ಪಾಲಕರೇ, ಮಕ್ಕಳ ಮೇಲೆ ಎಳೆವಯಸ್ಸಿನಲ್ಲಿ ಸಂಸ್ಕಾರ ಮಾಡುವ ಮಹತ್ವ ಅರಿಯಿರಿ !

ಕುಂಬಾರನು ‘ಮಣ್ಣಿನ ಮುದ್ದೆಗೆ ಯಾವ ಆಕಾರವನ್ನು ಕೊಡುತ್ತಾನೆಯೋ, ಆ ಆಕಾರದ ಮಡಕೆಯು ತಯಾರಾಗುತ್ತದೆ. ಒಳ್ಳೆಯ ಆಕಾರವನ್ನು ನೀಡಿದರೆ ಮಾತ್ರ ಮಡಕೆಯು ಒಳ್ಳೆಯದಾಗುತ್ತದೆ. ಒಮ್ಮೆ ಮಡಕೆ ತಯಾರಾದ ಮೇಲೆ ಅದರ ಆಕಾರವನ್ನು ಬದಲಾಯಿಸಲು ಆಗುವುದಿಲ್ಲ. ತಂದೆ-ತಾಯಂದಿರೇ, ನಿಮ್ಮ ‘ಮುದ್ದಿನ ಮಗುವಿನ ಸಂದರ್ಭದಲ್ಲಿಯೂ ಹೀಗೆಯೇ ಆಗುತ್ತದೆ. ಮಕ್ಕಳು ದೊಡ್ಡವರಾದ ಮೇಲೆ ಅವರ ಮೇಲೆ ಒಳ್ಳೆಯ ಸಂಸ್ಕಾರಗಳನ್ನು ಮಾಡುವುದು ಕಠಿಣವಾಗುತ್ತದೆ; ಆದರೆ ಸಣ್ಣವಯಸ್ಸಿನಲ್ಲಿ ಮನಸ್ಸು ಸಂಸ್ಕಾರಕ್ಷಮವಾಗಿರುವುದರಿಂದ ಅವರ ಮೇಲೆ ಒಳ್ಳೆಯ ಸಂಸ್ಕಾರ ಮಾಡುವುದು ಸುಲಭವಾಗಿದೆ. (ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನದ ಗ್ರಂಥ ‘ಸುಸಂಸ್ಕಾರ ಮತ್ತು ಒಳ್ಳೆಯ ಅಭ್ಯಾಸಗಳು)