‘ಗೋಹತ್ಯೆಯನ್ನು ನಿಷೇಧಿಸಲು ಕಠಿಣ ಸುಗ್ರೀವಾಜ್ಞೆ ತಂದ ಉತ್ತರಪ್ರದೇಶದ ‘ಯೋಗಿ ಸರ್ಕಾರ’ಕ್ಕೆಅಭಿನಂದನೆಗಳು!

ಉತ್ತರ ಪ್ರದೇಶದ ಮಾದರಿಯಲ್ಲಿ ದೇಶದಾದ್ಯಂತ ‘ಗೋಹತ್ಯಾ ನಿಷೇಧ’ಕ್ಕಾಗಿ ಕಠಿಣ ಕಾನೂನು ಜಾರಿಗೆ ತರಬೇಕು !

ಉತ್ತರಪ್ರದೇಶದ ‘ಯೋಗಿ ಸರ್ಕಾರ’ವು ಗೋಹತ್ಯೆಯನ್ನು ತಡೆಗಟ್ಟಲು ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಅದರಂತೆ ಗೋಹತ್ಯೆಯನ್ನು ಮಾಡುವವರಿಗೆ ೧೦ ವರ್ಷ ಶಿಕ್ಷೆ ಮತ್ತು ೫ ಲಕ್ಷ ರೂಪಾಯಿ ವರೆಗೆ ದಂಡ ವಿಧಿಸಲಾಗುವುದು. ‘ಯೋಗಿ ಸರ್ಕಾರ’ ತೆಗೆದುಕೊಂಡ ಈ ನಿರ್ಧಾರ ಅತ್ಯಂತ ಶ್ಲಾಘನೀಯವಾಗಿದ್ದು ಹಿಂದೂ ಜನಜಾಗೃತಿ ಸಮಿತಿ ಅದನ್ನು ಸ್ವಾಗತಿಸುತ್ತದೆ ! ಇತ್ತೀಚೆಗೆ ಕೇರಳದಲ್ಲಿ ಗರ್ಭಿಣಿ ಆನೆಗೆ ಪಟಾಕಿ ಇರುವ ಅನಾನಸ್‌ಅನ್ನು ತಿನ್ನಲು ನೀಡಲಾಗಿತ್ತು, ಅದರಲ್ಲಿ ಗರ್ಭಿಣಿ ಆನೆ ಗಂಭೀರವಾಗಿ ಗಾಯಗೊಂಡು ದುರದೃಷ್ಟಕರವಾಗಿ ಸಾವನ್ನಪ್ಪಿತು; ಘಟನೆ ನಡೆದ ಎರಡು ದಿನಗಳು ಮಾಸುವ ಮುನ್ನವೇ ಅದೇರಿತಿ ಹಿಮಾಚಲ ಪ್ರದೇಶದಲ್ಲಿ ಹಸುಗೆ ಸ್ಫೋಟಕಗಳನ್ನು ತಿನ್ನಲು ನೀಡಿ ಅದಕ್ಕೆ ಗಂಭೀರವಾಗಿ ಗಾಯಗೊಳಿಸಿದರು. ದೇಶದಲ್ಲಿ ಪ್ರಾಣಿಗಳು ಮತ್ತು ಗೋಮಾತೆಗಳ ಮೇಲಿನ ದೌರ್ಜನ್ಯ ಮತ್ತು ಕೊಲ್ಲುವುದನ್ನು ತಡೆಯಲು ಕಠಿಣ ಕಾನೂನುಗಳು ಇಲ್ಲದ್ದರಿಂದ ಇಂತಹ ಅಮಾನವೀಯ ಕೃತ್ಯಗಳನ್ನು ಮಾಡುವ ಧೈರ್ಯ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೇ ಗೋರಕ್ಷಣೆಯ ಕಾರ್ಯವನ್ನು ಮಾಡುವ ಅನೇಕ ಗೋರಕ್ಷಕರ ಹತ್ಯೆಯೂ ಹಾಡುಹಗಲೇ ಆಗುತ್ತಿದೆ. ತನಿಖೆಯಲ್ಲಿ ಪೊಲೀಸರು ಮತ್ತು ಆಡಳಿತವರ್ಗದವರು ಹೆಚ್ಚಾಗಿ ಮತಾಂಧ ಕಟುಕರಿಗೇ ಸಹಾಯ ಮಾಡುತ್ತಿರುವುದು ಕಂಡುಬರುತ್ತದೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಉತ್ತರ ಪ್ರದೇಶ ಸರ್ಕಾರ ಹೊರಡಿಸಿದ ಈ ಸುಗ್ರೀವಾಜ್ಞೆಯು ಗೋರಕ್ಷಣೆಗಾಗಿ ಅಂದರೆ ಸಂತ-ಮಹಾತ್ಮರು, ಹಿಂದುತ್ವನಿಷ್ಠರು, ಗೋರಕ್ಷಕರಿಂದ ಹಿಡಿದು ಸಾಮಾನ್ಯ ಗೋಪ್ರೇಮಿಗಳಿಗೆ ಒಂದು ಆಶಾಕಿರಣವಾಗಿದೆ. ಗೋಮಾತೆಯ ರಕ್ಷಣೆಗಾಗಿ ಕೇವಲ ಉತ್ತರಪ್ರದೇಶದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಕಠಿಣ ಕಾನೂನನ್ನು ಜಾರಿಗೆ ತರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದೆ.

೧೯೪೭ ರಲ್ಲಿ ೯೦ ಕೋಟಿ ಇದ್ದ ದೇಶಿ ಗೋಧನವು ಈಗ ಕೇವಲ ೨-೩ ಕೋಟಿ ಉಳಿದಿದೆ ಇಂದು ದೇಶದ ೨೯ ರಾಜ್ಯಗಳಲ್ಲಿ ೨೦ ರಾಜ್ಯಗಳು ಗೋಹತ್ಯೆ ವಿರುದ್ಧ ಕಾನೂನುಗಳನ್ನು ರೂಪಿಸಿವೆ; ಆದರೆ ಈ ಕಾನೂನುಗಳಲ್ಲಿನ ನಿಬಂಧನೆಗಳು, ಶಿಕ್ಷೆಗಳು ಮತ್ತು ದಂಡಗಳು ಕಠಿಣವಾಗಿಲ್ಲದ್ದರಿಂದ, ಗೋಹತ್ಯೆ ಮಾಡುವವರು ಅದಕ್ಕೆ ಹೆದರುವುದಿಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳಿಗೆ ತಕ್ಷಣ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತದೆ ಮತ್ತು ಇದೇ ರೀತಿಯ ಕಾನೂನುಬಾಹಿರ ಕೃತ್ಯಗಳನ್ನು ಮುಂದುವರಿಸುತ್ತಾರೆ. ಅನೇಕ ಸ್ಥಳಗಳಲ್ಲಿ ಕಸಾಯಿಖಾನೆಗಳು ಮತ್ತು ವಾಹನಗಳ ಮೇಲೆ ಪೊಲೀಸರು ಮತ್ತು ಗೋರಕ್ಷಕರು ನಡೆಸಿದ ದಾಳಿಯಲ್ಲಿ ದೊಡ್ಡ ಪ್ರಮಾಣದ ಗೋಮಾಂಸವನ್ನು ವಶಪಡಿಸಿಕೊಳ್ಳಲಾಗುತ್ತದೆ; ಆದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದಿಲ್ಲ. ಇದನ್ನು ನಿಲ್ಲಿಸಬೇಕಾದರೆ, ರಾಷ್ಟ್ರಮಟ್ಟದಲ್ಲಿ ಎಲ್ಲ ರಾಜ್ಯಗಳಿಗೂ ಕಠಿಣ ಕಾನೂನು ಇರಬೇಕು. ಅದರೊಂದಿಗೆ ಗೋಸಂವರ್ಧನೆಗಾಗಿ, ಗೋಮೂತ್ರ, ಸಗಣಿ, ಪಂಚಗವ್ಯ ಇತ್ಯಾದಿಗಳಿಂದ ತಯಾರಿಸಿದ ಉತ್ಪನ್ನಗಳ ಜೊತೆಗೆ ಗೋ-ಚಿಕಿತ್ಸೆಗೆ ಪ್ರೋತ್ಸಾಹ ನೀಡಬೇಕು. ಈ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ಸಂಶೋಧನೆ ಮತ್ತು ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳುವುದು ಅಗತ್ಯವಿದ್ದು ಅದಕ್ಕಾಗಿ ಸ್ವತಂತ್ರ ‘ಗೋ-ಸಚಿವಾಲಯ’ ಸ್ಥಾಪಿಸಬೇಕು, ಎಂದು ಸಹ ಸಮಿತಿಯು ಆಗ್ರಹಿಸಿದೆ.