ದಾಪೋಲಿಯ ಗೋವಾ ಕೋಟೆಯಲ್ಲಿ 15 ಕ್ಕೂ ಹೆಚ್ಚು ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ: Muslims attack Hindu youths

  • ಹಿಂದೂ ಯುವಕರು ಮುಸಲ್ಮಾನ ಯುವಕರು ಕೋಟೆಯ ಮೇಲೆ ಸಿಗರೇಟ್ ಸೇದುತ್ತಿದ್ದ ವಿಡಿಯೋವನ್ನು ಪ್ರಸಾರ ಮಾಡಿದ್ದೇ ದಾಳಿ

  • ಮತಾಂಧ ಮುಸಲ್ಮಾನರನ್ನು ಬಂಧಿಸಲು ಬೃಹತ್ ಸಂಖ್ಯೆಯಲ್ಲಿ ರಸ್ತೆಗಿಳಿದ ಹಿಂದೂಗಳು

ದಾಪೋಲಿಯ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಚೌಕದಲ್ಲಿ ಶಿವಭಕ್ತರು ಜಮಾಯಿಸಿದರು

ದಾಪೋಲಿ – ಬಕ್ರೀದ್ ದಿನದಂದು, ಅಂದರೆ ಮೇ ೨೭ ರಂದು ಇಲ್ಲಿನ ಗೋವಾ ಕೋಟೆಯ ಮೇಲೆ ಸಿಗರೇಟ್ ಸೇದುತ್ತಿದ್ದ ಮತಾಂಧ ಮುಸಲ್ಮಾನರನ್ನು ತಡೆದು, ಆ ಮಾಹಿತಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದಕ್ಕಾಗಿ ೧೫ ಕ್ಕೂ ಹೆಚ್ಚು ಮುಸಲ್ಮಾನರು ಇಬ್ಬರು ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿ, ಅವರನ್ನು ಜೀವಂತವಾಗಿ ಕೊಲ್ಲಲು ಯತ್ನಿಸಿದ್ದಾರೆ. ದಾಳಿಯಲ್ಲಿ ಇಬ್ಬರೂ ಹಿಂದೂ ಯುವಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯನ್ನು ವಿರೋಧಿಸಿ ಹರ್ಣೆಯಲ್ಲಿ ಹಿಂದೂಗಳು ರಸ್ತೆಗಿಳಿದು ‘ರಸ್ತೆ ತಡೆ’ ಚಳವಳಿ ನಡೆಸಿದರು ಮತ್ತು ‘ದಾಳಿ ಮಾಡಿದ ಮತಾಂಧರನ್ನು ಬಂಧಿಸುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ’ ಎಂದು ದೃಢ ನಿಲುವು ತಳೆದರು. ಈ ಪ್ರಕರಣದಲ್ಲಿ ಪೊಲೀಸರು ಮತಾಂಧರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿಕೊಂಡಿದ್ದಾರೆ.

ಏನಿದು ಘಟನೆ?

. ಮೇ 26 ರಂದು ಹರ್ಣೆಯ ಗೋವಾ ಕೋಟೆಯ ಮಹಾದ್ವಾರದ ಬಳಿ ಝೈನ್ ಅಸ್ಲಂ ಹುನೈರಕರ್ ಮತ್ತು ಮುಫಿಜ್ ಜಾವೇದ್ ಸೋಲಕರ್ ಎಂಬ ಇಬ್ಬರು ಮತಾಂಧ ಮುಸಲ್ಮಾನ ಯುವಕರು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಾ ಗದ್ದಲ ಸೃಷ್ಟಿಸುತ್ತಿದ್ದರು. ಇದನ್ನು ಗಮನಿಸಿದ ಚಿನ್ಮಯ ಗುರವ ಮತ್ತು ಮಹೇಂದ್ರ ರಘುವೀರ ಅವರು ‘ಕೋಟೆಯ ಆವರಣದಲ್ಲಿ ಸಿಗರೇಟ್ ಸೇದಬೇಡಿ’ ಎಂದು ಹೇಳಿದಾಗ, ಮತಾಂಧ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಲ್ಲಿಂದ ಓಡಿಹೋದರು. ನಂತರ ರಾತ್ರಿ ೧೨ ಗಂಟೆಗೆ ಮೊಹಲ್ಲಾ ಮಸೀದಿಯ ಬಳಿ ಆ ಇಬ್ಬರು ಮತಾಂಧ ಯುವಕರು ಪತ್ತೆಯಾದಾಗ, ಅವರಿಗೆ ಬುದ್ಧಿವಾದ ಹೇಳಿದ್ದಕ್ಕೆ ಅವರು ಕ್ಷಮೆಯಾಚಿಸಿದರು. ತದನಂತರ ಗುರವ್ ಅವರು ‘ಕೋಟೆಯ ಮೇಲೆ ಯಾರೂ ಸಿಗರೇಟ್ ಸೇದಬಾರದು’ ಎಂಬ ಸಂದೇಶದೊಂದಿಗೆ ಆ ವಿಡಿಯೋ ಮತ್ತು ಬರಹವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರು.

೨. ಮೇ 27 ರ ಸಾಯಂಕಾಲ ಚಿನ್ಮಯ ಗುರವ ಮತ್ತು ಮಹೇಂದ್ರ ರಘುವೀರ ಅವರು ಕೋಟೆಗೆ ಹೋಗಿದ್ದರು. ಅಲ್ಲಿಗೆ ಬಂದ ಮತಾಂಧ ಮುಸಲ್ಮಾನರಾದ ಝೈನ್ ಅಸ್ಲಂ ಮತ್ತು ಮುಫಿಜ್, ವಿಡಿಯೋ ಪ್ರಸಾರ ಮಾಡಿದ ವಿಷಯವಾಗಿ ಗುರವ ಮತ್ತು ರಘುವೀರ ಅವರಿಗೆ ಅವಾಚ್ಯವಾಗಿ ನಿಂದಿಸಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಲು ಪ್ರಾರಂಭಿಸಿದರು. ಅದೇ ಸಮಯದಲ್ಲಿ ಅಲ್ಲಿ ಕುರಿ ಮೇಯಿಸಲು ಬಂದಿದ್ದ ಇತರ 30 ರಿಂದ 35 ಜನರ ಪೈಕಿ 10 ರಿಂದ 15 ಮತಾಂಧ ಮುಸಲ್ಮಾನರು ಸೇರಿಕೊಂಡು ಗುರವ್ ಮತ್ತು ರಘುವೀರ್ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದರು. ಈ ದಾಳಿಯಲ್ಲಿ ಗುರವ ಮತ್ತು ರಘುವೀರ ಅವರಿಗೆ ಗಂಭೀರ ಗಾಯಗಳಾಗಿದ್ದು, ದಾಳಿಕೋರರು ಗುರವ ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿದ್ದಾರೆ. ಗುರವ ಅವರು ತಕ್ಷಣ ತಮ್ಮ ಸಂಬಂಧಿಕರನ್ನು ಸಂಪರ್ಕಿಸಿದ ನಂತರ, ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಪ್ರೇಮಿಗಳು ಮತ್ತು ಸ್ಥಳೀಯ ಹಿಂದೂಗಳ ಒಗ್ಗಟ್ಟು

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ದಾಪೋಲಿಯ ಶಿವಪ್ರೇಮಿಗಳು ಮತ್ತು ಸಾರ್ವಜನಿಕರು ಮೇ 27 ರ ರಾತ್ರಿ ಬೃಹತ್ ಸಂಖ್ಯೆಯಲ್ಲಿ ದಾಪೋಲಿ ನಗರದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದರು. ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ರಸ್ತೆ ತಡೆ ಚಳವಳಿ ನಡೆಸಲಾಯಿತು. ಈ ವೇಳೆ ‘ಮತಾಂಧರನ್ನು ಬಂಧಿಸುವವರೆಗೆ ನಾವು ಹಿಂದೆ ಸರಿಯುವುದಿಲ್ಲ’ ಎಂದು ಹಿಂದೂಗಳು ದೃಢವಾದ ನಿಲುವು ತಳೆದರು. ಘಟನೆಯ ನಂತರ ಹರ್ಣೆ ಪರಿಸರದಲ್ಲಿ ಉದ್ವಿಗ್ನ ಶಾಂತತೆ ನೆಲೆಸಿದ್ದು, ಸರಕಾರದ ಆದೇಶದಂತೆ ಪೊಲೀಸರು ಬಂದೋಬಸ್ತ್ ಹೆಚ್ಚಿಸಿದ್ದಾರೆ.

 

ಸಂಪಾದಕೀಯ ನಿಲುವು

  • ಇಂತಹ ಘಟನೆ ನಡೆಯಲು ರತ್ನಾಗಿರಿ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ?
  • ಹಿಂದೂ ಯುವಕರ ಮೇಲೆ ಹಲ್ಲೆ ನಡೆಸಿದ ಮತಾಂಧ ಮುಸಲ್ಮಾನರ ಹೆಸರುಗಳು ತಿಳಿದಿದ್ದರೂ ಅವರನ್ನು ಇನ್ನೂ ಏಕೆ ಬಂಧಿಸಿಲ್ಲ?