
ಜೈಪುರ (ರಾಜಸ್ಥಾನ) – ರಾಜಸ್ಥಾನದ ಭಯೋತ್ಪಾದನಾ ನಿರೋಧಕ ದಳ(ATS) ರಾಜ್ಯದ 20ಕ್ಕೂ ಹೆಚ್ಚು ನಗರಗಳಲ್ಲಿ ದಾಳಿ ನಡೆಸಿ 28 ಶಂಕಿತರನ್ನು ಬಂಧಿಸಿದೆ. ಬಂಧಿತರು ಪಾಕಿಸ್ತಾನಿ ಉಗ್ರ ಶಹಜಾದ್ ಭಟ್ಟಿ ಜೊತೆ ಸಂಪರ್ಕದಲ್ಲಿದ್ದರು. ಈತ ಸಾಮಾಜಿಕ ಮಾಧ್ಯಮಗಳ ಮೂಲಕ ಹಣ ಮತ್ತು ಪ್ರಚಾರದ ಆಮಿಷವೊಡ್ಡಿ ಜನರೊಂದಿಗೆ ಸ್ನೇಹ ಬೆಳೆಸುತ್ತಿದ್ದನು ಮತ್ತು ನಂತರ ಅವರಿಂದ ಸೂಕ್ಷ್ಮ ಪ್ರದೇಶಗಳ ಛಾಯಾಚಿತ್ರಗಳನ್ನು (ಫೋಟೋಗಳನ್ನು) ತರಿಸಿಕೊಳ್ಳುತ್ತಿದ್ದನು. ಭಟ್ಟಿಯ ಜಾಲದಲ್ಲಿ ಹೆಚ್ಚಾಗಿ ಭಾರತ-ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳ ಯುವಕರು ಸಿಲುಕುತ್ತಿದ್ದಾರೆ.
ಬಂಧಿತರ ಸಾಮಾಜಿಕ ಮಾಧ್ಯಮಗಳ ಖಾತೆಗಳು ಮತ್ತು ಇತರ ಆನ್‌ಲೈನ್ ಚಟುವಟಿಕೆಗಳನ್ನು ತನಿಖೆ ಮಾಡಲಾಗುತ್ತಿದೆ. ತನಿಖಾ ಸಂಸ್ಥೆಗಳ ಪ್ರಕಾರ, ಭಟ್ಟಿ ರಾಜಸ್ಥಾನದ ಜೊತೆಗೆ ಹರಿಯಾಣ, ಪಂಜಾಬ್, ದೆಹಲಿ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲೂ ‘ಸ್ಲೀಪರ್ ಸೆಲ್’ (ರಹಸ್ಯವಾಗಿ ಉಗ್ರರಿಗೆ ಸಹಾಯ ಮಾಡುವ ಮತಾಂಧ ಮುಸ್ಲಿಮರ ಸ್ಥಳೀಯ ಗುಂಪುಗಳು) ಜಾಲವನ್ನು ಸಕ್ರಿಯಗೊಳಿಸಿದ್ದಾನೆ. ಇವರಿಗೆ ಹವಾಲಾ (ಅರಬ್ ಮತ್ತು ದಕ್ಷಿಣ ಏಷ್ಯಾ ದೇಶಗಳು ಹಣ ವರ್ಗಾವಣೆಗಾಗಿ ಬಳಸುವ ಒಂದು ನಿರ್ದಿಷ್ಟ ವ್ಯವಸ್ಥೆ) ಮೂಲಕ ಹಣ ತಲುಪಿಸಲಾಗುತ್ತಿತ್ತು.
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ