ಮುಸಲ್ಮಾನ ಬಹುಸಂಖ್ಯಾತ ಮೇವಾತ್ (ಹರಿಯಾಣಾ) ದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಟ್ವಿಟರ್‌ನಲ್ಲಿ ವಿರೋಧ

‘#Save_Mewat_Hindus’ ಈ ‘ಹ್ಯಾಶ್‌ಟ್ಯಾಗ್ ಟ್ರೆಂಡ್’ ೩ ನೇ ಸ್ಥಾನದಲ್ಲಿ

ಮುಂಬಯಿ : ವಿಶ್ವ ಹಿಂದೂ ಪರಿಷತ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಿಂದ ಹರಿಯಾಣಾ ರಾಜ್ಯದ ಮೆವಾತ ಈ ಮುಸಲ್ಮಾನ ಬಹುಸಂಖ್ಯಾತ ಜಿಲ್ಲೆಯಲ್ಲಿ ಹಿಂದೂಗಳ ದಯನೀಯ ಸ್ಥಿತಿಯು ಬೆಳಕಿಗೆ ಬಂದಿದೆ. ಈ ಜಿಲ್ಲೆಯು ‘ಮಿನಿ ಪಾಕಿಸ್ತಾನ್’ ಆಗಿದೆ ಎಂದು ಹೇಳಲಾಗಿದೆ. ಇಲ್ಲಿ ಹಿಂದೂಗಳ ಮೇಲೆ ದಾಳಿ, ಅವರ ಜಮೀನುಗಳ ಮೇಲೆ ಅತಿಕ್ರಮಣ, ಹಿಂದೂ ಮಹಿಳೆಯರ ಅಪಹರಣ, ಅವರ ಮೇಲೆ ಅತ್ಯಾಚಾರ ಮತ್ತು ಮತಾಂತರ ಇಂತಹ ಘಟನೆಗಳು ನಡೆಯುತ್ತಿವೆ. ಈ ದೌರ್ಜನ್ಯಗಳ ವಿರುದ್ಧ ಜೂನ್ ೯ ರ ಬೆಳಗ್ಗೆ ಹಿಂದೂ ಧರ್ಮಪ್ರೇಮಿಗಳು ಟ್ವಿಟರ್ ಮೂಲಕ ‘#Save_Mewat_Hindus’ ಎಂಬ ‘ಹ್ಯಾಶ್‌ಟ್ಯಾಗ್’ ಮೂಲಕ ಅನೇಕ ಟ್ವೀಟ್‌ಗಳನ್ನು ಮಾಡಿದರು. ಅಲ್ಪಾವಧಿಯಲ್ಲಿಯೇ ಈ ‘ಟ್ರೆಂಡ್’ ರಾಷ್ಟ್ರೀಯ ‘ಟ್ರೆಂಡ್’ನಲ್ಲಿ ಮೂರನೇ ಸ್ಥಾನಕ್ಕೆ ತಲುಪಿತು. ಇದರಲ್ಲಿ ೬೫೦೦೦ ಕ್ಕೂ ಹೆಚ್ಚು ಹಿಂದೂಗಳು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಧರ್ಮಪ್ರೇಮಿಗಳು ಹರಿಯಾಣಾ ಮತ್ತು ಕೇಂದ್ರ ಸರ್ಕಾರಕ್ಕೆ ಮೇವಾತ್‌ನಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದತ್ತ ಗಮನ ಹರಿಸಿ ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಧರ್ಮಪ್ರೇಮಿಗಳ ಕೆಲವು ಟ್ವೀಟ್‌ಗಳು

೧. ಹಿಂದೂಗಳನ್ನು ಕಾಶ್ಮೀರದಿಂದ ಹೊರದಬ್ಬಿದಂತಹ ಘಟನೆಗಳು ಇಂದು ಮೇವಾತ್‌ನಲ್ಲಿ ನಡೆಯುತ್ತಿದೆ. ಮೇವಾತ್‌ವನ್ನು ‘ಎರಡನೇ ಕಾಶ್ಮೀರ’ ಆಗುವುದನ್ನು ತಡೆಯಬೇಕಾಗಿದೆ.

೨. ಮೇವಾತ್‌ನಲ್ಲಿ ಹಿಂದೂಗಳಿಗೆ ದಸರಾ, ದೀಪಾವಳಿ ಮುಂತಾದ ಹಬ್ಬಗಳನ್ನು ಆಚರಿಸಲು ಆಗುತ್ತಿಲ್ಲ, ಇದಕ್ಕಿಂತ ಭಯಾನಕ ಇನ್ನೇನಿರಬಹುದು ?

೩. ಮೇವತ್‌ನಲ್ಲಿ ಪೊಲೀಸರಿಗೆ ಯಾರೂ ಹೆದರುವುದಿಲ್ಲ. ಮತಾಂಧರು ಬಹಿರಂಗವಾಗಿ ಥಳಿಸುತ್ತಾರೆ. ಪೊಲೀಸರು ಅಪರಾಧಿಯನ್ನು ಹಿಡಿಯಲು ಮೇವಾತ್‌ಗೆ ಹೋದಾಗ ಅವರ ಮೇಲೆ ಹಲ್ಲೆ ಮಾಡುತ್ತಾರೆ. ಮೇವಾತ್‌ನಲ್ಲಿ ಕಾನೂನು ಸುವ್ಯವಸ್ಥೆ ಎಂಬುದಿದೆಯೇ ?

೪. ಧರ್ಮಪ್ರೇಮಿಯೊಬ್ಬರು ‘ಝೀ ನ್ಯೂಸ್’ನ ವಾರ್ತಾವಾಹಿನಿಯ ಒಂದು ‘ವೀಡಿಯೊ’ವನ್ನು ಪ್ರಸಾರ ಮಾಡಿದ್ದಾರೆ. ಅದರಲ್ಲಿ ಮೇವಾತ್‌ನ ಶಾಲೆಯೊಂದರಲ್ಲಿ ಹಿಂದೂ ಹುಡುಗನಿಗೆ ಇಸ್ಲಾಂ ಧರ್ಮವನ್ನು ಪಾಲಿಸುವಂತೆ ಬಲವಂತ ಮಾಡಲಾಗುತ್ತದೆ ಎಂಬುದು ಕಾಣಿಸುತ್ತ್ತಿದೆ. ಇದೊಂದು ಮತಾಂತರದ ಸಂಚಾಗಿದೆ.