ದೇವಸ್ಥಾನ ಸರಕಾರಿಕರಣದ ವಿರುದ್ದ ಚಾರಧಾಮದಲ್ಲಿ  ಚಳಿಯಲ್ಲಿ ಅರೆನಗ್ನವಾಗಿ ಆಂದೋಲನ ಮಾಡುವುದಾಗಿ ಅರ್ಚಕರ ಎಚ್ಚರಿಕೆ

ಉತ್ತಾರಾಖಂಡದ ಭಾಜಪ ಸರಕಾರದ ಚಾರಧಾಮನೊಂದಿಗೆ ೫೧ ದೇವಸ್ಥಾನಗಳ ಸರಕಾರಿಕರಣ ಮಾಡಿದ ಪ್ರಕರಣ

ಡೆಹರಾಡುನ್ (ಉತ್ತರಾಖಂಡ) – ಉತ್ತರಾಖಂಡನ ಭಾಜಪ ಸರಕಾರ ಚಾರಧಾಮ ಹಾಗೂ ೪೭ ದೇವಸ್ಥಾನಗಳ ಸರಕಾರಿಕರಣ ಮಾಡಿದ್ದನ್ನು ವಿರೋಧಿಸಲು ಪುರೋಹಿತರು ಇಲ್ಲಿಯ ಚಳಿಯಲ್ಲಿ ಅರೆನಗ್ನರಾಗಿ ಆಂದೋಲನ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ‘ಒಂದು ವೇಳೆ ಭಾಜಪ ಸರಕಾರ ನಮ್ಮ ಬೇಡಿಕೆಯ ಕಡೆ ದುಲ್ಷಕ್ಷ ಮಾಡುತ್ತಿದ್ದರೆ, ನಾವು ಕೂಡಲೇ ಈ ರೀತಿಯಾಗಿ ಖಂಡಿಸುವೆವು’, ಎಂದು ‘ದೇವಭೂಮಿ ತೀರ್ಥಪುರೋಹಿತ ಚಾರಧಾಮ ಮಹಾಪಂಚಾಯತಿ’ಯ ವಕ್ತಾರರಾದ ಬ್ರಿಜೇಶ ಇವರು ಎಚ್ಚರಿಕೆಯನ್ನು ನೀಡಿದ್ದಾರೆ. ಕಳೆದ ವರ್ಷ ‘ಚಾರಧಾಮ ಮಂದಿರ ಬೋರ್ಡ್’ ಮಸೂದೆಯನ್ನು ಅಂಗೀಕರಿಸಿದ್ದರಿಂದ ಚಾರಧಾಮ ಮತ್ತು ಇತರ ೪೭ ದೇವಸ್ಥಾನ(ಒಟ್ಟು ೫೧)ಕ್ಕೆ ಸಂಬಂಧಪಟ್ಟ ಅರ್ಚಕರು ರಾಜ್ಯ ಸರಕಾರವನ್ನು ಖಂಡಿಸಿದ್ದಾರೆ.

೧. ಅರ್ಚಕರ ಹೇಳಿಕೆಯ ಪ್ರಕಾರ, ‘ನೀ ವೈಷ್ಣೋದೇವಿ ದೇವಸ್ಥಾನ ಬೋರ್ಡ್ ಹಾಗೂ ತಿರುಪತಿ ಬಾಲಾಜಿ ದೇವಸ್ಥಾನ ಬೋರ್ಡ್ ರೀತಿಯಲ್ಲಿ ರಾಜ್ಯ ಸರಕಾರ ತೆಗೆದುಕೊಂಡಿರುವ ನಿರ್ಣಯದಿಂದಾಗಿ ಅರ್ಚಕರಿಗೆ ಪರಂಪರಾಗತವಾಗಿ ಬಂದಿದ್ದ ಅಧಿಕಾರದಿಂದ ವಂಚಿತರಾಗುವರು ಹಾಗೂ ದೇವಸ್ಥಾನದ ಮೇಲಿನ ನಿಯಂತ್ರಣ ಕಳೆದುಕೊಳ್ಳುವರು’ ಎಂದು ಹೇಳಿದ್ದಾರೆ.

೨. ಕಳೆದ ವರ್ಷ ಉತ್ತರಾಖಂಡದಲ್ಲಿ ಅರ್ಚಕ ಸಂಘಟನೆಯವರು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಭಾಜಪ ಸರಕಾರ ಚಾರಧಾಮನ ವ್ಯವಸ್ಥಾಪನೆಯ ಬಗ್ಗೆ ನಿರ್ಮಿಸಿದ ಹೊಸ ಕಾನೂನಿನಲ್ಲಿ ಹಸ್ತಕ್ಷೇಪ ಮಾಡುವಂತೆ ವಿನಂತಿಸಿದ್ದರು.