ಭಾರತ ಮತ್ತು ಚೀನಾ ನಡುವಿನ ೬ ಸುತ್ತುಗಳ ಮಾತುಕತೆಯ ನಂತರವೂ ಲಡಾಖ್‌ನಲ್ಲಿ ಮುಂದುವರಿದ ಗಡಿ ವಿವಾದ

ಚರ್ಚೆಯ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳದ ಚೀನಾವು ಅದು ಯಾವ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುತ್ತದೆ, ಅದೇ ಭಾಷೆಯಲ್ಲಿ ಉತ್ತರಿಸುವುದು ಸೂಕ್ತ !

ನವ ದೆಹಲಿ : ಲಡಾಖ್‌ನ ಗಾಲ್ವಾನ್ ಕಣಿವೆಯ ಕುರಿತು ಚೀನಾ ಮತ್ತು ಭಾರತ ನಡುವೆ ಆರು ಸುತ್ತಿನ ಮಾತುಕತೆ ನಡೆಸಿದ ನಂತರ ಸೂಕ್ತ ನಿರ್ಣಯ ಬಂದಿಲ್ಲ. ಆದ್ದರಿಂದ ಈಗ ಭಾರತ ಅಲ್ಲಿ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಲು ಪ್ರಾರಂಭಿಸಿದೆ. ಈ ಪ್ರದೇಶದಲ್ಲಿ ಚೀನಾವು ೫,೦೦೦ ಸೈನಿಕರನ್ನು ನೇಮಿಸಿದ್ದು ೧೦೦ ಕ್ಕೂ ಹೆಚ್ಚು ಡೇರೆಗಳನ್ನು ಸ್ಥಾಪಿಸಲಾಗಿದೆ. ಭಾರತೀಯ ಸೈನಿಕರ ತುಲನೆಯಲ್ಲಿ ಚೀನಾದ ಸೈನಿಕರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಯುದ್ಧ ಸಾಮಗ್ರಿಗಳನ್ನು ಸಹ ದೊಡ್ಡ ಪ್ರಮಾಣದಲ್ಲಿ ತರಲಾಗಿದೆ.