ಚೌಬೇಪೂರ್‌ನ ಪೋಲಿಸ್ ಉಪನಿರೀಕ್ಷಕರಾದ ವಿನಯ ತಿವಾರಿ ವಜಾ : ಗುಂಡಾ ವಿಕಾಸ ದುಬೆಗೆ ಪೋಲಿಸ್ ಕಾರ್ಯಾಚರಣೆಯ ಮುನ್ಸೂಚನೆ ನೀಡಿದ ಆರೋಪ

ಕಾನಪೂರ (ಉತ್ತರಪ್ರದೇಶ)ದಲ್ಲಿ ೮ ಪೋಲೀಸರ ಕೊಲೆ ಪ್ರಕರಣ

  • ಇನ್ನೂ ೨ ಪೋಲೀಸರ ಸಂಶಯದ ಸುಳಿಯಲ್ಲಿ

  • ಬೇಲಿಯೇ ಎದ್ದು ಹೊಲ ಮೇಯ್ದಂತೆ, ಎಂಬುದನ್ನು ಸಾರ್ಥಕಗೊಳಿಸುವ ಪೋಲೀಸ್ ದಳ ! ಇಂತಹವರ ಆಳವಾದ ತನಿಖೆ ನಡೆಸಿ ಕಠಿಣ ಶಿಕ್ಷೆ ನೀಡಿರಿ !

  • ಪೊಲೀಸ್ ದಳದಲ್ಲಿ ಇಂತಹ ಗೃಹವಂಚಕ ಪೊಲೀಸರಿದ್ದರೂ ಅವರ ಬಗ್ಗೆ ಪೋಲೀಸರಿಗೆ ಯಾವುದೇ ಸುಳಿವು ಏಕೆ ಇರಲಿಲ್ಲ? ಇಂತಹ ನಿದ್ರಿಸ್ತ ಪೋಲಿಸರು ಜನರ ರಕ್ಷಣೆಯನ್ನಾದರೂ ಹೇಗೆ ಮಾಡಲು ಸಾಧ್ಯ?

  • ಗುಂಡಾಗಳಿಗೆ ಗುಪ್ತ ಮಾಹಿತಿ ನೀಡಿ ಅವರಿಗೆ ಸಹಾಯ ಮಾಡುವ ಪೊಲೀಸರಿಂದ ಜನತೆಗೆ ಎಂದಾದರೂ ನ್ಯಾಯ ಸಿಗುವುದೇ ?

ಕಾನಪೂರ್ – ಇಲ್ಲಿಯ ೮ ಪೊಲೀಸರ ಕೊಲೆಯ ಪ್ರಕರಣದಲ್ಲಿ ಚೌಬೆಪೂರ್‌ದ ಪೊಲೀಸ್ ಉಪನಿರೀಕ್ಷಕ ವಿನಯ ತಿವಾರಿಯವರನ್ನು ವಜಾ ಮಾಡಿದ ಮಾಹಿತಿಯನ್ನು ಪೊಲೀಸ್ ಮಹಾನಿರೀಕ್ಷಕ ಮೋಹಿತ ಅಗ್ರವಾಲ್‌ರವರು ನೀಡಿದ್ದರು. ತಿವಾರಿಯವರು ಗುಂಡಾ ವಿಕಾಸ ದುಬೆಗೆ ಪೊಲೀಸ್ ಕಾರ್ಯಾಚರಣೆಯ ಮುನ್ಸೂಚನೆ ನೀಡಿರುವಂತೆ ಆರೋಪಿಸಲಾಗಿದೆ.
ಇಲ್ಲಿ ಕೊಲೆ ಪ್ರಯತ್ನ ನಡೆಸಿದ ಪ್ರಕರಣದಲ್ಲಿ ಆರೋಪಿ ಗುಂಡಾ ವಿಕಾಸ ದುಬೆಯನ್ನು ಬಂಧಿಸಲು ಕಾನಪೂರ್‌ದಲ್ಲಿನ ಚೌಬೇಪೂರ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದಳವು ಜುಲೈ ೩ ರ ರಾತ್ರಿ ಬಿಕರೂ ಎಂಬ ಗ್ರಾಮಕ್ಕೆ ಹೋಗಿದ್ದರು. ಆಗ ಅಲ್ಲಿಯೇ ಅಡಗಿಕೊಂಡು ಕುಳಿತಿದ್ದ ದುಬೆಯ ಗುಂಡಾಗಳು ಪೊಲೀಸರ ಮೇಲೆ ಗೋಲಿಬಾರ್ ನಡೆಸಿತು. ಅದರಲ್ಲಿ ೮ ಪೋಲೀಸರು ಮೃತಪಟ್ಟಿದ್ದಾರೆ. ಪೋಲೀಸರು ಬಂಧಿಸಲು ಬರಲಿದ್ದಾರೆ ಎಂಬ ಮಾಹಿತಿಯನ್ನು ತಿವಾರಿಯವರು ಚೌಬೇಗೆ ಮೊದಲೇ ನೀಡಿದ್ದರು ಎಂಬ ಮಾಹಿತಿಯನ್ನು ಚೌಬೆಯ ಸಂಚಾರವಾಣಿಯಲ್ಲಿನ ವಿವರಗಳಿಂದ ತಿಳಿದು ಬಂದಿದೆ. ಅದೇ ದಿನ ಸಾಯಂಕಾಲ ತಿವಾರಿಯವರನ್ನು ಪೋಲಿಸರು ತೀವ್ರ ವಿಚಾರಣೆ ನಡೆಸಿದಾಗ ತಿಳಿದು ಬಂದಿದೆ. ತಿವಾರಿಯೂ ಸೇರಿದಂತೆ ಓರ್ವ ಪೊಲೀಸ್ ಕಾನ್ಸಟೆಬಲ್ ಹಾಗೂ ಗೃಹರಕ್ಷಕ ದಳದ ಓರ್ವ ಪೋಲೀಸ್‌ನ ಮೇಲೆ ಸಂಶಯವಿದೆ.

ವಿನಯ ತಿವಾರಿಯು ಚೌಬೆಯ ವಿರುದ್ಧ ದೂರು ಪಡೆದುಕೊಳ್ಳಲು ನಿರಾಕರಿಸಿದ್ದನು !

ಕೆಲವು ದಿನಗಳ ಹಿಂದೆ ಗುಂಡಾ ವಿಕಾಸ ದುಬೆಯವರ ವಿರುದ್ಧ ದೂರು ನೀಡಲು ಕೆಲವು ಜನರು ಚೌಬೇಪೂರ್ ಪೊಲೀಸ್ ಠಾಣೆಗೆ ಬಂದಿದ್ದರು; ಆದರೆ ತಿವಾರಿಯವರು ಚೌಬೆಯ ವಿರುದ್ಧ ದೂರು ತೆಗೆದುಕೊಳ್ಳಲು ನಿರಾಕರಿಸಿದ್ದರು. ಆದ್ದರಿಂದ ಈಗ ಪೊಲೀಸರು ತಿವಾರಿಯ ವಿರುದ್ಧ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳುವ ಸಿದ್ಧತೆಯಲ್ಲಿದೆ.

೧೨ ಜನರು ವಶ : ದುಬೆ ಪರಾರಿ !

ಈ ಪ್ರಕರಣದಲ್ಲಿ ಪೊಲೀಸರು ಒಟ್ಟು ೧೨ ಜನರನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಈ ಘಟನೆಯ ಮುಖ್ಯ ಆರೋಪಿ ವಿಕಾಸ ದುಬೆ ಇನ್ನೂ ಪರಾರಿಯಾಗಿದ್ದಾನೆ. ಆ ದಿನ ದುಬೆಯು ಮೇಲಿನ ೧೨ ಜನರನ್ನು ಸಂಪರ್ಕಿಸಿದ್ದನು. ಆದ್ದರಿಂದ ಅವರ ವಿಚಾರಣೆ ನಡೆಯುತ್ತಿದೆ.