ತಿರುಪತಿ ದೇವಸ್ಥಾನದ ೫೦ ಆಸ್ತಿಗಳನ್ನು ಮಾರಾಟ ಮಾಡುವ ನಿರ್ಣಯವು ಆಂಧ್ರಪ್ರದೇಶ ಸರ್ಕಾರದಿಂದ ವಜಾ

  • ರಾಜ್ಯ ಸರಕಾರವು ಧರ್ಮನಿಷ್ಠ ಹಾಗೂ ಭಕ್ತರ ವಿಶ್ವಾಸವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿಕ್ಕನ್ನು ನಿರ್ಧರಿಸಲಾಗುವುದು !

  • ಇದು ಹಿಂದೂಗಳು ಒಟ್ಟಾಗಿ ವಿರೋಧಿಸಿದ್ದರ ಗೆಲುವಾಗಿದೆ ! ಹಿಂದೂಗಳು ಇದೇ ರೀತಿ ಸಂಘಟನೆಯನ್ನು ತೋರಿಸುವ ಮೂಲಕ ದೇವಾಲಯಗಳನ್ನು ಸರಕಾರಿಕರಣದ ಅಪಾಯದಿಂದ ಮುಕ್ತಗೊಳಿಸಬೇಕು !

  • ‘ಹಿಂದೂ ದೇವಸ್ಥಾನಗಳಲ್ಲಿನ ಹಣವು ಹಿಂದೂ ಧರ್ಮದ ಆಸ್ತಿ ಯಾಗಿದೆ ಮತ್ತು ಅದನ್ನು ಹಿಂದೂ ಧರ್ಮದ ಉನ್ನತಿಗಾಗಿ ಖರ್ಚು ಮಾಡಬೇಕು’, ಎಂಬ ಕಾನೂನನ್ನುಕೇಂದ್ರದ ಸರಕಾರವು ರೂಪಿಸಬೇಕು ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ತಿರುಪತಿ (ಆಂಧ್ರಪ್ರದೇಶ) – ಕರೋನಾ ಮಹಾಮಾರಿಯಿಂದಾಗಿ ಉಂಟಾಗುವ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಲು ಆಂದ್ರಪ್ರದೇಶ ಸರಕಾರದ ಅಧೀನದಲ್ಲಿರುವ ತಿರುಪತಿ ದೇವಸ್ಥಾನದ ಮೊಕ್ತೆಸರರ ಮಂಡಳಿಯು ತಿರುಪತಿ ದೇವಸ್ಥಾನದ ೫೦ ಆಸ್ತಿಗಳನ್ನು ಮಾರಾಟ ಮಾಡುವ ನಿರ್ಣಯವನ್ನು ಕೈಗೊಂಡಿತ್ತು. ಭಕ್ತರ ಭಾವನೆಗಳನ್ನು ಗಣನೆಗೆ ತೆಗೆದುಕೊಂಡು ಮೇಲಿನ ನಿರ್ಧಾರವನ್ನು ಹಿಂತೆಗೆದುಕೊಳ್ಳಲು ಆಂದ್ರ ಪ್ರದೇಶದ ಸರಕಾರವು ನಿರ್ಧರಿಸಿದೆ. (ಆಂದ್ರ ಪ್ರದೇಶದಲ್ಲ್ರಿ ಕಟ್ಟರ ಕ್ರೈಸ್ತ ಆಗಿರುವ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ಸರ್ಕಾರ ಇರುವುದರಿಂದ ಆಂಧ್ರಪ್ರದೇಶದಲ್ಲಿ ಹಿಂದೂ ಧರ್ಮದ ಮೇಲೆ ಆಘಾತವಾಗುತ್ತಿದೆ. ಆದ್ದರಿಂದ, ಈ ರೀತಿಯಾಗಿ ಸಂಘಟಿತರಾಗಿ ಧರ್ಮದ ಮೇಲಿನ ಇಂತಹ ಆಘಾತವನ್ನು ಹಿಮ್ಮೆಟ್ಟಿಸುವುದು ಅಪೇಕ್ಷಿತವಿದೆ ! – ಸಂಪಾದಕ) ಈ ಮಾಹಿತಿಯನ್ನು ರಾಜ್ಯ ಸರಕಾರವು ಮೇ ೨೫ ರಂದು ಘೋಷಿಸಿದ ಒಂದು ಆದೇಶದ ಮೂಲಕ ನೀಡಿತು. ಈ ಆದೇಶದಲ್ಲಿ ‘ಕಾರ್ಯದರ್ಶಿ ಮಂಡಳಿಯ ಅಧಿಕಾರಿಗಳು ಹಿಂದೂ ಭಕ್ತರು, ಧರ್ಮಪ್ರಚಾರಕರು ಮತ್ತು ಇತರ ಧಾರ್ಮಿಕ ಸಂಸ್ಥೆಯೊಂದಿಗೆ ಚರ್ಚೆ ನಡೆಸಬೇಕೆಂದು’ ಸರ್ಕಾರ ಸೂಚಿಸಿದೆ.

೧. ಈ ಆಸ್ತಿ ಉತ್ತರಾಖಂಡ, ಆಂಧ್ರಪ್ರದೇಶ ಮತ್ತು ತಮಿಳುನಾಡು ಈ ರಾಜ್ಯಗಳಲ್ಲಿದೆ. ‘ಹರಾಜು ಮಾಡುವ ಬಗ್ಗೆ ಭಕ್ತರು ಮತ್ತು ಧಾರ್ಮಿಕ ಪುರೋಹಿತರೊಂದಿಗೆ ಚರ್ಚಿಸಿದ ನಂತರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿತ್ತು’, ಎಂದು ದೇವಾಲಯ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

೨. ಈ ಹಿಂದೆ ತೆಗೆದುಕೊಂಡಿದ್ದ ದೇವಸ್ಥಾನದ ೫೦ ಆಸ್ತಿಗಳನ್ನು ಮಾರಾಟ ಮಾಡುವ ಆದೇಶವಿರುದ್ಧ ಹಿಂದೂ ಧರ್ಮಪ್ರೇಮಿ ಮತ್ತು ಭಕ್ತರು ತೀವ್ರವಾಗಿ ವಿರೋಧಿಸಿದ್ದರು. ‘ಇದು ಕೇವಲ ಆರ್ಥಿಕ ಸಮಸ್ಯೆಯನ್ನು ಪರಿಹರಿಸುವ ಮಾರ್ಗವಾಗಿರದೇ ಹಿಂದೂ ಧರ್ಮದ ಮೇಲೆ ಆಘಾತ ಮಾಡಲು ರಚಿಸಿದ ದೊಡ್ಡ ಪಿತೂರಿಯಾಗಿದೆ’ ಎಂದು ಆರೋಪಿಸಲಾಗಿತ್ತು. ಈ ತೀವ್ರ ವಿರೋಧವನ್ನು ಗಣನೆಗೆ ತೆಗೆದುಕೊಂಡು ಆಂಧ್ರಪ್ರದೇಶ ಸರ್ಕಾರವು ದೇವಸ್ಥಾನದ ವ್ಯವಸ್ಥಾಪನೆಯ ನಿರ್ಧಾರವನ್ನು ಹಿಂತೆಗೆದುಕೊಂಡಿದೆ, ಎಂದು ಹೇಳಲಾಗುತ್ತಿದೆ.

೩. ‘ಆಂಧ್ರಪ್ರದೇಶದ ಸರಕಾರವು ಈ ಆಸ್ತಿಗಳ ಉಪಯೋಗವನ್ನು ದೇವಸ್ಥಾನ, ಧರ್ಮಪ್ರಸಾರ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸಬಹುದೇ ?’, ಇದರ ಬಗ್ಗೆ ವಿಚಾರ ಮಾಡಲು ದೇವಸ್ಥಾನ ಮಂಡಳಿಗೆ ಹೇಳಿದ್ದಾರೆ.

೪. ಯಾವ ಸ್ಥಳದಲ್ಲಿ ಆಸ್ತಿಗಳನ್ನು ಹರಾಜು ಮಾಡುವವರಿದ್ದರೋ, ಅದರಲ್ಲಿ ಸಣ್ಣ ಮನೆಗಳು, ಮನೆಯೊಟ್ಟಿಗೆ ಭೂಮಿ ಮತ್ತು ಕೃಷಿಭೂಮಿಗಳು ಸೇರಿವೆ. ಈ ಸಂಪತ್ತನ್ನು ಭಕ್ತರು ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಹಲವು ದಶಕಗಳ ಹಿಂದೆ ದಾನ ಮಾಡಿದ್ದರು. ಅವುಗಳನ್ನು ನಿರ್ವಹಿಸಲು ಸಾಧ್ಯವಿಲ್ಲ, ಮತ್ತು ಅವರಿಂದ ಯಾವುದೇ ಆದಾಯವನ್ನು ಗಳಿಸುವ ಸಾಧ್ಯತೆಯಿಲ್ಲ. ಈ ಎಲ್ಲಾ ಸಂಪತ್ತು ಅತ್ಯಲ್ಪವಾಗಿದ್ದು ಮತ್ತು ದೇವಾಲಯಕ್ಕೆ ಹೆಚ್ಚು ಪ್ರಯೋಜನವಿಲ್ಲ. ಹೀಗೆ ಆಂಧ್ರಪ್ರದೇಶದಲ್ಲಿ ೨೬ ಆಸ್ತಿಗಳು ಮತ್ತು ತಮಿಳುನಾಡಿನಲ್ಲಿ ೨೩ ಆಸ್ತಿಗಳಿದ್ದರೇ, ಹೃಷಿಕೇಶನಲ್ಲಿ ಒಂದು ಆಸ್ತಿ ಇದೆ. ಈ ಹರಾಜಿನಿಂದ ೨೪ ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ, ಎಂಬ ಮಾಹಿತಿಯನ್ನು ದೇವಸ್ಥಾನ ಮಂಡಳಿಯ ಅಧ್ಯಕ್ಷ ವೈ.ವಿ.ಸುಬ್ಬಾ ರೆಡ್ಡಿ ತಿಳಿಸಿದ್ದಾರೆ.