ಗಾಂಧಿ ಕುಟುಂಬದವರ ೩ ಸಂಸ್ಥೆಗಳ ತನಿಖೆ ನಡೆಯಲಿದೆ : ಕೇಂದ್ರೀಯ ಗೃಹಸಚಿವಾಲಯದಿಂದ ಸಮಿತಿ ಸ್ಥಾಪನೆ

ಚೀನಾದಿಂದ ಕೋಟಿಗಟ್ಟಲೆ ಹಣ ಸ್ವೀಕಾರ ಮಾಡಿರುವ ಪ್ರಕರಣ

ನವ ದೆಹಲಿ – ‘ರಾಜೀವ್ ಗಾಂಧಿ ಫೌಂಡೇಶನ್ ೨೦೦೫-೦೬ರ ನಡುವೆ ಚೀನಾದ ರಾಯಭಾರಿ ಕಛೇರಿಯಿಂದ ಕೋಟಿಗಟ್ಟಲೆ ಹಣ ಸ್ವೀಕರಿಸಿರುವ ಪ್ರಕರಣದಲ್ಲಿ ಕೇಂದ್ರ ಸರಕಾರವು ಈ ‘ಫೌಂಡೇಶನ್ನ ಜೊತೆ ‘ರಾಜೀವ್‌ಗಾಂಧಿ ಚ್ಯಾರಿಟೇಬಲ್ ಟ್ರಸ್ಟ್ ಹಾಗೂ ‘ಇಂದಿರಾ ಗಾಂಧಿ ಮೆಮೊರಿಯಲ್ ಟ್ರಸ್ಟ್ ಎಂಬ ಮೂರು ಸಂಸ್ಥೆಗಳ ತನಿಖೆಯನ್ನು ನಡೆಸುವ ಆದೇಶವನ್ನು ಕೇಂದ್ರೀಯ ಗ್ರಹಸಚಿವಾಲಯದ ವಕ್ತಾರರು ಟ್ವಿಟ್ ಮಾಡಿ ಈ ಮಾಹಿತಿಯನ್ನು ನೀಡಿದರು. ಅದಕ್ಕಾಗಿ ಗೃಹಸಚಿವಾಲಯವು ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯನ್ನು ಸ್ಥಾಪಿಸಿದೆ. ಈ ಮೂರೂ ಸಂಸ್ಥೆಗಳ ಮೇಲೆ ‘ಪಿ.ಎಮ್.ಎಲ್.ಎ. ಕಾಯಿದೆ, ಆದಾಯ ತೆರಿಗೆ ಕಾನೂನು ಹಾಗೂ ಎಫ್.ಸಿ.ಆರ್.ಎ. ಕಾಯಿದೆಯ ಉಲ್ಲಂಘಿಸಿರುವಂತೆ ಆರೋಪಿಸಲಾಗಿದೆ.
ಕಾಂಗ್ರೆಸ್ಸಿನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ‘ರಾಜೀವ್ ಗಾಂಧಿ ಫೌಂಡೇಶನ್ನ ಮುಖ್ಯಸ್ಥರಾಗಿದ್ದಾರೆ ಹಾಗೂ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಹ, ರಾಹುಲ ಗಾಂಧಿ, ಮಾಜಿ ಹಣಕಾಸು ಸಚಿವರಾದ ಪಿ. ಚಿದಂಬರಮ್ ಹಾಗೂ ಪ್ರಿಯಾಂಕಾ ವಾಡ್ರಾರವರು ಈ ‘ಫೌಂಡೇಶನ್ನ ಪದಾಧಿಕಾರಿಗಳಾಗಿದ್ದಾರೆ.