ಮೊಬೈಲ್ ನ ಟಾರ್ಚ್ ಬೆಳಕಿನಲ್ಲಿ ೯೦ ಕಿ.ಮೀ. ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಚಲಾಯಿಸಿದ ಚಾಲಕ!

ಕೆಟ್ಟುಹೋಗಿದ್ದ 'ಹೆಡ್‌ಲೈಟ್' ನ ದುರಸ್ತಿಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯ!

ಟಾರ್ಚ್ ಲೈಟ್ನೊಂದಿಗೆ ಚಲಿಸುವ ಬಸ್

ಕಲಬುರಗಿ – ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರೊಬ್ಬನು ಮೊಬೈಲ್ ಟಾರ್ಚ್ ನ ಬೆಳಕಿನಲ್ಲಿ ಬಸ್ ಚಲಾಯಿಸಿರುವ ಅಘಾತಕಾರಿ ಘಟನೆ ಕಲಬುರಗಿಯಿಂದ ಚಿಂಚೋಳಿ ಮಾರ್ಗದಲ್ಲಿ ನಡೆದಿದೆ. ಈ ಬಸ್ಸಿನ ನಿರ್ವಾಹಕನು (ಕಂಡಕ್ಟರ್) ಮೊಬೈಲ್ ಟಾರ್ಚ್ ಅನ್ನು ಮುಂಭಾಗದಲ್ಲಿ ಹಿಡಿದುಕೊಂಡರೆ, ಚಾಲಕನು ಅದೇ ಬೆಳಕಿನಲ್ಲಿ ೯೦ ಕಿ.ಮೀ. ಬಸ್ ಚಲಾಯಿಸಿದ್ದಾನೆ.

ಕಳೆದ ೧೫ ದಿನಗಳಿಂದ ಈ ಬಸ್ಸಿನ ಹೆಡ್‌ಲೈಟ್ ಕೆಟ್ಟುಹೋಗಿದ್ದರೂ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಅದನ್ನು ಸರಿಪಡಿಸುವ ಕಡೆಗೆ ಗಮನ ಹರಿಸಿಲ್ಲ. ಸಾರಿಗೆ ಅಧಿಕಾರಿಗಳ ಈ ಬೇಜವಾಬ್ದಾರಿತನದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, “ಏನಾದರೂ ಅನಾಹುತ ನಡೆದಿದ್ದರೆ ಯಾರು ಜವಾಬ್ದಾರರು?” ಎಂಬ ಪ್ರಶ್ನೆ ಎದ್ದಿದೆ. ಸಂಬಂಧಪಟ್ಟವರು ತಕ್ಷಣವೇ ಗಮನ ಹರಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಪ್ರಯಾಣಿಕರ ಜೀವದ ಜೊತೆ ಆಟವಾಡಿದ ಎಲ್ಲ ಜವಾಬ್ದಾರಿಯುತ ಅಧಿಕಾರಿಗಳನ್ನು ಸರಕಾರವು ತಕ್ಷಣವೇ ಅಮಾನತುಗೊಳಿಸಬೇಕು!