ಪಾಣಿಪತ್ (ಹರಿಯಾಣಾ)ದಲ್ಲಿ ೩೫ ಮುಸಲ್ಮಾನರು ಹಿಂದೂ ಧರ್ಮಕ್ಕೆ ಪುನಃ ಪ್ರವೇಶ

ಹಿಂದೂ ಧರ್ಮಕ್ಕೆ ಬರಲು ೯ ವರ್ಷ ತಪಶ್ಚರ್ಯ ಮಾಡಿದರು !

ಪಾಣಿಪತ್(ಹರಿಯಾಣಾ) – ಇಲ್ಲಿಯ ಆಸನ ಊರಿನಲ್ಲಿ ನೆಲೆಸಿದ ಒಂದು ಕುಟುಂಬದ ೩೫ ಮುಸಲ್ಮಾನರು ಪುನಃ ಹಿಂದೂ ಧರ್ಮಕ್ಕೆ ಪ್ರವೇಶಿಸಿದರು. ಅದಕ್ಕಾಗಿ ಅವರಿಗೆ ಹಿಂದೂ ಯುವಾ ವಾಹಿನಿಯವರು ಸಹಾಯ ಮಾಡಿದರು. ‘ನಾವು ಸ್ವೇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇವೆ’, ಎಂದು ಅವರು ಹೇಳಿದ್ದಾರೆ. ಅದಕ್ಕಾಗಿ ಕುಟುಂಬದ ಹಿರಿಯರು ಹರಿದ್ವಾರ ಹಾಗೂ ಗುಗಾ ಮೇಡಿಯಲ್ಲಿಗೆ ಹೋಗಿ ತಪಶ್ಚರ್ಯ ಮಾಡಿದ್ದರು.

ಹಿಂದೂ ಯುವಾ ವಾಹಿನಿಯ ಜಿಲ್ಲಾಧ್ಯಕ್ಷ ಸುನೀಲ ಆರ್ಯ ಇವರು, ‘ನಸೀಬ್‌ನೊಂದಿಗೆ ೩೫ ಜನರು ಹಿಂದೂ ಯುವಾ ವಾಹಿನಿಯನ್ನು ಸಂಪರ್ಕಿಸಿದ್ದರು. ನಂತರ ಅವರಿಗೆ ತಪಶ್ಚರ್ಯ ಮಾಡಲು ಹೇಳಲಾಗಿತ್ತು. ೯ ವರ್ಷ ತಪಶ್ಚರ್ಯ ಮಾಡಿದ ನಂತರ ಅವರಿಗೆ ಹಿಂದೂ ಧರ್ಮಕ್ಕೆ ಪ್ರವೇಶ ನೀಡಲಾಯಿತು’ ಎಂದು ಹೇಳಿದರು.