿ ಪಡೆಯಿತು
ಪಶು-ಪಕ್ಷಿಗಳಿಗೆ ಮತ್ತು ಪ್ರಾಣಿಗಳಿಗೆ ಯಾರು ಜನ್ಮ ಕೊಟ್ಟಿದ್ದಾರೆ ? ಚೀನಾ ಕೊಟ್ಟಿದೆಯೆ ? ಖಂಡಿತ ಇಲ್ಲ. ಆದ್ದರಿಂದ ಚೀನಾಕ್ಕೆ ಅವುಗಳನ್ನು ಕೊಲ್ಲುವ ಅಧಿಕಾರವೂ ಇಲ್ಲ; ತಮ್ಮ ನಾಲಿಗೆಯ ಚಪಲತೆಯನ್ನು ತೃಪ್ತಿ ಪಡಿಸಲು ‘ಇದು ನನ್ನ ಜನ್ಮಸಿದ್ಧ ಹಕ್ಕಾಗಿದೆ ಎಂದು ತಿಳಿದು ಚೀನಾ ಪ್ರಾಣಿಗಳನ್ನು ಕೊಲ್ಲುತ್ತಿದೆ. ಅವುಗಳಲ್ಲಿನ ಒಂದು ಪಕ್ಷಿಯನ್ನು ಕೊಂದು ಅದರ ಸೂಪ್ ಕುಡಿದ ನಂತರ ಒಬ್ಬ ವ್ಯಕ್ತಿಯ ಶರೀರದಲ್ಲಿ ಕೊರೋನಾ ವಿಷಾಣುಗಳ ಜನ್ಮವಾಯಿತು, ಎಂದು ಹೇಳಲಾಗುತ್ತದೆ. ಈ ವಿಷಾಣು ಮನುಕುಲದ ಸೇಡುತೀರಿಸಲು ಪ್ರಾರಂಭಿಸಿತು. ಕಣ್ಣುಗಳಿಗೆ ಕಾಣಿಸದಿರುವ ಈ ‘ವಿಷಾಣು’ ಶಕ್ತಿಶಾಲಿಯಾಗಿದ್ದು ಅದರ ಸೋಂಕಿನಿಂದ ಅಲ್ಪಾವಧಿಯಲ್ಲಿ ಚೀನಾದಲ್ಲಿನ ಅನೇಕ ಜನರನ್ನು ಬಲಿತೆಗೆದುಕೊಂಡಿತು.
೪. ಈಶ್ವರನ ನ್ಯಾಯಕ್ಕನುಸಾರ ಚೀನಾದಲ್ಲಿ ಕೊರೋನಾ ವಿಷಾಣು ನಿರ್ಮಾಣವಾಗುವುದು ಮತ್ತು ಆ ವಿಷಾಣುಗಳು ಜಗತ್ತಿನಾದ್ಯಂತ ಹರಡುವುದು
ಎಷ್ಟು ವರ್ಷಗಳವರೆಗೆ ನಾವು ಹೀಗೆ ಅನ್ಯಾಯ ಮಾಡುತ್ತಿರಬಹುದು ? ಈಶ್ವರನು ಎಲ್ಲವನ್ನೂ ನೋಡುತ್ತಿರುತ್ತಾನೆ, ಅವನು ನ್ಯಾಯ ಕೊಡುತ್ತಾನೆ. ಆದ್ದರಿಂದ ಅದರ ಆರಂಭ ಚೀನಾದಲ್ಲಿ ಕೊರೋನಾ ವಿಷಾಣುವಿನ ನಿರ್ಮಾಣದಿಂದ ಆಯಿತು. ಅದರ ಭೋಗವನ್ನು ಈಗ ಚೀನಾದ ಜನರು ಭೋಗಿಸುತ್ತಿದ್ದಾರೆ. ಚೀನಾಕ್ಕೆ ‘ಡ್ರ್ಯಾಗನ್’ ಎಂದು ಹೇಳುತ್ತಾರೆ. ‘ಡ್ರ್ಯಾಗನ್’ ಅಂದರೆ ತಿರುಗಿಬೀಳುವ, ಉಪಕಾರದ ಅರಿವನ್ನು ಇಟ್ಟುಕೊಳ್ಳದಿರುವ, ಧೂರ್ತ, ಕಪಟಿ ಮತ್ತು ಸ್ವಾರ್ಥಕ್ಕಾಗಿ ಇತರರ ಜೀವವನ್ನು ತೆಗೆದುಕೊಳ್ಳುವ ಪ್ರಾಣಿ !
ಅದು ಯಾವಾಗಲೂ ಭುಸಗುಟ್ಟಲು ಸಿದ್ಧವಿರುತ್ತದೆ. ಚೀನಾ ತನ್ನ ದೇಶದಲ್ಲಿ ಈ ಕೊರೋನಾ ವಿಷಾಣುಗಳ ನಾಟಿ ಮಾಡಿ ಅದನ್ನು ಎಲ್ಲ ದೇಶಗಳಲ್ಲಿ ತನ್ನ ಜನರ ಮೂಲಕ ಉಚಿತವಾಗಿ ಹರಡಿತು. ಅವರ ದೇಶದ ಪ್ರತಿನಿಧಿಗಳು ಯಾವುದಾದರೊಂದು ಕಾರಣವನ್ನು ಮಾಡಿ ಜಗತ್ತಿನಲ್ಲಿನ ಅನೇಕ ದೇಶಗಳಿಗೆ ಕೊರೋನಾ ವಿಷಾಣುಗಳನ್ನು ತೆಗೆದುಕೊಂಡು ಹೋದರು ಮತ್ತು ನೋಡನೋಡುತ್ತಿದ್ದಂತೆ ಜಗತ್ತಿನಾದ್ಯಂತ ಕೊರೋನಾ ವಿಷಾಣುಗಳು ತಲಪಿದವು ಹಾಗೂ ದೊಡ್ಡ ಸಂಕಟ ನಿರ್ಮಾಣವಾಯಿತು.
೫. ವಿಜ್ಞಾನವಾದಿಗಳು ಮತ್ತು ಪ್ರಗತಿಶೀಲವಾಗಿರುವ ದೇಶಗಳಲ್ಲಿನ ಸಾವಿರಾರು ಜನರಿಗೆ ಕೊರೋನಾದಿಂದ ಪ್ರಾಣವನ್ನು ಕಳೆದುಕೊಳ್ಳಬೇಕಾಗುವುದು ಹಾಗೂ ಅಲ್ಲಿ ಸಾಧನೆಯ ಮಹತ್ವವನ್ನು ಹೇಳುವವರು ಯಾರೂ ಇಲ್ಲದಿರುವುದರಿಂದ ಅವರ ಹಾನಿಯಾಗುವುದು
ನಿಜ ಹೇಳಬೇಕೆಂದರೆ ಈ ಸಂಕಟವನ್ನು ಎದುರಿಸಲು ಆಧ್ಯಾತ್ಮಿಕ ಶಕ್ತಿ ಬೇಕಾಗುತ್ತದೆ ! ಇದು ಕೂಡ ಕೆಲವು ಕಾರಣಗಳಿಂದ ಖಾತ್ರಿಯಾಗಿದೆ. ಅಮೇರಿಕಾ, ಇಟಲಿ, ಜರ್ಮನಿ, ಫ್ರಾನ್ಸ್, ಸ್ಪೇನ್ ಮತ್ತು ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಕೊರೋನಾದಿಂದ ಭಯಾನಕ ಸ್ಥಿತಿ ನಿರ್ಮಾಣವಾಗಿದೆ. ಅದರಿಂದ ಪ್ರತಿದಿನ ಸಾವಿರಾರು ಜನರು ಇರುವೆಗಳಂತೆ ಸಾಯುತ್ತಿದ್ದಾರೆ. ಈ ಪ್ರಗತಿಪರ ದೇಶಗಳಿಗೆ ತಮ್ಮ ನಾಗರಿಕರ ಮತ್ತು ದೇಶಬಾಂಧವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಅತ್ಯಾಧುನಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ, ವಿಜ್ಞಾನದ ಡಂಗುರ ಸಾರುವ ಮತ್ತು ‘ನಾವು ವಿಜ್ಞಾನದಲ್ಲಿ ಎಲ್ಲರಿಗಿಂತ ಪ್ರಗತಿಶೀಲರಾಗಿದ್ದೇವೆ’, ಎಂದು ಜಗತ್ತಿಗೆ ಬೊಬ್ಬೆ ಹೊಡೆದು ಹೇಳುವ ಅಮೇರಿಕಾಗೆ ಮತ್ತು ಇತರ ದೇಶಗಳಿಗೆ ಈ ಕೊರೋನಾವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ, ಇದು ಸತ್ಯವಾಗಿದೆ. ಇದಕ್ಕೆ ಏನು ಕಾರಣವಿರಬಹುದು ?
ಇದಕ್ಕೆ ಕಾರಣವೆಂದರೆ ಈಶ್ವರನ ಬಗೆಗಿನ ಭಾವ ಮತ್ತು ಚಿಂತನೆ ಅವರಲ್ಲಿಲ್ಲ. ಪಾಶ್ಚಾತ್ಯರು ಭೋಗದ ಮೇಲೆ ವಿಶ್ವಾಸವಿಡುವವರಾಗಿರುವುದರಿಂದ ಅವರು ಅನೀತಿ ಮತ್ತು ವ್ಯಭಿಚಾರವನ್ನು ಮಾಡಿದರು. ಈಶ್ವರ ಮತ್ತು ಸಾಧನೆ ಇವು ತುಂಬಾ ದೂರ ಉಳಿದವು. ಅವರಿಗೆ ಈ ವಿಷಯ ವನ್ನು ಹೇಳುವವರು ಕೂಡ ಯಾರೂ ಉಳಿದಿಲ್ಲ ಮತ್ತು ಅವರು ಅದನ್ನು ಹೇಳಿದರೂ ಕೇಳುತ್ತಿರಲಿಲ್ಲ. ಒಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ವಿಜ್ಞಾನವನ್ನು ಪೂಜಿಸುವ ಈ ಎಲ್ಲ ದೇಶಗಳು ಇಂದು ತಮ್ಮ ಹಾನಿಯನ್ನು ಮಾಡಿಕೊಳ್ಳುತ್ತಿವೆ. ಅವರಿಗೆ ಕೊರೋನಾ ರೋಗವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ; ಏಕೆಂದರೆ ಆ ರಾಷ್ಟ್ರಗಳಿಗೆ ಸಾಧನೆಯ ಮಹತ್ವ ತಿಳಿದಿಲ್ಲ. ಅಲ್ಲಿ ಈಶ್ವರನ ಸಗುಣ ರೂಪವಾಗಿರುವ ಗುರುಗಳಿಲ್ಲ. ‘ಒಂದು ದಿನ ಕೊರೋನಾವು ಈಶ್ವರನ ಕೋಪವಾಗಿದೆ’, ಎಂದು ಅರಿವಾಗದೇ ಇರಲಾರದು.
೬. ಪಾಶ್ಚಾತ್ಯರು ಪೂಜನೀಯ ಹಸುವನ್ನು ನಿರ್ದಯವಾಗಿ ಕೊಂದು ಪಾಪವನ್ನು ಮಾಡುತ್ತಿದ್ದಾರೆ
‘ಹೇಗೆ ಬದುಕಬೇಕು ?’, ಎಂಬುದು ತಿಳಿಯದ ಪಾಶ್ಚಾತ್ಯರು ಹಸುವನ್ನು ಕೂಡ ಬಿಟ್ಟಿಲ್ಲ. ಹಸು ತಿನ್ನುವ ವಸ್ತುವಾಗಿದೆಯೇ ? ಇವರು ಎಷ್ಟು ದೊಡ್ಡ ಪಾಪವನ್ನು ಮಾಡುತ್ತಿದ್ದಾರೆ ? ಈ ಪಾಪದ ಫಲವನ್ನು ಈ ರಾಷ್ಟ್ರಗಳು ಭೋಗಿಸುತ್ತಿವೆ’, ಎಂದು ಹೇಳಿದರೆ ಅಯೋಗ್ಯವಾಗಲಾರದು.
೭. ಈಶ್ವರನನ್ನು ನಂಬದೇ ತಾವೇ ಸೃಷ್ಟಿಕರ್ತರೆಂದು ತಿಳಿದುಕೊಂಡಿರುವುದರಿಂದ ಮಾನವರು ಮಾಡಿದ ತಪ್ಪುಗಳ ಫಲವನ್ನು ಎಲ್ಲ ರಾಷ್ಟ್ರಗಳು ಅನುಭವಿಸುತ್ತಿವೆ
‘ನಾನು ಯಾರು ? ಎಲ್ಲಿಂದ ಬಂದಿದ್ದೇನೆ ? ಎಲ್ಲಿಗೆ ಹೋಗಬೇಕಾಗಿದೆ ?’, ಎಂಬುದರ ವಿಚಾರ ಮಾಡದೇ ಮತ್ತು ಅನಂತಕೋಟಿ ಬ್ರಹ್ಮಾಂಡದ ನಾಯಕ ಈಶ್ವರನನ್ನು ನಂಬದೇ ಎಲ್ಲವನ್ನೂ ‘ನಾವೇ ನಿರ್ಮಾಣ ಮಾಡಿದ್ದೇವೆ’, ಎನ್ನುವ ಭ್ರಮೆಯಲ್ಲಿದ್ದು ‘ನಾವು ಏನು ಬೇಕಾದರೂ ಮಾಡಬಹುದು’, ಎಂದು ತೋರಿಸಲು ಮಾನವನು ಮಾಡಿದ ಈ ತಪ್ಪಿನ ಫಲವನ್ನು ಇಂದು ಎಲ್ಲ ರಾಷ್ಟ್ರಗಳು ಭೋಗಿಸುತ್ತಿವೆ.
೮. ಸಂತರು ಹೇಳಿದಂತೆ ಆಪತ್ಕಾಲ ಆರಂಭವಾಗಿದೆ
ತಮೋಗುಣ ಹೆಚ್ಚಾಗಿರುವುದರಿಂದ ಆಪತ್ಕಾಲ ಪ್ರಾರಂಭವಾಗಿದೆ. ಇದು ಕೇವಲ ಒಂದು ತುಣುಕು ಮಾತ್ರ ! ‘ಇಂತಹ ಅನೇಕ ರೋಗಗಳು ಮತ್ತು ಆಪತ್ತುಗಳು ಭವಿಷ್ಯದಲ್ಲಿ ಬರಲಿವೆ’, ಎಂದು ಅನೇಕ ಮಹಾತ್ಮರು ಹೇಳಿದ್ದಾರೆ. ‘ಯಾವಾಗ ಈ ಪೃಥ್ವಿಯ ಮೇಲೆ ದೌರ್ಜನ್ಯ, ಅನ್ಯಾಯ, ಭ್ರಷ್ಟಾಚಾರ ಮತ್ತು ವ್ಯಭಿಚಾರವಾಗುತ್ತದೆಯೋ, ಆಗ ಈಶ್ವರನಿಗೆ ಈ ತಾಮಸಿಕ ವಿಷಯಗಳನ್ನು ನಾಶ ಮಾಡಲು ಆಪತ್ಕಾಲವನ್ನು ನಿರ್ಮಾಣ ಮಾಡಬೇಕಾಗುತ್ತದೆ’, ಇದು ಅದರ ಹಿಂದಿನ ಸತ್ಯವಾಗಿದೆ. ಯಾವಾಗ ತಾಮಸಿಕದ ಸ್ಥಾನವನ್ನು ಸಾತ್ತ್ವಿಕತೆ ತೆಗೆದುಕೊಳ್ಳುತ್ತದೆಯೋ, ಆಗ ಅದು ಈಶ್ವರೀ ರಾಜ್ಯದ ಸ್ಥಾಪನೆಯ ದಿನವಾಗುವುದು.
೯. ಸಂತರ ಶಕ್ತಿಗೆ ಸವಾಲೊಡ್ಡುವ ಬುದ್ಧಿಜೀವಿಗಳು ಯೋಗ್ಯ ಉತ್ತರ ನೀಡುವ ಸಮಯ ಬಂದಿದೆ
ಭಾರತದ ಸ್ಥಿತಿಯನ್ನು ನೋಡಿದರೆ, ಭಾರತವು ಈ ಭೂಲೋಕದಲ್ಲಿ ಪ್ರಥಮ ಸ್ಥಾನದಲ್ಲಿರುವ ದೇಶವಾಗಿದೆ ! ಈ ದೇಶದಲ್ಲಿ ಅನೇಕ ಸಂತರು ಕಾರ್ಯನಿರತರಾಗಿದ್ದಾರೆ. ಅವರು ವಿವಿಧ ಮಾರ್ಗಗಳಿಂದ ಸಾಧನೆಯನ್ನು ಮಾಡುತ್ತಿದ್ದಾರೆ. ಸಾತ್ತ್ವಿಕತೆಯನ್ನು ಹರಡುತ್ತಿದ್ದಾರೆ ಹಾಗೂ ರಾಷ್ಟ್ರಕ್ಕೆ ಶಕ್ತಿಯನ್ನು ಪೂರೈಸುತ್ತಿದ್ದಾರೆ. ಇಂತಹ ಸಮಯದಲ್ಲಿ ಬುದ್ಧಿಜೀವಿಗಳು, “ಶಕ್ತಿ ಕಾಣಿಸುವುದಿಲ್ಲವಲ್ಲ, ನಮಗೆ ಆ ಶಕ್ತಿಯನ್ನು ತೋರಿಸಿರಿ” ಎಂದು ಹೇಳಬಹುದು, ಇಂತವರಿಗೆ ನಾವು ಮೊದಲು ನೀವು “ಗಾಳಿಯನ್ನು ತೋರಿಸಿರಿ !” ಎಂದು ಹೇಳಬೇಕಾಗುತ್ತದೆ.
೧೦. ನಿಸರ್ಗದೊಂದಿಗೆ, ಅಂದರೆ ಭಗವಂತನೊಂದಿಗೆ ಹೋರಾಡದೇ ರಾಷ್ಟ್ರಗಳು ಸಾಧನೆ ಅಂಗೀಕರಿಸಬೇಕು
ರಾಷ್ಟ್ರಗಳು ಸೃಷ್ಟಿಕರ್ತ ಭಗವಂತನೊಂದಿಗೆ ಹೋರಾಡಬಾರದು; ಏಕೆಂದರೆ ಸೃಷ್ಟಿಕರ್ತನ ಶಕ್ತಿಯು ಪ್ರಚಂಡವಾಗಿದೆ. ಈ ಎಲ್ಲ ವಿಜ್ಞಾನವಾದಿ ದೇಶಗಳು ಇದರ ಅರಿವನ್ನು ಇಟ್ಟುಕೊಳ್ಳಬೇಕು. ‘ನಾನು ಏತಕ್ಕಾಗಿ ಬಂದಿದ್ದೇನೆ ? ನನ್ನ ಜನ್ಮದ ಉದ್ದೇಶವೇನು ? ನನಗೆ ಎಲ್ಲಿಗೆ ಹೋಗಬೇಕಾಗಿದೆ ?’, ಇದನ್ನು ಕಲಿಸುವ ಆಧ್ಯಾತ್ಮಿಕ ಗುರು ಆಗಿರುವ ಭಾರತದ ಸಹಾಯವನ್ನು ಪಡೆಯಬೇಕು. ಸಾಧನೆಯನ್ನು ಕಲಿಸಲು ಸನಾತನ ಸಂಸ್ಥೆ ಯಾವಾಗಲೂ ಸಿದ್ಧವಿದೆ; ಏಕೆಂದರೆ ‘ವಿದೇಶದಲ್ಲಿನ ಕೆಲವರು ಕಾಲದ ಗತಿಯನ್ನು ಗುರುತಿಸಿ ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡುತ್ತಿದ್ದಾರೆ ಹಾಗೂ ಅವರು ತಮ್ಮ ಪ್ರಗತಿಯನ್ನೂ ಮಾಡಿಕೊಳ್ಳುತ್ತಿದ್ದಾರೆ’, ಇದರ ಅರಿವನ್ನು ಈ ವಿಜ್ಞಾನವಾದಿ ದೇಶಗಳು ಇಟ್ಟುಕೊಳ್ಳಬೇಕು. ಬಾಂಧವರೆ, ಪ್ರಜ್ಞಾವಂತರಾಗಿ ! ಸಾಧನೆ ಮಾಡಿದರೆ ಮಾತ್ರ ಮುಂಬರುವ ಕಾಲದಲ್ಲಿ ನಾವು ಬದುಕುಳಿಯಬಹುದು !
ನನ್ನಲ್ಲಿ ಈ ವಿಷಯವನ್ನು ಬರೆಯುವ ಅರ್ಹತೆ ಇಲ್ಲ. ಪರಾತ್ಪರ ಗುರು ಡಾಕ್ಟರರೇ ನನ್ನಿಂದ ಇದನ್ನು ಬರೆಯಿಸಿಕೊಂಡಿದ್ದಾರೆ, ಇದನ್ನು ಅವರ ಚರಣಾರವಿಂದಗಳಿಗೆ ಸಮರ್ಪಿಸುತ್ತಿದ್ದೇನೆ !’ – ಶ್ರೀ. ಮಧುಸೂಧನ ಕುಲಕರ್ಣಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೭.೪.೨೦೨೦)