ಉಗ್ರಗಾಮಿಗಳ ವಶದಲ್ಲಿದ್ದೇನೆ ಎಂದು ಸುಳ್ಳು ಹೇಳಿ ಹಣ ವಸೂಲಿ !

ಮುಜಾಫರ್‌ಪುರ (ಬಿಹಾರ) – ಸಾಮಾಜಿಕ ಜಾಲತಾಣಗಳ (ಸೋಷಿಯಲ್ ಮೀಡಿಯಾ) ಮೂಲಕ ಪರಿಚಯ ಬೆಳೆಸಿಕೊಂಡು ೨೧ ವರ್ಷದ ಹಿಂದೂ ಯುವತಿಗೆ ವಂಚಿಸಿ, ಲೂಟಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಕ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುವ ಮೊಹಮ್ಮದ್ ಅರ್ಮಾನ್ ಎಂಬ ಮುಸ್ಲಿಂ ಯುವಕ ತಾನು ಸೈನಿಕನೆಂದು ಹೇಳಿಕೊಂಡು ಹಿಂದೂ ಯುವತಿಯನ್ನು ಪ್ರೇಮದ ಜಾಲಕ್ಕೆ ಸೆಳೆದಿದ್ದನು. ಆ ನಂತರ ಮದುವೆಯ ಆಮಿಷ ತೋರಿಸಿ ಆಕೆಯಿಂದ ಹಣ ವಸೂಲಿ ಮಾಡಿದ್ದಾನೆ. ಕೆಲ ದಿನಗಳ ನಂತರ ಆ ಯುವಕನಿಗೆ ಈಗಾಗಲೇ ಮದುವೆಯಾಗಿದ್ದು, ಆತ ಸೈಕಲ್ ಅಂಗಡಿಯಲ್ಲಿ ಪಂಕ್ಚರ್ ಹಾಕುವ ಕೆಲಸ ಮಾಡುತ್ತಿದ್ದಾನೆ ಎಂಬ ನಿಜಾಂಶ ಯುವತಿಗೆ ತಿಳಿದುಬಂದಿದೆ. ಸಂತ್ರಸ್ತ ಯುವತಿ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಮುಖ್ಯ ಆರೋಪಿ ಸೇರಿದಂತೆ ೬ ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
೧. ಮೊದಲ ಭೇಟಿಗೂ ಮುನ್ನ ಅರ್ಮಾನ್ ಸೈನಿಕರಂತೆ ಕೇಶವಿನ್ಯಾಸ (ಹೇರ್ ಸ್ಟೈಲ್) ಮಾಡಿಕೊಂಡು ಮತ್ತು ಸೇನೆಯ ಸಮವಸ್ತ್ರ ಧರಿಸಿ ಯುವತಿಯನ್ನು ಭೇಟಿಯಾಗಲು ಹೋಗಿದ್ದನು.
೨. ವಿಡಿಯೋ ಕಾಲ್ ಮೂಲಕ ಮಾತಾಡುವಾಗ ಆತ ಸೇನೆಯ ಸಮವಸ್ತ್ರ ಮತ್ತು ಶಸ್ತ್ರಾಸ್ತ್ರಗಳನ್ನು ತೋರಿಸುತ್ತಿದ್ದನು. ಕೆಲವೊಮ್ಮೆ ತಾನು ಪಾಕಿಸ್ತಾನದ ಗಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದನು, ಇನ್ನು ಕೆಲವೊಮ್ಮೆ ತಾನು ಉಗ್ರಗಾಮಿಗಳ ವಶದಲ್ಲಿದ್ದೇನೆ ಎಂದು ಸುಳ್ಳು ಹೇಳಿ ಹಣದ ಅವಶ್ಯಕತೆಯಿದೆ ಎಂದು ನಂಬಿಸುತ್ತಿದ್ದನು.
೩. ಆತ ಬೇರೆ ಬೇರೆ ಸಂದರ್ಭಗಳಲ್ಲಿ ಸಂತ್ರಸ್ತ ಹಿಂದೂ ಯುವತಿಯಿಂದ ‘ಆನ್‌ಲೈನ್’ ಮೂಲಕ ಹಣ ಪಡೆದುಕೊಂಡಿದ್ದನು. ಸದ್ಯ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !