ದೆಹಲಿಯ ಶಾಹೀನ್‌ಬಾಗ್‌ದಲ್ಲಿ ಪುನಃ ಕಾನೂನುಬಾಹಿತ ಪ್ರತಿಭಟನೆ ನಡೆಸಲು ಮತಾಂಧರ ಸಂಚು

ಪೊಲೀಸರಿಂದ ಹೆಚ್ಚುವರಿ ಪೊಲೀಸರ ನೇಮಕ

ಇದರರ್ಥ ಹಿಂದೆ ಇಲ್ಲಿ ಆಗಿದ್ದ ಕಾನೂನುಬಾಹಿರ ಪ್ರತಿಭಟನೆಯ ಮುಖ್ಯ ರೂವಾರಿಗಳು ಇನ್ನೂ ನಿರ್ಭಯವಾಗಿದ್ದರಿಂದ ಈಗ ಮತ್ತಮ್ಮೆ ಸಕ್ರಿಯರಾಗಿ ಪ್ರತಿಭಟನೆಯ ಮಾಡುವ ಸಿದ್ಧತೆಯಲ್ಲಿದ್ದಾರೆ. ಪೊಲೀಸರು ಈ ಮುಖ್ಯ ರೂವಾರಿಗಳನ್ನು ಹುಡುಕಿ ಅವರಿಗೆ ಸೆರೆಮನೆಗೆ ಹಾಕಬೇಕು !

ನವ ದೆಹಲಿ : ಸಂಚಾರ ನಿಷೇಧದ ಮೊದಲು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಶಾಹೀನ್ ಬಾಗ್‌ನಲ್ಲಿ ಮತಾಂಧರು ಕಾನೂನುಬಾಹಿರವಾಗಿ ಪ್ರತಿಭಟನೆಯನ್ನು ನಡೆಸಿದ್ದರು. ಸಂಚಾರ ನಿಷೇಧ ಜಾರಿಯಾದ ಮೇಲೆ ಪೊಲೀಸರು ಈ ಪ್ರತಿಭಟನೆಯನ್ನು ಮೊಟಕುಗೊಳಿಸಿದ್ದರು; ಆದರೆ ಈಗ ಮತಾಂಧರು ಪುನಃ ಇಲ್ಲಿ ಪ್ರತಿಭಟನೆಯನ್ನು ಪ್ರಾರಂಭಿಸುವ ಸಿದ್ಧತೆಯಲ್ಲಿದ್ದಾರೆ. ಗೂಢಾಚಾರ ಇಲಾಖೆಯಿಂದ ಪ್ರಾಪ್ತವಾದ ಮಾಹಿತಿಯ ನಂತರ ಪೊಲೀಸರನ್ನು ಹೆಚ್ಚಿನ ಸಂಖ್ಯೆಯ ಇಲ್ಲಿ ನಿಯೋಜಿಸಲಾಗಿದೆ.

೧. ಸಾರಿಗೆ ನಿಷೇಧದಲ್ಲಿ ವಿನಾಯಿತಿ ಸಿಕ್ಕಿದ ನಂತರ ಕೆಲವು ಮತಾಂಧ ಮಹಿಳೆಯರು ಇಲ್ಲಿ ಜಮಾಯಿಸಿದಾಗ, ಪೊಲೀಸರು ಅವರಿಗೆ ತಿಳುವಳಿಕೆ ಹೇಳಿ ಕಳುಹಿಸಿದ್ದರು. ನಂತರ ಇಲ್ಲಿ ಬಿಗಿ ಭದ್ರತೆಯನ್ನು ಹೆಚ್ಚಿಸಲಾಯಿತು.

೨. ಶಾಹೀನ್ ಬಾಗ್ ನಂತರ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪುನಃ ಪ್ರತಿಭಟನೆ ನಡೆಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.