ಗೋವಿನ ಕತ್ತು ಕತ್ತರಿಸಿದ ೪ ಮಂದಿ ಮತಾಂಧರ ಬಂಧನ

ಶಿವಮೊಗ್ಗ – ಜಿಲ್ಲೆಯ ಹೊಸನಗರ ತಾಲೂಕಿನ ಪಟಗುಪ್ಪಾ ಸೇತುವೆಯ ಬಳಿ ಗೋವಿನ ಕತ್ತು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೪ ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಸಲೀಂ ಬಾಳೂರು, ಮಕ್ಬೂಲ್ ಅಹ್ಮದ್ ಬಡಿಗೇರ್, ಸುಲೇಮಾನ್ ಕೊಲಾರಿ ಮತ್ತು ಮಲ್ಲಿಕ್ ರಿಹಾನ್ ಬಂಧಿತ ಆರೋಪಿಗಳಾಗಿದ್ದು, ಇವರೆಲ್ಲರೂ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ನಿವಾಸಿಗಳಾಗಿದ್ದಾರೆ.

ಹೊಸನಗರ ತಾಲೂಕಿನ ಹೊಸಕೊಪ್ಪಾ ಗ್ರಾಮದ ಬಳಿಯ ಪಟಗುಪ್ಪಾ ಸೇತುವೆಯ ಹತ್ತಿರ ಕೆಲವು ಸಮಾಜವಿರೋಧಿ ಶಕ್ತಿಗಳು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಹಸು ಮತ್ತು ಕರುವನ್ನು ಕೊಲೆ ಮಾಡಿ ಘಟನಾ ಸ್ಥಳದಿಂದ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಗೋಪಾಲಕೃಷ್ಣ ಅವರು ನೀಡಿದ ದೂರಿನ ಮೇರೆಗೆ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ’, ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಂಡು ವಿಶೇಷ ತನಿಖಾ ತಂಡದಿಂದ ತನಿಖೆಯನ್ನು ಕೈಗೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಇಂತಹ ಕೃತ್ಯವೆಸಗಲು ಯಾರೂ ಧೈರ್ಯ ಮಾಡದ ರೀತಿಯಲ್ಲಿ ಸರಕಾರವು ಇಂತಹ ಆರೋಪಿಗಳಿಗೆ ಶಿಕ್ಷೆ ನೀಡಬೇಕು ! ಆದಾಗ್ಯೂ, ರಾಜ್ಯದಲ್ಲಿ ಭಯೋತ್ಪಾದಕರನ್ನು ಬಿಡುಗಡೆ ಮಾಡುವ ಮುಸ್ಲಿಂ ಪ್ರೇಮಿ ಕಾಂಗ್ರೆಸ್ ಸರಕಾರ ಇರುವುದರಿಂದ, ಈ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲು ಸರಕಾರ ಎಷ್ಟು ಮಟ್ಟಿಗೆ ಪ್ರಯತ್ನಿಸಲಿದೆ ಎಂಬ ಬಗ್ಗೆ ಸಂಶಯವಿದೆ !