ಕೊರೋನಾ ವಿರುದ್ಧ ಹೋರಾಡಲು ಆಯುರ್ವೇದ ಲಾಭದಾಯಕ ! – ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ

ಕೇಂದ್ರ ಸರಕಾರವು ಆಯುರ್ವೇದದ ಮೂಲಕ ಚಿಕಿತ್ಸೆಗೆ ಬೇಕಾಗುವ ಪ್ರಮಾಣಪತ್ರವನ್ನು ಒದಗಿಸಿ ಕೊಡಬೇಕು, ಆಗ ಮಾತ್ರ ಭಾರತೀಯರು ಮತ್ತು ವಿದೇಶಿಯರು ನಿಜವಾದ ಅರ್ಥದಲ್ಲಿ ಆಯುರ್ವೇದದ ಲಾಭವನ್ನು ಪಡೆದುಕೊಳ್ಳಬಹುದು !

ನವ ದೆಹಲಿ: ಆಯುರ್ವೇದವು ಭಾರತದ ಪಾರಂಪರಿಕ ಔಷಧಿ ಜ್ಞಾನದ ಮೂಲವಾಗಿದೆ. ‘ಚೌಧರಿ ಬ್ರಹ್ಮಾ ಪ್ರಕಾಶ ಆಯುರ್ವೇದ ಚರಕ್ ಸಂಸ್ಥಾನ’ದಲ್ಲಿ ಸಮಗ್ರ ಚಿಕಿತ್ಸೆಯ ದೃಷ್ಟಿಯಿಂದ ಕೊರೋನ ಪೀಡಿತರಿಗೆ ಉತ್ತಮ ಚಿಕಿತ್ಸೆ ಹಾಗೂ ಜನರ ಕಲ್ಯಾಣಕ್ಕಾಗಿ ಆಯುರ್ವೇದವನ್ನು ಬಳಸಲಾಗುತ್ತಿದೆ. ಜಗತ್ತಿನ ಎಲ್ಲ ಜನರಿಗೆ ವಿಶೇಷವಾಗಿ ಕೊರೋನಾದ ವಿರುದ್ಧ ಹೋರಾಡಲು ಆಯುರ್ವೇದದ ಜ್ಞಾನವು ಪ್ರಯೋಜನಕಾರಿಯಾಗಲಿದೆ, ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ ಇವರು ಹೇಳಿದ್ದಾರೆ. ಅವರು ದೆಹಲಿಯ ನಜಾಫ್‌ಗಡನ ‘ಚೌಧರಿ ಬ್ರಹ್ಮ ಪ್ರಕಾಶ ಆಯುರ್ವೇದ ಚರಕ ಸಂಸ್ಥಾನ’ ಈ ಆಯುರ್ವೇದ ಆಸ್ಪತ್ರೆಯ ಕರೋನಾ ಪೀಡಿತರ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಈ ರೀತಿ ಹೇಳಿದ್ದಾರೆ. ಈ ಸಮಯದಲ್ಲಿ ಸಂಸ್ಥೆಯ ನಿರ್ದೇಶಕರು ಮತ್ತು ಪ್ರಾಂಶುಪಾಲರಾದ ಡಾ. ವಿದುಲಾ ಗುರ್ಜರವಾರ, ಅದೇರೀತಿ ಇತರ ವೈದ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಈ ಸಮಯದಲ್ಲಿ ಡಾ. ಹರ್ಷವರ್ಧನ ಇವರು ಕರೋನಾ ಮೇಲಿನ ಚಿಕಿತ್ಸೆಯ ಬಗ್ಗೆ ಅಲ್ಲಿನ ಅಧಿಕಾರಿಗಳ ಹಾಗೂ ವೈದ್ಯರೊಂದಿಗೆ ಚರ್ಚಿಸಿದರು.

೧. ಡಾ. ಹರ್ಷವರ್ಧನ ತಮ್ಮ ಮಾತನ್ನು ಮುಂದುವರಿಸುತ್ತ, ‘ಆಯುರ್ವೇದದ ಸಿದ್ಧಾಂತಕ್ಕನುಸಾರ, ಕೊರೋನಾ ಪೀಡಿತರ ಮೇಲೆ ಚಿಕಿತ್ಸೆ ಹಾಗೂ ಆರೈಕೆ ಮಾಡುವ ಭಾರತದ ಏಕೈಕ ಆಯುರ್ವೇದ ಆಸ್ಪತ್ರೆ ಇದಾಗಿದೆ. ಈ ಆಸ್ಪತ್ರೆಯು ಇಡೀ ಭಾರತಕ್ಕೆ ಅನುಕರಣೀಯ ಪಾತ್ರವನ್ನು ವಹಿಸಿದೆ. ಇಲ್ಲಿಯ ಕೊರೋನಾ ಪೀಡಿತ ರೋಗಿಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಕೇಳಿ ನನಗೆ ಸಂತೋಷವಾಗಿದೆ’, ಎಂದರು.

೨. ಈ ಆಸ್ಪತ್ರೆಯಲ್ಲಿ ಒಟ್ಟು ೨೦೧ ಕರೋನಾ ರೋಗಿಗಳನ್ನು ದಾಖಲಿಸಲಾಗಿದೆ. ಈ ಪೈಕಿ ೩೭ ಮಂದಿ ಚೇತರಿಸಿಕೊಂಡಿದ್ದರೆ ೧೦೦ ಜನರನ್ನು ಮನೆಯಲ್ಲಿಯೇ ಪ್ರತ್ಯೇಕಿಕರಣಕ್ಕಾಗಿ ಕಳುಹಿಸಲಾಗಿದೆ. ೧೯ ಜನರನ್ನು ಅವರ ಪರೀಕ್ಷಣೆಯ ನಂತರ ವಿಶೇಷ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಇಲ್ಲಿಯವರೆಗೆ ಕೊರೋನಾ ಪೀಡಿತ ಯಾವುದೇ ರೋಗಿಗಳು ಸಾವನ್ನಪ್ಪಿಲ್ಲ. ಇಲ್ಲಿ ಆಯುಷ್ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.