#TeachLessonToChina ಈ ಹ್ಯಾಷ್ ಟ್ಯಾಗ್ ರಾಷ್ಟ್ರೀಯ ಟ್ರೆಂಡ್‌ನಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಜಾಗತಿಕ ಟ್ರೆಂಡ್‌ನಲ್ಲಿ ೭ ನೇ ಸ್ಥಾನದಲ್ಲಿ !
ಮುಂಬಯಿ – ಚೀನಾ ಹಾಗೂ ಭಾರತದ ಸೈನಿಕರ ನಡುವೆ ನಡೆದ ಕಾಳಗದಲ್ಲಿ ಭಾರತದ ಒಬ್ಬ ಕರ್ನಲ್ ಸಹಿತ ೨೦ ಸೈನಿಕರು ಹುತಾತ್ಮರಾದರು. ಇದಾದ ನಂತರ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವಾಗ ಟ್ವಿಟರ್‌ನಿಂದಲೂ ವಿರೋಧ ವ್ಯಕ್ತವಾಗಿದೆ. ಜೂನ್ ೧೬ ರಂದು ಬೆಳಗ್ಗೆ ರಾಷ್ಟ್ರ ಪ್ರೇಮಿಗಳಿಂದ #TeachLessonToChina ಈ ಹ್ಯಾಷ್‌ಟ್ಯಾಗ್‌ನ ಟ್ರೆಂಡ್ ಆರಂಭಿಸಲಾಯಿತು. ಕೆಲವೇ ಕಾಲಾವಧಿಯಲ್ಲಿ ಈ ಟ್ರೆಂಡ್ ರಾಷ್ಟ್ರೀಯ ಟ್ರೆಂಡ್‌ನಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಜಾಗತಿಕ ಟ್ರೆಂಡ್‌ನಲ್ಲಿ ೭ ನೇ ಸ್ಥಾನದಲ್ಲಿತ್ತು. ಇದರಲ್ಲಿ ೭೫ ಸಾವಿರಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಲಾಯಿತು.
ಕೆಲವು ರಾಷ್ಟ್ರಪ್ರೇಮಿಗಳ ಟ್ವೀಟ್‌ಗಳು
- ಚೀನಾದೊಂದಿಗೆ ಇನ್ನು ಚರ್ಚೆಯಲ್ಲ, ಪ್ರತಿಕಾರ ತೀರಿಸಬೇಕು.
- ಭಾರತವು ಯಾವ ರೀತಿ ಪಾಕ್‌ನೊಳಗೆ ನುಗ್ಗಿ ‘ಸರ್ಜಿಕಲ್ ಸ್ಟ್ರೈಕ್ ಮಾಡಿತೋ, ಅದೇರೀತಿ ಈಗ ಚೀನಾದ ಮೇಲೆ ಮಾಡುವ ಸಮಯ ಬಂದಿದೆ.
- ಚೀನಾಗೆ ಪ್ರತ್ಯುತ್ತರ ನೀಡಲು ಭಾರತೀಯ ಸೈನಿಕರು ಸಕ್ಷಮರಾಗಿದ್ದಾರೆ. ಈಗ ಭಾರತೀಯರು ಚೀನಾದ ವಸ್ತುಗಳ ಮೇಲೆ ಸಂಪೂರ್ಣ ಬಹಿಷ್ಕಾರ ಹಾಕುವ ಆವಶ್ಯಕತೆ ಇದ್ದು ಈ ಮೂಲಕ ಚೀನಾದ ಅರ್ಥವ್ಯವಸ್ಥೆಯನ್ನು ಬಗ್ಗುಬಡಿಯುವ ಆವಶ್ಯಕತೆ ಇದೆ.
- ಲಡಾಖನ ೩೮ ಸಾವಿರ ಚದರ ಕಿ.ಮೀ. ಭೂಪ್ರದೇಶವು ಚೀನಾದ ವಶದಲ್ಲಿದೆ. ಅದನ್ನು ಪುನಃ ಪಡೆಯುವ ಸಮಯ ಬಂದಿದೆ.