ಬಿಜೆಪಿ ಆಡಳಿತವಿರುವ ಉತ್ತರಾಖಂಡದ ಚಾರಧಾಮ್ ಸಹಿತ ೫೧ ದೇವಾಲಯಗಳ ಸರಕಾರಿಕರಣಗೊಳಿಸುವ ಕಾನೂನು ಹಿಂಪಡೆಯುವಂತೆ ಆದೇಶ ನೀಡಿ !

ಬಿಜೆಪಿಯ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ಇವರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ

ದೇವಾಲಯಗಳ ಸರಕಾರಿಕರಣಗೊಳಿಸುವುದು ಇದು ಸಂವಿಧಾನ ಮತ್ತು ಬಿಜೆಪಿಯ ಹಿಂದುತ್ವನಿಷ್ಠ ಸಿದ್ಧಾಂತಕ್ಕೂ ವಿರುದ್ಧವಾಗಿದೆ

ನವ ದೆಹಲಿ : ಉತ್ತರಾಖಂಡದ ಬಿಜೆಪಿ ಮುಖ್ಯಮಂತ್ರಿಯವರು ಚಾರಧಾಮ್ ಸೇರಿದಂತೆ ರಾಜ್ಯದ ೫೧ ದೇವಾಲಯಗಳನ್ನು ಸರಕಾರಿಕರಣಗೊಳಿಸುವ ಕಾನೂನನ್ನು ಹಿಂಪಡೆಯಬೇಕೆಂದು ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸಂಸದ ಡಾ. ಸುಬ್ರಮಣಿಯನ್ ಸ್ವಾಮಿಯವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಿದ್ದಾರೆ.

ಡಾ. ಸ್ವಾಮಿಯವರು ಈ ಪತ್ರದಲ್ಲಿ ಹೀಗೆ ಹೇಳಿದರು,

೧. ಉತ್ತರಾಖಂಡದ ಬಿಜೆಪಿ ಸರ್ಕಾರವು ರಾಜ್ಯದ ಬಹುತೇಕ ಎಲ್ಲಾ ದೇವಾಲಯಗಳ ಸರಕಾರಿಕರಣ ಮಾಡುವುದು, ಅದೇರೀತಿ ಈ ದೇವಾಲಯಗಳಿಗೆ ಸ್ಥಾಪಿಸಲಿರುವ ಮಂಡಳಿಯ ಅಧ್ಯಕ್ಷರಾಗಿ ಮುಖ್ಯಮಂತ್ರಿಯನ್ನು ನೇಮಿಸುವ ಕಾನೂನನ್ನು ಜಾರಿಗೆ ತಂದಿದೆ. ಈ ಹೆಜ್ಜೆ ನಮ್ಮ ಪಕ್ಷದ ನೀತಿ ಮತ್ತು ಹಿಂದುತ್ವದ ಸಿದ್ಧಾಂತಕ್ಕೆ ವಿರುದ್ಧವಾಗಿ ಮಾತ್ರವಲ್ಲದೇ, ಇದು ಅಕ್ರಮವಾಗಿಯೂ ಇದೆ, ಅದೇ ರಿತಿ ೨೦೧೪ ರಲ್ಲಿ ಸವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧವೂ ಆಗಿದೆ.

೨. ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ‘ಸಂವಿಧಾನದ ೨೫ ನೇ ಕಲಂ ಗನುಸಾರ, ಸರ್ಕಾರವು ಯಾವುದೇ ದೇವಸ್ಥಾನವನ್ನು ಆಡಳಿತಾತ್ಮಕ ಮಟ್ಟದಲ್ಲಿ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಅಲ್ಲಿ ದೇವಾಲಯದ ಸಂಪತ್ತಿನಲ್ಲಿ ಹಗರಣವಾಗಿದ್ದಲ್ಲಿ, ಮಾತ್ರ ಕೆಲವು ಕಾಲಾವಧಿಗಾಗಿ ಅದನ್ನು ಸ್ವಾಧೀನ ಪಡಿಸಿಕೊಳ್ಳಬಹುದು ಇಲ್ಲದಿದ್ದರೆ ಮಾಡುವಂತಿಲ್ಲ.’ ಎಂದು ಸ್ಪಷ್ಟವಾಗಿ ತಿಳಿಸಿತ್ತು.

೩. ಉತ್ತರಾಖಂಡದಲ್ಲಿ ಬದ್ರಿನಾಥ್, ಕೇದಾರನಾಥ ಮತ್ತು ಇತರ ೪೯ ದೇವಾಲಯಗಳಲ್ಲಿ ಯಾವುದೇ ರೀತಿಯ ಆರ್ಥಿಕ ಹಗರಣ ಆಗಿಲ್ಲ. ಆದ್ದರಿಂದ ಉತ್ತರಾಖಾಂಡ ಸರಕಾರವು ಮಾಡಿದ ದೇವಾಲಯಗಳ ಸರಕಾರಿಕರಣವು ಸಂವಿಧಾನಕ್ಕೆ ವಿರುದ್ಧವಾಗಿದೆ.

೪. ಸರಕಾರಿಕರಣದ ನಿರ್ಣಯ ನಮಗೆ ಅವಮಾನಕರವಾಗಿದೆ. ನಮ್ಮ ನೀತಿಯೆಂದರೆ, ‘ದೇವಾಲಯಗಳನ್ನು ನಡೆಸುವುದು ಭಕ್ತರಿಂದಲೇ ಹೊರತು ಸರ್ಕಾರದಿಂದಲ್ಲ.’ ಅದಕ್ಕಾಗಿಯೇ ನಾನು ‘ಈ ಕಾನೂನನ್ನು ಹಿಂಪಡೆಯುವಂತೆ ಆದೇಶಿಸಬೇಕೆಂದು’, ಒತ್ತಾಯಿಸುತ್ತಿದ್ದೇನೆ. ಸರಕಾರಿಕರಣದ ವಿರುದ್ಧ ನ್ಯಾಯಾಲಯದ ನಿರ್ಣಯಕ್ಕಾಗಿ ಕಾಯುವ ಬದಲು ಪ್ರಧಾನಮಂತ್ರಿಯಾಗಿ ನೀವು ದೇವಾಲಯಗಳನ್ನು ಸರಕಾರದಿಂದ ಮುಕ್ತವಾಗಿಡುವ ಆದೇಶವನ್ನು ನೀಡಿದರೆ, ಅದು ನಮ್ಮ ಪಕ್ಷದ ದೃಷ್ಟಿಯಿಂದ ಹಿತವೇ ಆಗುತ್ತದೆ. ಈ ಕೆಲಸ ರಾಜಕೀಯವಾಗಿ ದೃಷ್ಟಿಯಲ್ಲಿ ಸೂಕ್ಷ್ಮವಾಗಿದೆ.

ಉತ್ತರಾಖಂಡ ಸರ್ಕಾರದ ದೇವಾಲಯ ಸರಕಾರಿಕರಣದ ಕಾನೂನು ಹೇಗಿದೆ ?

೧. ಉತ್ತರಾಖಂಡ ಸರ್ಕಾರದ ದೇವಾಲಯ ಸರಕಾರಿಕರಣ ಕಾನೂನು ಪ್ರಕಾರ ದೇವಾಲಯಗಳ ಅರ್ಚಕರು ಮತ್ತು ಟ್ರಸ್ಟ್‌ಗಳ ಬಳಿ ಇರುವ ದೇವಸ್ಥಾನದ ನಿಯಂತ್ರಣವು ಸರ್ಕಾರಕ್ಕೆ ಸೇರುತ್ತದೆ.

೨. ಈ ಕಾನೂನಿನ ಪ್ರಕಾರ ದೇವಾಲಯಗಳ ಉಸ್ತುವಾರಿಯು ಈಗ ಶಾಸಕರು, ಸಂಸದರು ಮತ್ತು ರಾಜ್ಯ ಸರ್ಕಾರದಿಂದ ನೇಮಕಗೊಂಡ ಪ್ರತಿನಿಧಿಗಳು ನಡೆಸಲಿದ್ದಾರೆ.

೩. ದೇವಾಲಯಗಳ ಸರಕಾರಿಕರಣ ಆದನಂತರ ಸ್ಥಾಪಿಸಲಾಗುವ ದೇವಸ್ಥಾನಂ ಮಂಡಳಿಯ ರಾಜ್ಯದ ಮುಖ್ಯಮಂತ್ರಿಗಳ ಜೊತೆಗೆ ಹಲವಾರು ಆಡಳಿತಾಧಿಕಾರಿಗಳು ಕೂಡ ನೇತೃತ್ವ ವಹಿಸುವರು.

೪. ಒಂದು ವೇಳೆ ರಾಜ್ಯದ ಮುಖ್ಯಮಂತ್ರಿ ಹಿಂದೂ ಅಲ್ಲದಿದ್ದರೆ, ಅತ್ಯಂತ ಹಿರಿಯ ಹಿಂದೂವನ್ನು ಈ ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲಾಗುವುದು.

ಉತ್ತರಾಖಂಡ ಸರ್ಕಾರದ ಈ ಹಿಂದಿನ ’ಚಾರ್‌ಧಾಮ್ ದೇವಸ್ಥಾನ ವ್ಯವಸ್ಥಾಪನೆ ಅಧಿನಿಯಮ’ಕ್ಕೆ ಸುಬ್ರಮಣಿಯನ್ ಸ್ವಾಮಿಯವರು ನ್ಯಾಯಾಲಯದಲ್ಲಿ ಆಹ್ವಾನ ನೀಡಿದ್ದರು

ಡಾ. ಸುಬ್ರಮಣಿಯನ್ ಸ್ವಾಮಿ ಈ ಹಿಂದೆಯೇ ಉತ್ತರಾಖಂಡ ಹೈಕೋರ್ಟ್‌ನಲ್ಲಿ ‘ಚಾರಧಾಮ್ ದೇವಸ್ತಾನ ವ್ಯವಸ್ಥಾಪನೆ ಕಾಯ್ದೆ ೨೦೧೯’ಗೆ ಆಹ್ನಾ ನೀಡಿದ್ದರು. ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ರಾಜ್ಯ ಸರ್ಕಾರ ಇನ್ನೂ ಯಾವುದೇ ಉತ್ತರ ನೀಡಿಲ್ಲ.

ಎಲ್ಲಾ ಸಂತರು, ಸನ್ಯಾಸಿಗಳು, ವಿಶ್ವ ಹಿಂದೂ ಪರಿಷತ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಇತರರು ಈಗಾಗಲೇ ಉತ್ತರಾಖಂಡದ ದೇವಸ್ಥಾನ ಸರಕಾರಿಕರಣದ ಕಾನೂನನ್ನು ವಿರೋಧಿಸಿದ್ದಾರೆ.