ಅವಧಿ ಮುಗಿದ ನೂಡಲ್ಸ್ ತಿಂದು ಬಾಲಕಿ ಅಸ್ವಸ್ಥ!

ಕಾಂಗಡಾ (ಹಿಮಾಚಲ ಪ್ರದೇಶ) – ಅವಧಿ ಮುಗಿದ (ಎಕ್ಸ್‌ಪೈರಿ ಡೇಟ್) ಮುಗಿದ ‘ಸ್ಪೈಸಿ ಕೊರಿಯನ್ ಇನ್ ಸ್ಟಂಟ್ ನೂಡಲ್ಸ್’ ತಿಂದ ಪರಿಣಾಮ ಅಪ್ರಾಪ್ತ ಬಾಲಕಿಯೊಬ್ಬಳು ಅಸ್ವಸ್ಥಗೊಂಡ ನಂತರ, ಗ್ರಾಹಕ ಆಯೋಗವು ‘ರಿಲಯನ್ಸ್ ರಿಟೇಲ್’ ಅಂಗಡಿಗೆ ಸದರಿ ವಸ್ತುವಿನ ಹಣ, ನಷ್ಟ ಪರಿಹಾರವಾಗಿ ೨೦,೦೦೦ ರೂಪಾಯಿ ಮತ್ತು ಕಾನೂನು ವೆಚ್ಚ ಪಾವತಿಸುವಂತೆ ದಂಡ ವಿಧಿಸಿದೆ. ಇಲ್ಲಿನ ಜುಗಲ್ ಕಿಶೋರ್ ಎಂಬುವವರು ‘ರಿಲಯನ್ಸ್ ಸ್ಮಾರ್ಟ್ ಪಾಯಿಂಟ್’ ಅಂಗಡಿಯ ವಿರುದ್ಧ ಜಿಲ್ಲಾ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು, ಆಗ ೩ ತಿಂಗಳ ಹಿಂದೆಯೇ ಅವಧಿ ಮುಗಿದಿದ್ದ ನೂಡಲ್ಸ್ ಅನ್ನು ಅವರಿಗೆ ಮಾರಾಟ ಮಾಡಲಾಗಿತ್ತು.
ಆರೋಪ ನಿರಾಕರಿಸಿದ ರಿಲಯನ್ಸ್
ನೂಡಲ್ಸ್ ನಿಂದಲೇ ಬಾಲಕಿಯ ಆರೋಗ್ಯ ಹದಗೆಟ್ಟಿದೆ ಎಂಬುದಕ್ಕೆ ಯಾವುದೇ ವೈದ್ಯಕೀಯ ಅಥವಾ ಪ್ರಯೋಗಾಲಯದ ತಪಾಸಣೆಯ ಪುರಾವೆಗಳು ಕಂಡುಬಂದಿಲ್ಲ ಎಂದು ‘ರಿಲಯನ್ಸ್ ರಿಟೇಲ್’ ವಾದಿಸಿದೆ. ಅಲ್ಲದೆ ಈ ಪ್ಯಾಕೆಟ್ ಸೀಲ್ ಪ್ಯಾಕ್ ಆಗಿತ್ತು. ಅದರ ಮೇಲೆ ಸ್ಪಷ್ಟವಾಗಿ ಅವಧಿಯ ದಿನಾಂಕವನ್ನು ಬರೆಯಲಾಗಿತ್ತು. ಗ್ರಾಹಕರು ವಸ್ತುವನ್ನು ಖರೀದಿಸುವಾಗ ಸರಿಯಾಗಿ ಪರಿಶೀಲಿಸಬೇಕಾಗಿತ್ತು ಎಂದು ಕೂಡ ಅಂಗಡಿಯ ಮಾಲೀಕರು ಹೇಳಿದ್ದಾರೆ.
ಗ್ರಾಹಕರು ಅವಧಿಯ ದಿನಾಂಕವನ್ನು ನೋಡುವುದು ಅಪೇಕ್ಷಿತವಲ್ಲ! – ಜಿಲ್ಲಾ ಗ್ರಾಹಕರ ನ್ಯಾಯಾಲಯ
ನ್ಯಾಯಾಲಯವು ತನ್ನ ತೀರ್ಪಿನಲ್ಲಿ, ಅವಧಿ ಮುಗಿದ ಯಾವುದೇ ಆಹಾರ ಪದಾರ್ಥವನ್ನು ಅಂಗಡಿಯಲ್ಲಿ ಇಡದಂತೆ ನೋಡುವುದು ಅಥವಾ ಗ್ರಾಹಕರಿಗೆ ಮಾರಾಟ ಮಾಡದಂತೆ ನೋಡಿಕೊಳ್ಳುವುದು ಅಂಗಡಿಯವನ ತಪ್ಪಿಸಲಾಗದ ಕರ್ತವ್ಯವಾಗಿದೆ. ಗ್ರಾಹಕರು ದೈನಂದಿನ ಪದಾರ್ಥಗಳನ್ನು ಖರೀದಿಸುವಾಗ ಎಲ್ಲಾ ಪದಾರ್ಥಗಳನ್ನು ಮೇಲೆ-ಕೆಳಗೆ, ತಿರುಗಿಸಿ ನೋಡಿ ಅದರ ಮೇಲಿನ ದಿನಾಂಕವನ್ನು ಪರಿಶೀಲಿಸುವುದು ಅಪೇಕ್ಷಿತವಲ್ಲ ಎಂದು ಹೇಳಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ