ಹಿಂದೂಗಳ ವಿರೋಧದ ನಂತರ ಕ್ರೈಸ್ತ ಮಿಷನರಿಗಳ ಒತ್ತಡದಿಂದ ಕನ್ಯಾಕುಮಾರಿಯಲ್ಲಿ ಇರುವ ಭಾರತಮಾತೆಯ ಮುಚ್ಚಿದ್ದ ಮೂರ್ತಿಯನ್ನು ತೆಗೆಯಲಾಯಿತು

  • ಭಾರತ ಮಾತೆಯ ಮೂರ್ತಿಯನ್ನು ವಿರೋಧಿಸುವ ಕ್ರೈಸ್ತ ಮಿಷನರಿಗಳು ದೇಶದ್ರೋಹಿಗಳಾಗಿದ್ದಾರೆ ! ತಮಿಳುನಾಡು ಸರಕಾರವು ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು !

  • ಕ್ರೈಸ್ತ ಮಿಷನರಿಗಳ ಬೀಡಾಗಿರುವ ಹಿಂದೂವಿರೋಧಿ ಮಾಧ್ಯಮಗಳು ಈ ಸುದ್ದಿಯನ್ನು ಎಂದಿಗೂ ತೋರಿಸುವುದಿಲ್ಲ ಎಂಬುದನ್ನು ಗಮನದಲ್ಲಿಡಿ !

ಕನ್ಯಾಕುಮಾರಿ (ತಮಿಳುನಾಡು) – ಇಲ್ಲಿ ಕ್ರೈಸ್ತ ಮಿಷನರಿಗಳು ಮಾಡಿದ ವಿರೋಧದಿಂದಾಗಿ ಭಾರತಮಾತೆಯ ಮೂರ್ತಿಯನ್ನು ಜಿಲ್ಲಾಡಳಿತ ವತಿಯಿಂದ ಮುಚ್ಚಿಡಲಾಗಿತ್ತು. ಆಡಳಿತದ ಈ ಕ್ರಮವನ್ನು ದೇಶಪ್ರೇಮಿಗಳು ವಿರೋಧಿಸಿದ ನಂತರ ಮೂರ್ತಿಯ ಮೇಲಿನ ಹೊದಿಕೆಯನ್ನು ತೆಗೆದುಹಾಕಲಾಯಿತು. ಈ ಬಗ್ಗೆ ಬಿಜೆಪಿ ಮಾಜಿ ಸಂಸದ ತರುಣ್ ವಿಜಯ್ ಟ್ವೀಟ್ ಮಾಡಿದ್ದಾರೆ. ಮೂರ್ತಿಯನ್ನು ಇಲ್ಲಿನ ಅಮ್ಮನ್ ದೇವಸ್ಥಾನದಲ್ಲಿ ಸ್ಥಾಪಿಸಲಾಗಿತ್ತು. ಕೆಲವು ಕ್ರೈಸ್ತ ಮಿಷನರಿಗಳು ಈ ಮೂರ್ತಿಯನ್ನು ವಿರೋಧಿಸಿದಾಗ ಆಡಳಿತವು ಅದನ್ನು ಮುಚ್ಚಿಹಾಕಿತು. ಇದನ್ನು ಚೆನ್ನೈನ ಹಿಂದುತ್ವನಿಷ್ಠ ಸಂಘಟನೆಯಾದ ‘ಹಿಂದೂ ಮಕ್ಕಲ್ ಕಚ್ಚಿ’ ವಿರೋಧಿಸಿತು. ಈ ಸಂಘಟನೆಯ ಅಧ್ಯಕ್ಷರಾದ ಶ್ರೀ. ಅರ್ಜುನ ಸಂಪತ್ ಇವರು ಮಾತನಾಡುತ್ತ, ‘ಭಾರತ ಮಾತೆಯು ಇಡೀ ದೇಶದ ತಾಯಿಯಾಗಿದ್ದಾರೆ. ಬಿಜೆಪಿ ನಾಯಕರು ಸೇರಿದಂತೆ ಹಲವಾರು ಸಂಘಟನೆಗಳು ತಮಿಳುನಾಡು ಮುಖ್ಯಮಂತ್ರಿಯವರಲ್ಲಿ ‘ಮೂರ್ತಿಯನ್ನು ಮುಚ್ಚಿಡುವುದು ಅಯೋಗ್ಯವಾಗಿದೆ ಅದನ್ನು ತೆಗೆಯಬೇಕು’, ಎಂದು ಒತ್ತಾಯಿಸಿದ ನಂತರ ಆಡಳಿತದ ವತಿಯಿಂದ ಮೂರ್ತಿಯ ಮೇಲಿನ ಹೊದಿಕೆಯನ್ನು ತೆಗೆಯಲಾಯಿತು.’