
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಸುಪ್ರೀಂ ಕೋರ್ಟ್ ೯ ನವೆಂಬರ್ ೨೦೧೯ ರಂದು ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಅಯೋಧ್ಯೆಯ ಭೂಮಿಯನ್ನು ಶ್ರೀ ರಾಮಲಲ್ಲಾಗೆ ನೀಡಲು ನಿರ್ಧರಿಸಿತು ಮತ್ತು ಅದಕ್ಕೆ ಪ್ರತಿಯಾಗಿ ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯಲ್ಲೇ ಸುನ್ನಿ ವಕ್ಫ್ ಬೋರ್ಡ್‌ಗೆ ೫ ಎಕರೆ ಪರ್ಯಾಯ ಭೂಮಿಯನ್ನು ನೀಡುವಂತೆ ಆದೇಶಿಸಿತು. ಈ ತೀರ್ಪಿನ ನಂತರ ಮುಸ್ಲಿಂ ಸಮುದಾಯದ ಉದಾಸೀನತೆ ಮತ್ತು ದೇಣಿಗೆಯ ತೀವ್ರ ಕೊರತೆಯಿಂದಾಗಿ ಧನ್ನಿಪುರದಲ್ಲಿ ನಿರ್ಮಿಸಲಾಗುತ್ತಿದ್ದ ಮಸೀದಿ ಯೋಜನೆ ಕುಸಿದಿದೆ. ಈ ಕಾರಣದಿಂದಾಗಿ ಮಸೀದಿಯ ಗಾತ್ರವನ್ನು ಅತ್ಯಂತ ಚಿಕ್ಕದಾಗಿ ಮಾಡಲಾಗಿದೆ.
೧. ‘ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್’ ಮಸೀದಿಯೊಂದಿಗೆ ೫ ಎಕರೆ ಭೂಮಿಯಲ್ಲಿ ಆಸ್ಪತ್ರೆ ಮತ್ತು ಗ್ರಂಥಾಲಯದಂತಹ ದೊಡ್ಡ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿತ್ತು; ಆದರೆ ಈ ನಿರ್ಧಾರವನ್ನು ಈಗ ಕೈಬಿಡಲಾಗಿದೆ.
೨. ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಉತ್ತರ ಪ್ರದೇಶ ಸರಕಾರವು ಅಯೋಧ್ಯೆಯ ಧನ್ನಿಪುರ ಗ್ರಾಮದಲ್ಲಿ ೫ ಎಕರೆ ಭೂಮಿಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಿತ್ತು. ಈ ಸ್ಥಳವು ಶ್ರೀರಾಮ ಮಂದಿರದಿಂದ ಸುಮಾರು ೨೫ ಕಿಲೋಮೀಟರ್ ದೂರದಲ್ಲಿ ಲಕ್ನೋ-ಗೊರಖ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿದೆ.
೩. ಈ ಸಣ್ಣ ಮಸೀದಿಯನ್ನು ನಿರ್ಮಿಸಲು ಸಹ ಕನಿಷ್ಠ ೩ ಕೋಟಿಯಿಂದ ೫ ಕೋಟಿ ರೂಪಾಯಿಗಳ ನಿಧಿಯ ಅಗತ್ಯವಿದೆ. ಅನೇಕ ಪ್ರಯತ್ನಗಳ ನಂತರವೂ ಫೌಂಡೇಶನ್ ಇದುವರೆಗೆ ಕೇವಲ ೧ ಕೋಟಿ ೫ ಲಕ್ಷ ರೂಪಾಯಿಗಳ ದೇಣಿಗೆಯನ್ನು ಮಾತ್ರ ಸಂಗ್ರಹಿಸಲು ಸಾಧ್ಯವಾಗಿದೆ. ಈ ಮೊತ್ತವು ಈ ಯೋಜನೆಗೆ ತೀರಾ ಅತ್ಯಲ್ಪವಾಗಿದೆ.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ