ದೇಹದಲ್ಲಿರುವ ಅನೇಕ ಅಂಗಾಂಗಗಳು ನಾಪತ್ತೆ ಎಂದು ನಾವಿಕರ ಸಂಸ್ಥೆಯ ದಾವೆ

ನವದೆಹಲಿ – ವೆನೆಜುವೆಲಾದಲ್ಲಿ ಭಾರತೀಯ ನಾವಿಕ ರಾಕೇಶ ಚೌಹಾಣ ಎಂಬುವವರು ೧ ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರ ಶವವನ್ನು ಯಾವುದೇ ವಿವರವಾದ ಮಾಹಿತಿ ಮತ್ತು ಸ್ಥಳೀಯ ಮರಣೋತ್ತರ ಪರೀಕ್ಷೆಯ ವರದಿಯಿಲ್ಲದೆಯೇ ಉತ್ತರ ಪ್ರದೇಶದಲ್ಲಿರುವ ಅವರ ಮೂಲ ಗ್ರಾಮಕ್ಕೆ ಕಳುಹಿಸಿಕೊಡಲಾಯಿತು. ಇದರ ಬೆನ್ನಲ್ಲೇ, ನಾವಿಕರ ರಾಷ್ಟ್ರೀಯ ಸಂಸ್ಥೆಯಾದ ‘ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ’ ಅವರ ಸಾವಿನ ಪರಿಸ್ಥಿತಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಭಾರತದಲ್ಲಿ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಒತ್ತಾಯಿಸಿತ್ತು.
ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದ್ದೇನು?
‘ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕಾರ, ಭಾರತದಲ್ಲಿ ನಡೆದ ಅಧಿಕೃತ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶವದಲ್ಲಿ ಯಾವುದೇ ಪ್ರಮುಖ ಆಂತರಿಕ ಅಂಗಾಂಗಗಳು ಇರಲಿಲ್ಲ. ವರದಿಯನ್ವಯ ಮೆದುಳು, ಹೃದಯ, ಎರಡೂ ಶ್ವಾಸಕೋಶಗಳು, ಯಕೃತ್ತು, ಮೂತ್ರಪಿಂಡಗಳು, ಗುಲ್ಮ (ಸ್ಪ್ಲೀನ್), ಮೇದೋಜ್ಜೀರಕ ಗ್ರಂಥಿ, ಜಠರ, ಕರುಳು, ಥೈರಾಯ್ಡ್, ಹೈಯಾಯ್ಡ್, ಲ್ಯಾರಿಂಕ್ಸ್ ಮತ್ತು ಟ್ರಕಿಯಾ ಸೇರಿದಂತೆ ಅನೇಕ ಪ್ರಮುಖ ಅಂಗಗಳು ನಾಪತ್ತೆಯಾಗಿದ್ದವು. ಇದರೊಂದಿಗೆ ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೂ ಮುನ್ನ ಯಾವುದೇ ಗಾಯಗಳಾದ ಸ್ಪಷ್ಟ ಕುರುಹುಗಳು ಪತ್ತೆಯಾಗಿಲ್ಲ. ಈ ಶವವನ್ನು ಸುಮಾರು ಒಂದು ತಿಂಗಳ ಕಾಲ ‘ಡೀಪ್ ಫ್ರೀಜರ್’ನಲ್ಲಿ ಇಡಲಾಗಿತ್ತು, ಎಂದು ವರದಿಯಲ್ಲಿ ಹೇಳಲಾಗಿದೆ.
ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಹಸ್ತಕ್ಷೇಪ ಮಾಡಲು ಒತ್ತಾಯ!
ಸಂಸ್ಥೆಯು ವೆನೆಜುವೆಲಾದ ಅಧಿಕಾರಿಗಳ ಪಾತ್ರದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಪ್ರಕರಣದಲ್ಲಿ ತಕ್ಷಣವೇ ಹಸ್ತಕ್ಷೇಪ ಮಾಡಬೇಕು, ಸಂಪೂರ್ಣ ಮರಣೋತ್ತರ ಪರೀಕ್ಷೆಯ ವರದಿ ಮತ್ತು ಸಾವಿನ ಪರಿಸ್ಥಿತಿಯನ್ನು ಬಹಿರಂಗಪಡಿಸಬೇಕು, ಹಾಗೆಯೇ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಮತ್ತು ಯೋಗ್ಯ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಲಾಗಿದೆ.
ಗೋಹತ್ಯೆ ನಿಷೇಧವನ್ನು ವಿರೋಧಿಸುವ ಟಿವಿಎಕೆ ಸರಕಾರವು ಮುಂದೆ ಹಂದಿಗಳ ಹತ್ಯೆಯನ್ನು ನಿಷೇಧಿಸಿದರೆ ಆಶ್ಚರ್ಯಪಡಬೇಕಾಗಿಲ್ಲ !
ಢಾಕಾ (ಬಾಂಗ್ಲಾದೇಶ)ಇಲ್ಲಿ ಅಪರಿಚಿತರಿಂದ ಹಣಕ್ಕಾಗಿ ಹಿಂದೂ ಅರ್ಚಕನಿಗೆ ಅಮಾನುಷವಾಗಿ ಹಲ್ಲೆ ಮಾಡಿ ರಸ್ತೆಗೆ ಎಸೆದರು
ತಾಲಿಬಾನ್ನಿಂದ ಪಾಕಿಸ್ತಾನದಲ್ಲಿರುವ ಇಸ್ಲಾಮಿಕ್ ಸ್ಟೇಟ್ ನೆಲೆಗಳ ಮೇಲೆ ಡ್ರೋನ್ ದಾಳಿ
ಸಿಂಧೂ ಜಲ ಒಪ್ಪಂದ; ಪಾಕಿಸ್ತಾನ ತನ್ನ ಅಣು ನೀತಿಯನ್ನು ಬದಲಿಸಿ ಅಣುಬಾಂಬ್ ಬಳಸಬೇಕು! : Bilawal Bhutto
Ford News : ಎಐಗಿಂತ ಮನುಷ್ಯರೇ ಮೇಲು? ಫೋರ್ಡ್ನ ಹೊಸ ಹೆಜ್ಜೆ!
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!