
ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದ ಕುರಿತು ಭಾಜಪದ ಮಾಜಿ ಸಂಸದ ವಿನಯ ಕಟಿಯಾರ್ ಅವರು, ಈ ಪ್ರಕರಣದಲ್ಲಿ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಪದಾಧಿಕಾರಿ ಗೋಪಾಲ್ ರಾವ್ ಅವರ ಹೆಸರುಗಳು ಮುನ್ನಲೆಗೆ ಬಂದಿದ್ದು, ತನಿಖೆಯ ಆಧಾರದ ಮೇಲೆ ಚಂಪತ್ ರಾಯ್ ಮುಂದಿನ ದಿನಗಳಲ್ಲಿ ಜೈಲಿಗೂ ಹೋಗಬೇಕಾಗಬಹುದು ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಮತ್ತು ಎಲ್ಲವೂ ಸರಿಯಾಗಲಿದೆ. ಈ ಪ್ರಕರಣದಲ್ಲಿ ಈಗಲೇ ಅಂತಿಮ ತೀರ್ಮಾನಕ್ಕೆ ಬರುವುದು ಆತುರದ ನಿರ್ಧಾರವಾಗುತ್ತದೆ, ಏನೇ ಆದರೂ ಸೂಕ್ತವಾಗಿಯೇ ಆಗಲಿದೆ. ವಿಶೇಷ ತನಿಖಾ ತಂಡವು ಒಂದೇ ದಿನದಲ್ಲಿ ತನಿಖೆ ಪೂರ್ಣಗೊಳಿಸುವುದಿಲ್ಲ, ಅದಕ್ಕೆ 2-3 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ತಗುಲಬಹುದು ಎಂದಿದ್ದಾರೆ.
ಕಟಿಯಾರ್ ಮಾತು ಮುಂದುವರೆಸಿ, “ಗೋಪಾಲ್ ರಾವ್ ಒಬ್ಬ ನಿರುಪಯುಕ್ತ ಮನುಷ್ಯ. ಆತನಿಗೂ ಟ್ರಸ್ಟ್‌ಗೂ ಯಾವುದೇ ಸಂಬಂಧವಿರಲಿಲ್ಲ, ಆತ ಏನನ್ನೂ ಮಾಡುತ್ತಿರಲಿಲ್ಲ. ಆತನನ್ನು ಇಲ್ಲಿಗೆ ಯಾರು ನೇಮಿಸಿ ಕಳುಹಿಸಿದ್ದಾರೋ ತಿಳಿಯದು. ನಾವು ಎಂದಿಗೂ ಶ್ರೀರಾಮ ಮಂದಿರಕ್ಕೆ ಹೋಗಿರಲಿಲ್ಲ; ಆದರೆ ಒಂದು ದಿನ ಸುಮ್ಮನೆ ಹಾಗೆ ನಡೆದುಕೊಂಡು ಹೋಗಿದ್ದೆವು. ಹಲವು ದಿನಗಳಾಗಿವೆ, ಪ್ರಭು ಶ್ರೀರಾಮನ ದರ್ಶನ ಪಡೆಯೋಣ ಎಂದು ಯೋಚಿಸಿದೆವು. ಆಗ ಗೋಪಾಲ್ ರಾವ್ ನನಗೆ, ‘ನೀವು ಯಾರ ಅನುಮತಿಯೊಂದಿಗೆ ಬಂದಿದ್ದೀರಿ?’ ಎಂದು ಕೇಳಿದ. ಇದಕ್ಕೆ ನಾನು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದೆ” ಎಂದು ಹೇಳಿದರು.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ