ಅಪರಿಚಿತ ಸಂಖ್ಯೆಗಳಿಂದ ಬರುವ 'ಸೈಲೆಂಟ್ ಕಾಲ್' ಮೂಲಕ ಸೈಬರ್ ವಂಚನೆ ಸಂಭವಿಸಬಹುದು!

ನವದೆಹಲಿ – ಅಪರಿಚಿತ ಸಂಖ್ಯೆಗಳಿಂದ ಫೋನ್ ಬರುವುದು ಮತ್ತು ಕರೆ ಸ್ವೀಕರಿಸಿ ‘ಹಲೋ’ ಎಂದ ತಕ್ಷಣವೇ ಎದುರಿನಿಂದ ಫೋನ್ ಕಟ್ ಆಗುವುದು, ಇಂತಹ ಘಟನೆಗಳು ಅನೇಕರ ವಿಷಯದಲ್ಲಿ ನಡೆಯುತ್ತಿರುತ್ತವೆ. ಇದು ‘ಸೈಲೆಂಟ್ ಕಾಲ್’ ವಂಚನೆಯ ಜಾಲವಾಗಿರುವ ಸಾಧ್ಯತೆಯಿರುವುದರಿಂದ ಇಂತಹ ಕರೆಗಳನ್ನು ನಿರ್ಲಕ್ಷಿಸಬೇಡಿ ಎಂದು ಗೃಹ ಸಚಿವಾಲಯ ಎಚ್ಚರಿಕೆ ನೀಡಿದೆ.
ಆ ಸಂಖ್ಯೆಯನ್ನು ಮತ್ತೆ ಸಂಪರ್ಕಿಸಬೇಡಿ!
ಸೈಬರ್ ಭದ್ರತಾ ಸಂಸ್ಥೆಗಳು ನಾಗರಿಕರಿಗೆ ಇಂತಹ ಕರೆಗಳ ಬಗ್ಗೆ ಜಾಗರೂಕರಾಗಿರಲು ಕರೆ ನೀಡಿವೆ. ಕರೆ ಸ್ವೀಕರಿಸಿದ ತಕ್ಷಣವೇ ಕಟ್ ಆದಲ್ಲಿ ಆ ಸಂಖ್ಯೆಗೆ ಮತ್ತೆ ಸಂಪರ್ಕ (ಫೋನ್) ಮಾಡಬಾರದು. ಪದೇ ಪದೇ ಇಂತಹ ಕರೆಗಳು ಬರುತ್ತಿದ್ದರೆ ಆ ಸಂಖ್ಯೆಯನ್ನು ಬ್ಲಾಕ್ ಮಾಡಬೇಕು. ಹಾಗೆಯೇ ಅಪರಿಚಿತ ವ್ಯಕ್ತಿಗಳಿಗೆ ವೈಯಕ್ತಿಕ ಅಥವಾ ಬ್ಯಾಂಕಿಂಗ್ ಮಾಹಿತಿಯನ್ನು ನೀಡುವುದನ್ನು ತಪ್ಪಿಸಬೇಕು ಎಂದೂ ಹೇಳಲಾಗಿದೆ. ದೂರಸಂಪರ್ಕ ಕಂಪನಿಗಳು ನೀಡುವ ಶಂಕಾಸ್ಪದ ಸಂಖ್ಯೆಗಳ ಬಗೆಗಿನ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಲು ಕೋರಲಾಗಿದೆ. ವಂಚನೆಯ ಸಂಶಯ ಬಂದಲ್ಲಿ ನಾಗರಿಕರು ತಕ್ಷಣವೇ ಸೈಬರ್ ಹೆಲ್ಪ್‌ಲೈನ್ ಸಂಖ್ಯೆ 1930 ಕ್ಕೆ ದೂರು ನೀಡಬೇಕು ಎಂದು ಗೃಹ ಸಚಿವಾಲಯ ತಿಳಿಸಿದೆ.
‘ಸೈಲೆಂಟ್ ಕಾಲ್’ ವಂಚನೆ ಎಂದರೆ ಏನು?
ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸೈಬರ್ ಭದ್ರತಾ ಸಂಸ್ಥೆಯ ಮಾಹಿತಿಯ ಪ್ರಕಾರ, ಈ ರೀತಿಯ ವಂಚನೆಯಲ್ಲಿ ಏಕಕಾಲದಲ್ಲಿ ಸಾವಿರಾರು ಮೊಬೈಲ್ ಸಂಖ್ಯೆಗಳಿಗೆ ಸ್ವಯಂಚಾಲಿತವಾಗಿ ಕರೆ ಮಾಡಲಾಗುತ್ತದೆ. ಇಂತಹ ಕರೆ ಮಾಡುವ ಹಿಂದೆ ಸಂವಹನ ನಡೆಸುವ ಉದ್ದೇಶವಿರುವುದಿಲ್ಲ. ಸಂಬಂಧಪಟ್ಟ ವ್ಯಕ್ತಿ ಫೋನ್ ಸ್ವೀಕರಿಸಿದ್ದಾರೆಯೇ? ಮತ್ತು ಆ ಸಂಖ್ಯೆ ಚಾಲ್ತಿಯಲ್ಲಿದೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿರುತ್ತದೆ. ವ್ಯಕ್ತಿಯು ಫೋನ್ ಸ್ವೀಕರಿಸಿದ ತಕ್ಷಣ ಅವರ ಸಂಖ್ಯೆ ಸಕ್ರಿಯವಾಗಿದೆ ಎಂಬ ಮಾಹಿತಿ ವಂಚಕರಿಗೆ ದೊರೆಯುತ್ತದೆ. ತದನಂತರ ಇಂತಹ ಸಂಖ್ಯೆಗಳಿಗೆ ಆರ್ಥಿಕ ವಂಚನೆ, ನಕಲಿ ಪೊಲೀಸ್ ಕ್ರಮದ ಬೆದರಿಕೆಗಳು, ಬ್ಯಾಂಕ್ ಖಾತೆಯ ಮಾಹಿತಿ ಕೇಳುವುದು, ಬಹುಮಾನ ಅಥವಾ ಲಾಟರಿ ಹೆಸರಿನಲ್ಲಿ ಜಾಲಕ್ಕೆ ಸಿಲುಕಿಸುವುದು ಮುಂತಾದ ವಂಚನೆಗಳು ನಡೆಯಬಹುದು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”