‘ಇನ್‌ಕ್ವಿಝಿಶನ್ ಹೆಸರಿನಲ್ಲಿ ಗೋಮಾಂತಕರ ಮೇಲೆ ಮಿಶನರಿಗಳ ದೌರ್ಜನ್ಯ ವಿಷಯದ ಚಿತ್ರಪ್ರದರ್ಶನದ ಲೋಕರ್ಪಣೆ !

ಹಿಂದೂಗಳ ಮೇಲಿನ ದೌರ್ಜನ್ಯಗಳ ವಿಷಯದಲ್ಲಿ ಪೋಪ್ ಕ್ಷಮೆ ಕೇಳಬೇಕು ! – ಫ್ರಾನ್ಸುವಾ ಗೋತಿಯೆ, ಫ್ರೆಂಚ್ ಪತ್ರಕರ್ತ

ಫ್ರಾನ್ಸುವಾ ಗೋತಿಯೆ, ಫ್ರೆಂಚ್ ಪತ್ರಕರ್ತ

‘ಇನ್‌ಕ್ವಿಝಿಶನ್ನ ಹೆಸರಿನಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಗೋವಾದ ಹಿಂದೂಗಳ ಮೇಲೆ ಭಯಂಕರ ದೌರ್ಜನ್ಯ ಮಾಡಿದರು; ಆದರೆ ಈ ನರಸಂಹಾರದ ವಿಷಯದಲ್ಲಿ ಭಾರತೀಯರಿಗೆ ಮಾಹಿತಿಯೇ ಇಲ್ಲ. ಇದರ ಬದಲು ಭಾರತದಲ್ಲಿ ಔರಂಗಜೇಬ, ಸೇಂಟ ಝೇವಿಯರ್ಸ ಈ ಅತ್ಯಾಚಾರಿಗಳ ವೈಭವೀಕರಣಗೊಳಿಸಲಾಗುತ್ತಿದೆ. ಭಾರತದಲ್ಲಿ ನೈಜ ಇತಿಹಾಸ ಹೇಳುವವರನ್ನು ಮೂಲಭೂತವಾದಿಗಳೆಂದು ಹೀಯಾಳಿಸುತ್ತಿರುವುದು ದುರ್ದೈವವೇ ಆಗಿದೆ. ಹಿಂದೂಗಳ ಪೂರ್ವಜರ ಮೇಲೆ ಎಷ್ಟು ಅಪಾರ ಪ್ರಮಾಣದಲ್ಲಿ ದೌರ್ಜನ್ಯ ನಡೆದಿದೆಯೆನ್ನುವುದು ಜಗತ್ತಿನೆದುರಿಗೆ ಬಹಿರಂಗಗೊಳ್ಳಬೇಕಾಗಿದೆ. ಇಷ್ಟೇ ಅಲ್ಲದೇ, ಪೋಪ್ ಈ ದೌರ್ಜನ್ಯಗಳ ವಿಷಯದಲ್ಲಿ ಕ್ಷಮೆ ಕೇಳಬೇಕು ಎಂದು ಖ್ಯಾತ ಫ್ರೆಂಚ್ ಪತ್ರಕರ್ತ ಮತ್ತು ಸಂಶೋಧಕ ಶ್ರೀ. ಫ್ರಾನ್ಸುವಾ ಗೊತಿಯೇ ಇವರು ಹೇಳಿದ್ದಾರೆ. ಅವರು ‘ಗೋವಾ ಇನ್‌ಕ್ವಿಝಿಶನ್ ಸಂದರ್ಭದ ಚಿತ್ರಪ್ರದರ್ಶನವನ್ನು ‘ಆನ್‌ಲೈನ್ ಮೂಲಕ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡುತ್ತಿದ್ದರು.

     ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರ ಹಸ್ತದಿಂದ ಈ ಚಿತ್ರಪ್ರದರ್ಶನವನ್ನು ‘ಆನ್‌ಲೈನ್ ಲೋಕಾರ್ಪಣೆ ಮಾಡಲಾಯಿತು. ಈ ಪ್ರದರ್ಶನ www.goainquisition.info ಈ ಜಾಲತಾಣದಲ್ಲಿ ಉಪಲಬ್ಧವಿದೆ. ಈ ಕಾರ್ಯಕ್ರಮಕ್ಕೆ ಕೇಂದ್ರೀಯ ಆಯುಷ್ ಮತ್ತು ಸಂರಕ್ಷಣಾ ರಾಜ್ಯಮಂತ್ರಿ ಶ್ರೀಪಾದ ನಾಯಿಕ್ ಇವರು ಶುಭಾಶಯಗಳನ್ನು ಕೋರಿದರು. ಈ ಕಾರ್ಯಕ್ರಮದಲ್ಲಿ ಫ್ರಾನ್ಸುವಾ ಗೋತಿಯೇ, ಪ್ರಸಿದ್ಧ ಲೇಖಕಿ ಶೆಫಾಲಿ ವೈದ್ಯ, ಗೋವಾದ ಇತಿಹಾಸಕಾರ ಪ್ರಾ. ಪ್ರಜಲ ಸಾಖರದಾಂಡೆ, ಅಲ್ಲದೇ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಮಾರ್ಗದರ್ಶನ ಮಾಡಿದರು. ಯು-ಟ್ಯೂಬ್, ಫೇಸಬುಕ್ ಮತ್ತು ಟ್ವಿಟರ್ ಮಾಧ್ಯಮದಿಂದ ಪ್ರಸಾರ ಮಾಡಲಾದ ಈ ಕಾರ್ಯಕ್ರಮವನ್ನು ೩೩ ಸಾವಿರದ ೮೦೦ ಜನರು ಪ್ರತ್ಯಕ್ಷ ವೀಕ್ಷಿಸಿದರು ಹಾಗೂ ೭೪ ಸಾವಿರ ಜನರ ವರೆಗೆ ಈ ಕಾರ್ಯಕ್ರಮ ತಲುಪಿದೆ.

ಗೋವಾ ಇನ್‌ಕ್ವಿಝಿಶನ್ ಒಂದು ಸಾಮಾಜಿಕ ವೇದನೆ ! – ಶೇಫಾಲಿ ವೈದ್ಯ, ಲೇಖಕಿ

ಆಂಗ್ಲರಿಗಿಂತ ಪೋರ್ಚುಗೀಸರ ಆಳ್ವಿಕೆ ಹೆಚ್ಚು ಕ್ರೂರವಾಗಿತ್ತು. ಗೋವಾ ‘ಇನ್‌ಕ್ವಿಝಿಷನ್ ಇತಿಹಾಸವನ್ನು ಪಠ್ಯಪುಸ್ತಕದಲ್ಲಿ ಸೇರಿಬೇಕು, ಅಲ್ಲದೇ ಈ ವಿಷಯದ ಬಗ್ಗೆ ಒಂದು ಸಂಗ್ರಹಾಲಯವಿರಬೇಕು ಎಂದು ಅನೇಕ ಬಾರಿ ಮನವಿ ಮಾಡಿದ್ದರೂ ಇಲ್ಲಿಯವರೆಗೂ ಯಾವುದೇ ಕೃತಿಯಾಗಿರುವುದು ಕಂಡು ಬಂದಿಲ್ಲ. ನಾವು ನಮ್ಮ ಇತಿಹಾಸವನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಮುಂದೆ ಈ ರೀತಿ ಏನೂ ಘಟಿಸಿಯೇ ಇರಲಿಲ್ಲ ಎಂದು ಜನರು ಹೇಳಬಹುದು. ಗೋವಾ ಇನ್‌ಕ್ವಿಝಿಶನ್ ಒಂದು ಸಾಮಾಜಿಕ ವೇದನೆಯಾಗಿದೆ ಎಂದು ಲೇಖಕಿ ಶೇಫಾಲಿ ವೈದ್ಯ ಇವರು ಹೇಳಿದರು.

‘ಗೋವಾ ಇನ್‌ಕ್ವಿಝಿಷನ್ ಹಿಂದೂಗಳ ಇತಿಹಾಸದ ಕರಾಳ ಅಧ್ಯಾಯ ! – ಪ್ರಾ. ಪ್ರಜಲ ಸಾಖರದಾಂಡೆ

೧೫೬೦ ರಿಂದ ೧೮೧೨ ನೇ ಇಸವಿಯಲ್ಲಿ ‘ಇನ್‌ಕ್ವಿಝಿಷನ್ ಹೆಸರಿನಲ್ಲಿ ಹಿಂದೂಗಳ ಮೇಲೆ ಅಪಾರ ದೌರ್ಜನ್ಯ ಮಾಡಲಾಯಿತು. ಹಿಂದೂಗಳನ್ನು ದೊಡ್ಡ ಪ್ರಮಾಣದಲ್ಲಿ ಮತಾಂತರ ಮಾಡಲಾಯಿತು. ಕಾನೂನಿಗೆ ಬಗ್ಗದವರನ್ನು ಜೀವಂತ ಸುಡಲಾಯಿತು. ‘ಗೋವಾ ಇನ್‌ಕ್ವಿಝಿಷನ್ ಇದು ಹಿಂದೂಗಳ ಇತಿಹಾಸದ ಕರಾಳ ಅಧ್ಯಾಯವಾಗಿದೆಯೆಂದು ಗೋವಾದ ಇತಿಹಾಸಕಾರ ಪ್ರಾ.ಪ್ರಜಲ ಸಾಖರದಾಂಡೆಯವರು ಹೇಳಿದರು.

ಗೋವಾದ ‘ಹಾತ ಕಾತರೊ ಕಂಬವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಿರಿ ! – ಶ್ರೀ ರಮೇಶ ಶಿಂದೆ

ಶ್ರೀ ರಮೇಶ ಶಿಂದೆ

ಗೋವಾ ಇನ್‌ಕ್ವಿಝಿಶನ್ ಇತಿಹಾಸದ ದುರ್ಲಭ ಪುರಾವೆಯಾದ ‘ಹಾತ ಕಾತರೊ ಕಂಬವು ಹಳೆ ಗೋವಾದಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ. ಈ ಕಂಬದ ಇತಿಹಾಸ ಪುರಾತತ್ವ ಖಾತೆಯಿಂದ ತೆಗೆದು ಹಾಕುವ ಷಡ್ಯಂತ್ರ ಈಗ ಪ್ರಾರಂಭವಾಗಿದೆ. ಈ ರೀತಿಯ ಕಂಬ ಗೋವಾದಲ್ಲಿ ಅಸ್ತಿತ್ವದಲ್ಲಿಯೇ ಇಲ್ಲವೆಂದು ಪುರಾತತ್ವ ಇಲಾಖೆ ಹೇಳುತ್ತಿದೆ. ‘ಹಾತ ಕಾತರೊ ಕಂಬ ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು.