ಬೆಂಗಳೂರು: ಶಿಕ್ಷಕಿಯಿಂದ ಬೆದರಿಕೆ; 8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು – ಮನೆಗೆಲಸ (ಹೋಮ್‌ವರ್ಕ್) ಅಪೂರ್ಣವಾಗಿದ್ದಕ್ಕಾಗಿ ಶಾಲೆಯಿಂದ 20 ರೂಪಾಯಿ ದಂಡ ವಿಧಿಸಿದ್ದರಿಂದ ಮತ್ತು ಶಾಲೆಯಿಂದ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದರಿಂದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕರ್ನಾಟಕದ ಆನೇಕಲ್‌ನಲ್ಲಿ ನಡೆದಿದೆ. ಮಧುಶ್ರೀ ವಿದ್ಯಾರ್ಥಿನಿಯ ಹೆಸರು. ಆತ್ಮಹತ್ಯೆ ಮಾಡುವ ಮುನ್ನ ಆಕೆ ಬರೆದಿದ್ದ ಒಂದು ಪತ್ರ (ಡೆತ್ ನೋಟ್) ಪತ್ತೆಯಾಗಿದ್ದು, ಅದರಲ್ಲಿ ಆತ್ಮಹತ್ಯೆಗೆ ಕಾರಣವನ್ನು ಬರೆಯಲಾಗಿದೆ.

ಈ ಘಟನೆಯ ನಂತರ ಮಧುಶ್ರೀ ಅವರ ಕುಟುಂಬದವರು ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ತಮ್ಮ ಮಗಳಿಗೆ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ಜವಾಬ್ದಾರರಾಗಿರುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

  • ಇಂತಹ ಉದ್ಧಟ ಶಿಕ್ಷಕರ ವಿರುದ್ಧ ಶಿಕ್ಷಣ ಇಲಾಖೆ ಯಾವ ಕ್ರಮ ಕೈಗೊಳ್ಳುವುದು?
  • ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣದಲ್ಲಿ ಜೀವನದ ಉದ್ದೇಶ ಮತ್ತು ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂಬ ಶಿಕ್ಷಣ ಸಿಗುತ್ತಿಲ್ಲ ಎಂಬುದಕ್ಕೆ ಇದೇ ಒಂದು ಉದಾಹರಣೆ! ಹಿಂದೂ ರಾಷ್ಟ್ರದಲ್ಲಿ ಧರ್ಮಶಿಕ್ಷಣದ ಮೂಲಕ ಜೀವನದ ಉದ್ದೇಶವನ್ನು ಕೂಡ ಕಲಿಸಲಾಗುವುದು!