ಅಸ್ಸಾಂನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಐವರು ಮತಾಂಧರು ಮಾಡಿದ ಮಾರಣಾಂತಿಕ ಹಲ್ಲೆಯಲ್ಲಿ ಹಿಂದೂ ತರಕಾರಿ ಮಾರಾಟಗಾರನ ಹತ್ಯೆ

  • ಹಿಂದೂಗಳಿಗೆ ಅಸಹಿಷ್ಣುತೆಯ ಪಟ್ಟಕಟ್ಟಿ ಅವರನ್ನು ಟೀಕಿಸುವ ಜಾತ್ಯತೀತವಾದಿಗಳು ಮತ್ತು ‘ಪ್ರಶಸ್ತಿ ಹಿಂತಿರುಗಿಸುವ’ ಸಮೂಹಗಳು ಈಗೆಲ್ಲಿವೆ ?

  • ಇಂತಹ ಘಟನೆಗಳು ಮುಸಲ್ಮಾನರ ಸಂದರ್ಭದಲ್ಲಿ ಇತರ ಧರ್ಮಿಯರಿಂದ ಆಗುತ್ತಿದ್ದಲ್ಲಿ, ಅದು ಅಂತರರಾಷ್ಟ್ರೀಯ ಸುದ್ದಿಯಾಗುತ್ತಿತ್ತು ಮತ್ತು ಒಂದೇ ಮಾನಸಿಕತೆಯ ಕಮ್ಯುನಿಸ್ಟ್, ಜಾತ್ಯತೀತ, ಪ್ರಗತಿಪರರು ಹಿಂದೂಗಳ ಮೇಲೆ ಹೌರಾರುತ್ತಿದ್ದರು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಗೌಹಟ್ಟಿ (ಅಸ್ಸಾಂ) – ಅಸ್ಸಾಂ ನ ಮನಾಹಕುಚಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣದಿಂದಾಗಿ ಫೈಜುಲ್ ಅಲಿ, ಲಾಜಿಲ್ ಅಲಿ, ಶಬ್ಬೀರ್ ಅಲಿ, ಯೂಸುಫ್ ಅಲಿ ಮತ್ತು ಫರ್ಜಾನ್ ಅಲಿ ಇವರು ಸನಾತನ ಡೆಕಾ ಎಂಬ ತರಕಾರಿ ಮಾರಾಟಗಾರನ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿ ಆತನ ಹತ್ಯೆ ಮಾಡಿದರು. ಸನಾತನ ಡೆಕಾ ಇವರು ಬೈಸಿಕಲ್‌ನಲ್ಲಿ ತರಕಾರಿಗಳನ್ನು ಮಾರುವ ವ್ಯವಸಾಯವನ್ನು ಮಾಡುತ್ತಿದ್ದರು. ಅವರು ಮನಹುಕುಚಿ ಗ್ರಾಮದಲ್ಲಿ ತರಕಾರಿಗಳನ್ನು ಮಾರಾಟ ಮಾಡುತ್ತಿರುವಾಗ ಅವರ ಬೈಸಿಕಲ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತು. ದ್ವಿಚಕ್ರ ವಾಹನದಲ್ಲಿದ್ದ ಫೈಜುಲ್ ಅಲಿ ಮತ್ತು ಲಾಜಿಲ್ ಅಲಿ ಕೋಪಗೊಂಡು ಸನಾತನ ಆತನ ಮೇಲೆ ಹಲ್ಲೆಯನ್ನು ಮಾಡಿದರು. ನಂತರ ಅವನು ತನ್ನ ಕೆಲವು ಸಹೋದ್ಯೋಗಿಗಳನ್ನು ಕರೆದನು ಮತ್ತು ಎಲ್ಲರೂ ಒಟ್ಟಾಗಿ ಸನಾತನ ಡೆಕಾ ಮೇಲೆ ಹಲ್ಲೆ ಮಾಡಿದರು. ಅದರಲ್ಲಿ ಆತ ಅಸುನೀಗಿದನು . ಈ ಘಟನೆಯನ್ನು ದಾಖಲಿಸಲಾಗಿದ್ದು ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ.