ಪೊಲೀಸರ ಚಕಮಕಿಯಲ್ಲಿ ವಿಕಾಸ ದುಬೆಯ ಆಪ್ತ ಸಹಚರ ಅಮರ್ ದುಬೆ ಸಾವು

ಚೌಬೆಪೂರ್ (ಉತ್ತರಪ್ರದೇಶ)ದಲ್ಲಿನ ೮ ಪೊಲೀಸರ ಹತ್ಯಾಕಾಂಡದ ಪ್ರಕರಣ

ಹಮೀದ್‌ಪುರ –  ಚೌಬೆಪೂರ್‌ದಲ್ಲಿನ ೮ ಪೊಲೀಸರ ಹತ್ಯೆಯ ಪ್ರಕರಣದಲ್ಲಿ ತಪ್ಪಿಸಿಕೊಂಡಿರುವ ವಿಕಾಸ ದುಬೆಯ ಆಪ್ತ ಸಹಚರ ಅಮರ ದುಬೆಯು ಜುಲೈ ೮ರಂದು ಉತ್ತರ ಪ್ರದೇಶದ ಪೊಲೀಸರ ವಿಶೇಷ ತನಿಖಾ ದಳದೊಂದಿಗೆ ನಡೆದ ಚಕಮಕಿಯಲ್ಲಿ ಹತ್ಯೆಗೀಡಾದನು. ಚೌಬೆಪೂರ್ ಪ್ರಕರಣದ ಬಳಿಕ ದುಬೆ ಕೂಡ ಪರಾರಿಯಾಗಿದ್ದನು. ಪೊಲೀಸರು ನೀಡಿದ ಮಾಹಿತಿಯಂತೆ, ‘ಅಮರ ಮೌದಹಾದಲ್ಲಿ ತನ್ನ ಆಪ್ತರ ಮನೆಯಲ್ಲಿ ಅಡಗಿಕೊಂಡಿದ್ದನು. ಈ ಹಿಂದೆ ಅವನು ಫರೀದಾಬಾದಿನಲ್ಲಿ ಅಡಗಿಕೊಂಡಿದ್ದನು; ಆದರೆ ಪೊಲೀಸರ ಭಯದಿಂದ ಅವನು ಅಲ್ಲಿಂದ ಓಡಿ ಹೋದನು. ಪೊಲೀಸರು ಬೆನ್ನತ್ತಿ ಅವನನ್ನು ಸುತ್ತುವರಿದರು. ಮೊದಲು ಪೊಲೀಸರು ಅವನನ್ನು ಶರಣಾಗಲು ಹೇಳಿದರು; ಆದರೆ ಅವನು ಪೊಲೀಸರ ಮೇಲೆ ಗುಂಡು ಹಾರಿಸಿದನು. ಅದಕ್ಕೆ ಪೊಲೀಸರು ಪ್ರತ್ಯುತ್ತರವಾಗಿ ಗುಂಡು ಹಾರಿಸಿದರು. ಅದರಲ್ಲಿ ಅಮರ ದುಬೆ ಹತ್ಯೆಯಾದನು. ೮ ಪೊಲೀಸರ ಹತ್ಯೆಯಲ್ಲಿ ಈತನೂ ಸಹಭಾಗಿಯಾಗಿದ್ದನು ಅದರಲ್ಲಿ ಅಮರ ದುಬೆ ಹತ್ಯೆಯಾದನು’ ಅಪರಾಧದ ಹಿನ್ನಲೆಯಲ್ಲಿ ಅಮರ ದುಬೆಯ ಮೇಲೆ ೨೫ ಸಾವಿರ ರೂಪಾಯಿಗಳ ಬಹುಮಾನವಿತ್ತು.

ಪೋಲೀಸರಿಂದ ಪುನಃ ತಪ್ಪಿಸಿಕೊಂಡ ವಿಕಾಸ ದುಬೆ

ಚೌಬೆಪೂರ್ ಪ್ರಕರಣದಲ್ಲಿ ಮುಖ್ಯ ಆರೋಪಿ ವಿಕಾಸ ದುಬೆಯವರು ಫರೀದಾಬಾದ್‌ನಲ್ಲಿ ಅಡಗಿರುವುದಾಗಿ ತಿಳಿದು ಬಂದಿದೆ. ಅವನು ಹೋಟೆಲ್‌ನಲ್ಲಿರಲು ಕೋಣೆ ತೆಗೆದುಕೊಳ್ಳಲು ಬಂದಿದ್ದನು; ಆದರೆ ಪೊಲೀಸರು ಅಲ್ಲಿಗೆ ತಲುಪುವುದರೊಳಗೆ ಅವನು ಮತ್ತೆ ತಪ್ಪಿಸಿಕೊಂಡನು. ಈಗ ಪೊಲೀಸರು ಫರೀದಾಬಾದ್‌ನಲ್ಲಿ ಅವನಿಗೆ ಆಪ್ತನಾಗಿರುವ ೨ ಸಹಚರರನ್ನು ತೀವ್ರವಾಗಿ ವಿಚಾರಣೆ ಮಾಡುತ್ತಿದ್ದಾರೆ. ಪೋಲೀಸರು ಫರೀದಾಬಾದ್ ಹಾಗೂ ಗುಡಗಾವ್‌ನಲ್ಲಿ ಅತಿದಕ್ಷತೆಯ ಎಚ್ಚರಿಕೆ ನೀಡಿದ್ದಾರೆ. ವಿಕಾಸ ದುಬೆ ಇವನು ಹರಿಯಾಣ ಅಥವಾ ದೆಹಲಿ ನ್ಯಾಯಾಲಯಕ್ಕೆ ಶರಣಾಗಲು ಪ್ರಯತ್ನಿಸುತ್ತಿರುವುದಾಗಿ ಪೊಲೀಸರಿಗೆ ಸಂದೇಹವಿದೆ.