
ನ್ಯೂಯಾರ್ಕ್ – ಭೂಮಿಯಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ದ ಅಂದರೆ ‘ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್’ನ (ಐ.ಎಸ್.ಎಸ್.ನ) ಕಾರ್ಯಕಾಲವು ಈಗ ಅಂತಿಮ ಹಂತಕ್ಕೆ ತಲುಪಿದೆ. 2028 ರಿಂದ 2030ರ ಅವಧಿಯಲ್ಲಿ ಈ ನಿಲ್ದಾಣವನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ತರುವ ಯೋಜನೆಯನ್ನು ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಘೋಷಿಸಿದೆ.
1. ಈ ಕಾರ್ಯಾಚರಣೆಗಾಗಿ ನಾಸಾ 1 ಬಿಲಿಯನ್ ಡಾಲರ್ (ಸುಮಾರು 9 ಸಾವಿರ 500 ಕೋಟಿ ರೂಪಾಯಿ) ವೆಚ್ಚದ ಯೋಜನೆಯನ್ನು ಸಿದ್ಧಪಡಿಸಿದೆ. ಕಳೆದ 25 ವರ್ಷಗಳಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಅತ್ಯಂತ ದೊಡ್ಡ ಬಾಹ್ಯಾಕಾಶ ಪ್ರಯೋಗಾಲಯವಾಗಿ ಕಾರ್ಯನಿರ್ವಹಿಸುತ್ತಿದೆ.
2. ಐ.ಎಸ್.ಎಸ್.ನ ನಿಗದಿತ ಕಾರ್ಯಕಾಲವು ಪೂರ್ಣಗೊಂಡಿದೆ. ಆದಾಗ್ಯೂ ಅದರ ಅವಧಿಯನ್ನು ಹಲವು ಬಾರಿ ವಿಸ್ತರಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಈ ನಿಲ್ದಾಣವು ಸತತವಾಗಿ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರ ಸುರಕ್ಷತೆಗಾಗಿ ಶತಕೋಟಿ ಡಾಲರ್ ವೆಚ್ಚವಾಗುತ್ತಿದೆ.
3. ಈಗ ನಾಸಾ ಚಂದ್ರ ಮತ್ತು ಮಂಗಳ ಗ್ರಹಗಳ ಕಾರ್ಯಾಚರಣೆಯ ಮೇಲೆ ಗಮನ ಕೇಂದ್ರೀಕರಿಸಲು ಉದ್ದೇಶಿಸಿದೆ. ಆದ್ದರಿಂದ ಐ.ಎಸ್.ಎಸ್. ಅನ್ನು ಗೌರವಪೂರ್ವಕವಾಗಿ ಮತ್ತು ಸುರಕ್ಷಿತವಾಗಿ ನಿವೃತ್ತಿಗೊಳಿಸಲು ನಿರ್ಧರಿಸಲಾಗಿದೆ.
4. ಒಂದು ವಿಶೇಷ ಬಾಹ್ಯಾಕಾಶ ನೌಕೆಯನ್ನು ಬಳಸಿ ಐ.ಎಸ್.ಎಸ್. ಅನ್ನು ನಿಯಂತ್ರಿತ ಪದ್ಧತಿಯಲ್ಲಿ ಭೂಮಿಯ ವಾತಾವರಣಕ್ಕೆ ತಳ್ಳಲಾಗುವುದು. ವಾತಾವರಣವನ್ನು ಪ್ರವೇಶಿಸಿದಾಗ ಘರ್ಷಣೆಯ ಕಾರಣದಿಂದಾಗಿ ನಿಲ್ದಾಣದ ಬಹುತೇಕ ಭಾಗವು ಸುಟ್ಟು ಭಸ್ಮವಾಗುತ್ತದೆ ಮತ್ತು ಅದು ತುಂಡುತುಂಡಾಗುತ್ತದೆ.
5. ಅದರ ದೊಡ್ಡ ಅವಶೇಷಗಳು ಭೂಮಿಯ ಮೇಲಿನ ಮಾನವ ವಸತಿ ಇರುವ ಪ್ರದೇಶಗಳ ಮೇಲೆ ಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ; ಆದ್ದರಿಂದಲೇ ನಾಸಾ ಪೆಸಿಫಿಕ್ ಮಹಾಸಾಗರದ ಒಂದು ದುರ್ಗಮ ಪ್ರದೇಶವನ್ನು (ಇದು ಭೂಮಿಯಿಂದ ಅತ್ಯಂತ ದೂರದಲ್ಲಿದೆ) ಆಯ್ಕೆ ಮಾಡಿದೆ, ಇದರಿಂದಾಗಿ ವಾತಾವರಣವನ್ನು ಪ್ರವೇಶಿಸಿದ ನಂತರ ಉಳಿದ ಅವಶೇಷಗಳು ಈ ನಿರ್ಜನ ಸಾಗರ ಪ್ರದೇಶದಲ್ಲೇ ಬೀಳಲಿವೆ.
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ಬ್ರಿಟನ್ : ಯುವತಿಯ ಮೇಲೆ ಅತ್ಯಾಚಾರ ಎಸಗಿದ ಪಾಕಿಸ್ತಾನಿ ಪ್ರಜೆ ಶೇರಾಜ್ ಮಲಿಕ್ಗೆ 10 ವರ್ಷಗಳ ಜೈಲು ಶಿಕ್ಷೆ!
ಗ್ರಾಹಕರಿಗೆ ಪ್ರತಿದಿನ ಗರಿಷ್ಠ 200 ಲೀಟರ್ ಡೀಸೆಲ್ ಸಿಗಲಿದೆ !
ರಾವಲಕೋಟ್ (ಪಾಕ್ ಆಕ್ರಮಿತ ಕಾಶ್ಮೀರ) : ಪಾಕ್ ಸೇನೆಯು ಮತ್ತೆ 16 ನಾಗರಿಕರನ್ನು ಕೊಂದಿದೆ !
‘ಬಾಂಗ್ಲಾದೇಶದ ಸಾರ್ವಭೌಮತ್ವದ ರಕ್ಷಣೆಗಾಗಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ!’ – ‘ಜಮಾತ್-ಎ-ಇಸ್ಲಾಮಿ’ : Jamaat-e-Islami
ಭಾರತದ ಬಳಿ ನಿರೀಕ್ಷೆಗಿಂತ ತುಂಬಾ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳು ಇರಬಹುದು! – ಪಾಕಿಸ್ತಾನ : India Nuclear Weapons