ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ವೈ.ಎಸ್.ಆರ್ ಕಾಂಗ್ರೆಸ್‌ನ ಸಂಸದ ರಘು ಕೃಷ್ಣ ರಾಜು ಅವರ ಬೇಜವಾಬ್ದಾರಿ ಹೇಳಿಕೆ !
-
ಕಟ್ಟರ ಕ್ರೈಸ್ತ ಜಗನ್ಮೋಹನ್ ರೆಡ್ಡಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದರಿಂದ ಅವರ ಪಕ್ಷದ ರಘು ಕೃಷ್ಣ ರಾಜುರಂತಹ ನಾಯಕರು ಹಿಂದೂಗಳ ಮತಾಂತರದ ಬಗ್ಗೆ ಹೀಗೆ ಬೇಜವಾಬ್ದಾರಿ ಹಾಗೂ ಕ್ರೈಸ್ತರ ಪರ ಹೇಳಿಕೆಗಳನ್ನು ನೀಡಿದರೆ ಆಶ್ಚರ್ಯವೇನಿಲ್ಲ !
-
ಕ್ರೈಸ್ತ ಧರ್ಮಪ್ರಸಾರ ಬಹಿರಂಗವಾಗಿ ಬೆಂಬಲಿಸುವ ಜನಪ್ರತಿನಿಧಿಗಳಿಂದ ಕೂಡಿರುವ ಸರಕಾರ ಅಧಿಕಾರದಲ್ಲಿರುವಾಗ ಆಂಧ್ರಪ್ರದೇಶವು ’ಕ್ರೈಸ್ತ್ರದೇಶ’ವಾಗದಿರಲಿ ಎಂಬುದಕ್ಕಾಗಿ ಹಿಂದೂಗಳು ಪರಿಣಾಮಕಾರಿ ಸಂಘಟನೆಯನ್ನು ನಿಲ್ಲಿಸುವುದು ಅಗತ್ಯವಿದೆ !
-
‘ಜಾತ್ಯತೀತ’ ಭಾರತದ ಒಂದು ರಾಜ್ಯದ ಪ್ರತಿನಿಧಿ ಇಂತಹ ಹೇಳಿಕೆ ನೀಡುತ್ತಾರೆ, ಅದು ಪ್ರಜಾಪ್ರಭುತ್ವಕ್ಕನುಗುಣವಾಗಿದೆಯೇ ? ಮತಾಂತರಗೊಂಡವರನ್ನು ’ಸ್ವಧರ್ಮಕ್ಕೆ ಕರೆತರಲು’ ವಿರೋಧಿಸುವವರು ರಾಜು ಇವರ ಹೇಳಿಕೆಯನ್ನು ವಿರೋಧಿಸುವುದಿಲ್ಲ ಎಂಬುದನ್ನು ಗಮನದಲ್ಲಿಡಿ !
ಭಾಗ್ಯನಗರ (ಆಂಧ್ರಪ್ರದೇಶ) – ಮಿಷನರಿಗಳು ಹಣದ ಬಲದಿಂದ ಹಿಂದೂಗಳನ್ನು ಮತಾಂತರಗೊಳಿಸುತ್ತಿದ್ದರೆ, ಅದಕ್ಕೆ ನಾನು ಏನು ಮಾಡಲಿ, ಎಂದು ಆಂಧ್ರಪ್ರದೇಶದ ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಸಂಸದ ರಘು ಕೃಷ್ಣ ರಾಜು ಇವರು ಅತ್ಯಂತ ಬೇಜವಾಬ್ದಾರಿತನದ ಹೇಳಿಕೆಯನ್ನು ನೀಡಿದ್ದಾರೆ. ಅವರು ಮೇ ೨೫ ರಂದು ‘ಟೈಮ್ಸ್ ನೌ’ ಈ ವಾರ್ತಾವಾಹಿನಿಯಲ್ಲಿ ನಡೆದ ಒಂದು ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು. ಬಹಿರಂಗ ಕಾರ್ಯಕ್ರಮದಲ್ಲಿ ಇಂತಹ ಹೇಳಿಕೆ ನೀಡುವ ಮೂಲಕ ರಘು ಕೃಷ್ಣ ರಾಜು ಆಂಧ್ರಪ್ರದೇಶದಲ್ಲಿ ಮುಕ್ತವಾಗಿ ನಡೆಯುತ್ತಿರುವ ಮತಾಂತರವನ್ನು ಬೆಂಬಲಿಸಿದ್ದಾರೆ. ಈ ಸಮಯದಲ್ಲಿ ವಾರ್ತಾವಾಹಿನಿಯ ನಿರೂಪಕನು ‘ಇದರರ್ಥ ಆಂಧ್ರಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರ ನಡೆಯುತ್ತಿದೆ, ಎಂಬುದನ್ನು ನೀವು ಮಾನ್ಯತೆ ಕೊಡುತ್ತಿದ್ದೀರಿ’, ಎಂದು ಅರಿವು ಮಾಡಿಕೊಟ್ಟ ನಂತರ ರಘು ಕೃಷ್ಣ ರಾಜು ಅದನ್ನು ಮರೆಮಾಚಲು ಪ್ರಯತ್ನಿಸಿದರು. ‘ರಾಜ್ಯದಲ್ಲಿ ಮತಾಂತರ ಪ್ರಕ್ರಿಯೆ ನಡೆಯುತ್ತಿದೆ ಎಂದು ನನಗೆ ಹೇಳುವುದಿರಲಿಲ್ಲ. ಇದು ದೇಶದಾದ್ಯಂತ ನಡೆಯುತ್ತಿದೆ’, ಎಂಬುದು ನನಗೆ ಹೇಳುವುದಿತ್ತು ಇದರಲ್ಲಿ ಸರ್ಕಾರದ ಯಾವುದೇ ಪಾತ್ರ ಇಲ್ಲ. ಇವೆಲ್ಲಾ ಮಿಷನರಿಗಳ ಕಡೆ ಇರುವ ಹಣದ ಬಲದಲ್ಲಿ ನಡೆಯುತ್ತಿದೆ. ಅವರು ಹಣವನ್ನು ಈ ರೀತಿ ಬಳಸುತ್ತಾರೆ’, ಎಂದು ಅವರು ಹೇಳಿದರು. (ಎಲ್ಲ ತಿಳಿದಿದ್ದರೂ ಆಂಧ್ರಪ್ರದೇಶ ಸರಕಾರ ಇಂತಹ ಮಿಷನರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ತದ್ವಿರುದ್ಧ ಅದನ್ನು ಬೆಂಬಲಿಸುತ್ತಾ ಅದನ್ನು ಮರೆಮಾಚಲು ಪ್ರಯತ್ನಿಸುತ್ತಿದೆ ! – ಸಂಪಾದಕರು) ಈ ಸಮಯದಲ್ಲಿ, ನಿರೂಪಕರು ಅವರಿಗೆ, ‘ಹಣದ ಬಲದ ಮೇಲೆ ಮತಾಂತರ ಮಾಡುವುದು ಇದು ಸಂಪೂರ್ಣವಾಗಿ ಕಾನೂನುಬಾಹಿರವಾಗಿರುವಾಗ ನೀವು ಅದಕ್ಕಾಗಿ ಏನು ಮಾಡುತ್ತೀರಿ ?’ ಎಂದು ಕೇಳಿದಾಗ, ರಘು ಕೃಷ್ಣ ರಾಜು ಇವರು ಭಾರತ ಜಾತ್ಯತೀತ ದೇಶ ಎಂದು ಹೇಳುತ್ತಲೇ ಇದ್ದರು. ‘ದೇಶ ಜಾತ್ಯತೀತವಾಗಿದ್ದರೂ ಹಣದ ಬಲದಿಂದ ಮತಾಂತರಿಸುವುದು ಕಾನೂನುಬಾಹಿರವಾಗಿದೆ’, ಇದೂ ಕೂಡ ನಿರೂಪಕರಿಗೆ ಹೇಳಬೇಕಾಯಿತು. (ಇತರ ಸಮಯಗಳಲ್ಲಿ ಸಂವಿಧಾನವನ್ನು ಸ್ತುತಿಸುವವರು ಇಂತಹ ಸಮಯದಲ್ಲಿ ಸಂವಿಧಾನದ ಪ್ರಮುಖ ಅಂಶಗಳನ್ನು ಮರೆತುಬಿಡುತ್ತಾರೆ ! ಸಂಸದರಾಗಿದ್ದರೂ ರಘು ಕೃಷ್ಣ ರಾಜು ಅವರಿಗೆ ಇದು ಕೂಡ ತಿಳಿದಿಲ್ಲ, ಯಾರು ಇದನ್ನು ನಂಬುತ್ತಾರೆ ? – ಸಂಪಾದಕರು.) ‘ಸರಕಾರವೇ ಜನರಿಗೆ ಮತಾಂತರಕ್ಕೆ ಪ್ರೊತ್ಸಾಹನೆ ಕೊಟ್ಟಿದ್ದಾರೆ’, ಈ ರೀತಿಯ ಆರೋಪವು ಈ ಹಿಂದೆ ಜಗನಮೊಹನ ರೆಡ್ಡಿ ಸರಕಾರದ ಮೇಲೆ ಮಾಡಲಾಗಿತ್ತು. ‘ಆಂಧ್ರ ಪ್ರದೇಶದ ಮಾತಾಂತರದ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದೇ ಇದ್ದಲ್ಲಿ, ಅದನ್ನು ಹಿಂಸಾತ್ಮಕ ಸ್ವರೂಪ ತಾಳಬಹುದು’, ಎಂಬ ಅಪಾಯವನ್ನು ಕೆಲವು ಮೂಲಗಳು ವ್ಯಕ್ತಪಡಿಸಿದೆ.