೨೦೧೧ ರ ಪೊಲೀಸ್ ಕಸ್ಟಡಿ ದೌರ್ಜನ್ಯದಲ್ಲಿ ಯುವಕನ ಸಾವು ಪ್ರಕರಣ
ಅಮಾಯಕ ಯುವಕನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ ಆರೋಪ
೧೫ ವರ್ಷಗಳ ನಂತರ ಹೊರಬಿದ್ದ ತೀರ್ಪು

ವಾಶೀಂ – ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ೯ ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ೨೦೧೧ ರಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಪೊಲೀಸರ ತೀವ್ರ ಥಳಿತದಿಂದಾಗಿ ಯುವಕನೊಬ್ಬ ಮೃತಪಟ್ಟಿದ್ದನು. ಇದೇ ಪ್ರಕರಣದಲ್ಲಿ ೧೫ ವರ್ಷ, ೧ ತಿಂಗಳು ಮತ್ತು ೨೩ ದಿನಗಳ ನಂತರ ವಾಶೀಂನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಜಯಸಿಂಗ್ ಝಪಾಟೆ ಅವರು ಈ ಐತಿಹಾಸಿಕ ತೀರ್ಪನ್ನು ನೀಡಿದ್ದಾರೆ.
೧. ಮೇ ೯, ೨೦೧೧ ರಂದು ರಿಸೋಡ್ ಪೊಲೀಸ್ ಠಾಣೆಯ ಅಂದಿನ ಇನ್ಸ್‌ಪೆಕ್ಟರ್ ಮಹಾದೇವ್ ಮಾಣಿಕ್ ಧಾಂಡೆ ಸೇರಿದಂತೆ ೮ ಜನ ಪೊಲೀಸ್ ಸಿಬ್ಬಂದಿ ಹಿಂಗೋಲಿ ಜಿಲ್ಲೆಯ ಸೇನ್‌ಗಾವ್ ತಾಲೂಕಿನ ವಾಢೋಣಾದಲ್ಲಿರುವ ಪಾರಧಿ ವಸ್ತಿಯ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಬೇಗ್ಯಾ ಪವಾರ್ ಎಂಬ ಯುವಕನನ್ನು ಕಳ್ಳತನದ ಪ್ರಕರಣವೊಂದರಲ್ಲಿ ಶಂಕಿತನನ್ನಾಗಿ ಮಾಡಿ ಬಂಧಿಸಲಾಗಿತ್ತು. ಆತ ಅಪರಾಧವನ್ನು ಒಪ್ಪಿಕೊಳ್ಳುವಂತೆ ಮಾಡಲು ಪೊಲೀಸರು ನಡೆಸಿದ ಹಲ್ಲೆಯಿಂದಾಗಿ ಆತ ಸಾವನ್ನಪ್ಪಿದ್ದನು.
೨. ಈ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ೩೪ ದಿನಗಳ ಕಾಲ ತನಿಖೆ ನಡೆಸಿ, ಕೊಲೆ ಪ್ರಕರಣದ ಜೊತೆಗೆ ವಿಶೇಷ ‘ಅಟ್ರಾಸಿಟಿ’ ಕಾಯ್ದೆಯಡಿ ದೋಷಿ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದೀಗ ೧೫ ವರ್ಷಗಳ ನಂತರ ಈ ತೀರ್ಪು ಬಂದಿದೆ.
೩. ಬೇಗ್ಯಾ ಪವಾರ್ ವಿರುದ್ಧ ಈ ಮುಂಚೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿರಲಿಲ್ಲ. ಆತ ಕೇವಲ ‘ಪಾರಧಿ’ ಸಮುದಾಯಕ್ಕೆ ಸೇರಿದವನೆಂಬ ಒಂದೇ ಕಾರಣಕ್ಕೆ ಪೊಲೀಸರು ಆತನನ್ನು ಸಿಲುಕಿಸಿದ್ದರು.
ಜೀವಾವಧಿ ಶಿಕ್ಷೆಗೊಳಗಾದ ಪೊಲೀಸರ ಹೆಸರುಗಳು!ರಿಸೋಡ್ ಪೊಲೀಸ್ ಠಾಣೆಯ ಅಂದಿನ ಇನ್ಸ್‌ಪೆಕ್ಟರ್ ಮಹಾದೇವ್ ಮಾಣಿಕ್ ಧಾಂಡೆ ಅವರೊಂದಿಗೆ ಪೊಲೀಸ್ ಸಿಬ್ಬಂದಿಗಳಾದ ಮದನ್ ಪವಾರ್, ಶಿವಾಜಿ ಖಿಲ್ಲಾರಿ, ಪಂಜಾಬ್ ಪಾಟ್ಕರ್, ರಮೇಶ್ ಪವಾರ್, ಪ್ರಕಾಶ್ ತಾರಮ್, ನಾಗೋರಾವ್ ಖಾಂಡ್ಕೆ, ಅಶೋಕ್ ವೈದ್ಯ ಮತ್ತು ವಸಂತ್ ಜಾಧವ್ ಜೀವಾವಧಿ ಶಿಕ್ಷೆಗೆ ಒಳಗಾದ ಪೊಲೀಸರಾಗಿದ್ದಾರೆ. |
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ