
ನವ ದೆಹಲಿ : ಕರೋನಾ ಮತ್ತು ಇತರ ರೋಗಾಣು, ಹಾನಿಕಾರಕ ಜೀವಜಂತುಗಳನ್ನು ನಾಶಮಾಡಲು ಮತ್ತು ಪರಿಸರವನ್ನು ಶುದ್ಧೀಕರಿಸಲು ಮೇ ೩೧ ರಂದು ಅಖಿಲ ವಿಶ್ವ ಗಾಯತ್ರಿ ಪರಿವಾರ ಇವರಿಂದ ೨೪ ಸಲ ‘ಗಾಯತ್ರಿ ಮಂತ್ರ’, ೫ ಸಲ ‘ಸೂರ್ಯ ಗಾಯತ್ರಿ ಮಂತ್ರ’ ಮತ್ತು ೫ ಸಲ ‘ಮಹಾಮೃತುಂಜಯ ಮಂತ್ರ’ ಇದರ ಪಾರಾಯಣದೊಂದಿಗೆ ಆಹುತಿಯನ್ನು ಕೊಡುತ್ತ ಯಜ್ಞವನ್ನು ಮಾಡಲಾಗುವುದು. ವಿಶ್ವದ ೧೦೦ ಕ್ಕೂ ಹೆಚ್ಚು ದೇಶಗಳಲ್ಲಿ ಗಾಯತ್ರಿ ಪರಿವಾರದ ಲಕ್ಷಾಂತರ ಅನುಯಾಯಿಗಳು ತಮ್ಮ ಮನೆಗಳಲ್ಲಿ ಈ ಯಜ್ಞವನ್ನು ಮಾಡಲಿದ್ದಾರೆ, ಎಂದು ಶ್ರೀ. ದಿನನಾಥ್ ಸಿಂಗ್ ಮಾಹಿತಿಯನ್ನು ನೀಡಿದರು. ಬೆಳಿಗ್ಗೆ ೯ ರಿಂದ ಸಂಜೆ ೫ ರ ವರೆಗೆ ಯಜ್ಞವನ್ನು ಮಾಡಲಾಗುವುದು. ಗಾಯತ್ರಿ ಪರಿವಾರದ ಸದಸ್ಯರಿಗೆ ಯಜ್ಞ ಮತ್ತು ಮಂತ್ರೋಚ್ಚಾರದ ಮಾಹಿತಿಯನ್ನು ತಿಳಿಸಲು ‘ಆನ್‌ಲೈನ್’ನಲ್ಲಿ ತರಬೇತಿ ನೀಡಲಾಗುತ್ತಿದೆ, ಅದೇರೀತಿ ಇದಕ್ಕಾಗಿ ಒಂದು ‘ಆಪ್’ ನಿರ್ಮಿಸಲಾಗಿದೆ. ಈ ಯಜ್ಞದ ಸಾಮಾಗ್ರಿಗಳಲ್ಲಿ ಅಮೃತ, ಬ್ರಾಹ್ಮಿ, ಪ್ರಜ್ಞಾ ಹುಲ್ಲು, ಹಸುವಿನ ತುಪ್ಪ, ಅಕ್ಕಿ, ಬೆಲ್ಲ, ಬೇವು, ಬಿಲ್ವ, ನೀಲಗಿರಿ, ಮಾವಿನ ಮರದ ಕಟ್ಟಿಗೆ ಇತ್ಯಾದಿಗಳು ಸೇರಿವೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!