ಭಗವಾನ್ ಶ್ರೀಕೃಷ್ಣನನ್ನು ‘ವ್ಯಭಿಚಾರಿ ಹಾಗೂ ‘ಉನ್ಮತ್ತನೆಂದು ಕರೆಯುವ ‘ಹಿಂದುಸ್ತಾನ್ ಟೈಮ್ಸ್ ದೈನಿಕದ ಪತ್ರಕರ್ತೆ ಸೃಷ್ಟೀ ಜಸ್‌ವಾಲ್ ಪದಚ್ಯುತಿ

ಇಂತಹವರನ್ನು ಕೇವಲ ಅಮಾನತ್ತುಗೊಳಿಸಿದರೆ ಸಾಕಾಗುವುದಿಲ್ಲ, ಕೆಲಸದಿಂದಲೇ ತೆಗೆದು ಹಾಕಬೇಕು !

ನವ ದೆಹಲಿ – ಭಗವಾನ್ ಶ್ರೀಕೃಷ್ಣನನ್ನು ‘ವ್ಯಭಿಚಾರಿ ಹಾಗೂ ‘ಉನ್ಮತ್ತನೆಂದು ಹೇಳುವ ‘ಹಿಂದುಸ್ತಾನ್ ಟೈಮ್ಸ್ ಎಂಬ ಆಂಗ್ಲ ದೈನಿಕದ ಮಹಿಳಾ ಪತ್ರಕರ್ತೆ ಸೃಷ್ಟಿ ಜಸವಾಲ್‌ರವರನ್ನು ಆ ದೈನಿಕವು ಕೆಲಸದಿಂದ ವಜಾ ಮಾಡಿದೆ. ಮತ್ತೊಂದೆಡೆ ಸೃಷ್ಟಿ ತನ್ನ ‘ಟ್ವಿಟರ್ ಹಾಗೂ ‘ಇನ್ಸ್‌ಟಾಗ್ರಾಮ್ ಖಾತೆಯನ್ನು ನಿಲ್ಲಿಸಿದ್ದಾರೆ. ‘ಹಿಂದುಸ್ತಾನ್ ಟೈಮ್ಸ್ ಟ್ವಿಟ್ ಮಾಡಿ ‘ಹಿಂದುಸ್ತಾನ್ ಟೈಮ್ಸ್ ಸೃಷ್ಟಿಯವರ ವಿಚಾರಗಳನ್ನು ಬೆಂಬಲಿಸುವುದಿಲ್ಲ. ಅವರು ತಮ್ಮ ವೈಯಕ್ತಿಕ ಹೇಳಿಕೆ ನೀಡಿದ್ದಾರೆ’, ಎಂದಿದೆ.

ಭಾಜಪದ ಮುಖಂಡ ಗೌತಮ್ ಅಗ್ರವಾಲ್‌ರವರು ಈ ಸಂದರ್ಭವಾಗಿ ದೂರು ನೀಡುತ್ತಾ ಈ ದೈನಿಕದ ಬಳಿ ‘ಸೃಷ್ಟಿಯವರ ಮೇಲೆ ಯಾವ ರೀತಿಯ ಕ್ರಮಕೈಗೊಳ್ಳಲಿದ್ದೀರಿ ?, ಎಂದು ವಿಚಾರಿಸಿದ್ದರು. (ಒಂದು ವೇಳೆ ಗೌತಮ್ ಅಗ್ರವಾಲ್‌ರವರು ಪೊಲೀಸರ ಬಳಿ ದೂರು ನೀಡಿರದಿದ್ದರೆ ಅವರ ಮೇಲೆ ಇನ್ನೂ ಏಕೆ ಕ್ರಮಕೈಗೊಂಡಿಲ್ಲ? – ಸಂಪಾದಕರು)

(ಅಂತೆ) ‘ಪೌರಾಣಿಕ ಕಥೆಗಳಲ್ಲಿ ಓದಿದ್ದೇನೆ ! – ಸೃಷ್ಟೀ ಜಸವಾಲ್

ಸೃಷ್ಟೀ ಜಸವಾಲ್‌ರವರು ಹೇಳಿದ್ದಾರೆ, ‘ಅವರು ಭಗವಾನ್ ಶ್ರೀಕೃಷ್ಣನ ಮಾಹಿತಿಯನ್ನು ಹಿಂದೂಗಳ ಪೌರಾಣಿಕ ಕಥೆಗಳಲ್ಲಿ ಓದಿದ್ದಾರೆ. (ಹಿಂದೂಗಳ ಪೌರಾಣಿಕ ಕಥೆಗಳಲ್ಲಿ ಭಗವಾನ್ ಶ್ರೀಕೃಷ್ಣನ ಬಗ್ಗೆ ಈ ರೀತಿ ಎಲ್ಲಿಯೂ ಹೇಳದಿರುವಾಗಲೂ ಬಹಿರಂಗವಾಗಿ ನಿರ್ವಿವಾದವಾಗಿ ಹುಸಿ ಮಾತನಾಡುವ ಸೃಷ್ಟಿಯವರನ್ನು ಬಂಧಿಸಿ ಅವರಿಗೆ ಕಠಿಣ ಶಿಕ್ಷೆಯಾಗಲು ಸರಕಾರವು ಪ್ರಯತ್ನಿಸಬೇಕು ! – ಸಂಪಾದಕರು)