
ಶ್ರೀಭೂಮಿ (ಆಸಾಮ) – ಶ್ರೀಭೂಮಿ ಜಿಲ್ಲೆಯಲ್ಲಿನ ಮದನಪುರ ಗ್ರಾಮದ ದೇವಸ್ಥಾನವೊಂದರ ಹುಂಡಿಯ ಮೇಲೆ ಕತ್ತರಿಸಿದ ಹಸುವಿನ ತಲೆ ಪತ್ತೆಯಾಗಿದ್ದು, ಇಡೀ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪೊಲೀಸರು ಹುಂಡಿಯ ಮೇಲಿದ್ದ ಹಸುವಿನ ತಲೆ ಮತ್ತು ಅಲ್ಲಿ ಹರಡಿದ್ದ ಇತರ ಕಸವನ್ನು ತೆರವುಗೊಳಿಸಿದರು. ಕೆಲವು ಜನರು ಕಾಡು ಪ್ರಾಣಿಯೊಂದು ತಲೆಯನ್ನು ತಂದಿರಬಹುದು ಎಂಬ ಸಾಧ್ಯತೆಯನ್ನು ವ್ಯಕ್ತಪಡಿಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದರು; ಆದರೆ ಸ್ಥಳೀಯರು ಈ ಸಾಧ್ಯತೆಯನ್ನು ತಳ್ಳಿಹಾಕಿದರು. ಸದ್ಯ ಇಡೀ ಮದನಪುರ ಗ್ರಾಮದಲ್ಲಿ ಪರಿಸ್ಥಿತಿಯು ಅತ್ಯಂತ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ. ಭಾರಿ ಪೊಲೀಸ್ ಬಂದೋಬಸ್ತನ್ನು ನಿಯೋಜಿಸಲಾಗಿದೆ.
‘ಇಂತಹ ಘಟನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ !’ – ಹಿಂದೂ ಸಂಘಟನೆಗಳು‘ಸಹಿಸುವುದಿಲ್ಲ’ ಎಂದರೆ ಅವರು ಏನು ಮಾಡಲಿದ್ದಾರೆ ? ಹಿಂದೂ ಸಂಘಟನೆಗಳಿಂದ ನಿರೀಕ್ಷಿತ ಮಟ್ಟದ ಒತ್ತಡ ಬಾರದಿರುವುದರಿಂದ ಮತ್ತು ಎಲ್ಲ ಸರಕಾರಗಳು ಅವರನ್ನು ಗಂಭೀರವಾಗಿ ಪರಿಗಣಿಸದೇ ಇರುವುದರಿಂದ ಭಾರತದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಮುಂದುವರಿಯುತ್ತಲೇ ಇವೆ, ಇದೆ ವಾಸ್ತವ ಸಂಗತಿಯಾಗಿದೆ ! ಈ ಘಟನೆಯ ನಂತರ ಸ್ಥಳೀಯ ಹಿಂದೂ ಸಂಘಟನೆಗಳು ಮತ್ತು ನಾಯಕರ ಆಕ್ರೋಶ ಕಟ್ಟೆಯೊಡೆದಿದೆ. ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಈ ರೀತಿ ಗೋಹತ್ಯೆ ಮಾಡಿ ದೇವಸ್ಥಾನದಲ್ಲಿ ತಲೆ ಹಾಕಿರುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹಿಂದೂ ನಾಯಕರು ಸ್ಪಷ್ಟಪಡಿಸಿದ್ದಾರೆ. ಇದು ಬಹುಸಂಖ್ಯಾತ ಸಮಾಜಕ್ಕೆ ನೀಡಿದ ಸವಾಲಾಗಿದೆ. ದೋಷಿಗಳನ್ನು ತಕ್ಷಣವೇ ಪತ್ತೆ ಹಚ್ಚಿ, ಅವರಿಗೆ ಒಂದು ಮಾದರಿಯಾಗುವಂತಹ ಶಿಕ್ಷೆಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. |
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ