ತೃಣಮೂಲ ಕಾಂಗ್ರೆಸ್ಸಿನ ಆಸ್ಸಾಂ ಪ್ರದೇಶಾಧ್ಯಕ್ಷರಾದ ಅಭಿಜೀತ ಮಜುಮದಾರರಿಂದ ರಾಜೀನಾಮೆ
ಹಿಂದುತ್ವದ ಮೇಲೆ ನಂಬಿಕೆ ಇಟ್ಟಿರುವ ಯಾವುದೇ ವ್ಯಕ್ತಿ ತೃಣಮೂಲ ಕಾಂಗ್ರೆಸ್ಸಿನಲ್ಲಿ ಉಳಿಯಲು ಸಾಧ್ಯವಿಲ್ಲ

ಗೌಹತ್ತಿ (ಆಸಾಮ) – ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ನಂತರ ತೃಣಮೂಲ ಕಾಂಗ್ರೆಸ್ ನಲ್ಲಿನ ಆಂತರಿಕ ಅಸಮಾಧಾನವು ನಿರಂತರವಾಗಿ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಈಗ ತೃಣಮೂಲ ಕಾಂಗ್ರೆಸ್ಸಿನ ಆಸ್ಸಾಂ ಪ್ರದೇಶಾಧ್ಯಕ್ಷರಾದ ಅಭಿಜೀತ ಮಜುಮದಾರರವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮಜುಮದಾರವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಮತಾ ಬ್ಯಾನರ್ಜಿಯವರಿಗೆ ಈ-ಮೇಲ್ ಮೂಲಕ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿದ್ದಾರೆ. ಅವರು ಪ್ರದೇಶಾಧ್ಯಕ್ಷ ಹುದ್ದೆಯೊಂದಿಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದಾರೆ. ಈಗ ತೃಣಮೂಲ ಕಾಂಗ್ರೆಸ್ಸಿನ ಅರ್ಥ ‘ತೃಣಮೂಲ ಮುಸ್ಲಿಂ ಕಾಂಗ್ರೆಸ್’ ಎಂದಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದು ಕೇವಲ ಮುಸಲ್ಮಾನರಿಗಾಗಿ ಕೆಲಸ ಮಾಡುವ ಪಕ್ಷವಾಗಿ ಮಾರ್ಪಟ್ಟಿದೆ. ಹಿಂದುತ್ವದ ಮೇಲೆ ನಂಬಿಕೆ ಇಟ್ಟಿರುವ ಯಾವುದೇ ವ್ಯಕ್ತಿ ತೃಣಮೂಲ ಕಾಂಗ್ರೆಸ್ಸಿನಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ತೃಣಮೂಲದ ನಾಯಕರು ಎಂದಿಗೂ ಹಿಂದೂಗಳ ಪರವಾಗಿ ಮಾತನಾಡುವುದಿಲ್ಲ !
ಮಜುಮದಾರರವರು ಮಾತನಾಡುತ್ತ, ಪಕ್ಷದ ಸ್ಥಾಪನೆಯಾದಾಗಿನಿಂದ ನಾನು ಆಸಾಮ ತೃಣಮೂಲ ಕಾಂಗ್ರೆಸ್ಸಿನ ಸದಸ್ಯ ಮತ್ತು ಕಾರ್ಯದರ್ಶಿಯಾಗಿದ್ದೆನು. ಅಲ್ಲದೆ ನಾನು ಪಕ್ಷದ ಮಾಧ್ಯಮ ವಿಭಾಗದ ಮುಖ್ಯಸ್ಥನೂ ಆಗಿದ್ದೆ ಮತ್ತು ಈ ಬಾರಿ ಗೌಹತ್ತಿಯಿಂದ ಚುನಾವಣೆಯಲ್ಲೂ ಸ್ಪರ್ಧಿಸಿದ್ದೆ. ಆಸಾಮಿನಲ್ಲಿ ಬಾಂಗ್ಲಾದೇಶಿ ಮತ್ತು ಮುಸ್ಲಿಂ ಜನರ ಕಡೆಗೆ ಪಕ್ಷದ ಒಲವು ಹೆಚ್ಚಾಗಿದೆ. ಪಕ್ಷದ ನಾಯಕರು ಎಂದಿಗೂ ಹಿಂದೂಗಳ ಪರವಾಗಿ ಮಾತನಾಡುವುದಿಲ್ಲ. ನಾನು ಹಿಂದೂವಾಗಿದ್ದೇನೆ ಹಾಗೂ ನನ್ನದೇ ಆದ ಸೈದ್ಧಾಂತಿಕ ವಿಚಾರಧಾರೆಯಿದೆ, ಆದ್ದರಿಂದ ಪಕ್ಷದಲ್ಲಿ ಇರುವುದು ಸರಿಯಲ್ಲ. ಈಗ ಆಸ್ಸಾಂನಲ್ಲಿ ತೃಣಮೂಲ ಕಾಂಗ್ರೆಸ್ ಅನ್ನು ಕೇಳುವವರು ಯಾರೂ ಇಲ್ಲ, ಎಂದು ಹೇಳಿದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”