
ಪುಣೆ, 27 ಮೇ (ಸುದ್ದಿ) – ಹಿಂದುತ್ವನಿಷ್ಠರ ಸಂಘಟಿತ ಬೇಡಿಕೆಯ ನಂತರ ಸುರಕ್ಷತೆಯ ಕಾರಣಗಳಿಗಾಗಿ ಸಾರಸಬಾಗ್ ಉದ್ಯಾನವನವನ್ನು ಮೇ 28 ಮತ್ತು 29 ರಂದು ಮುಚ್ಚಲಾಗುವುದು. ಇಲ್ಲಿನ ಐತಿಹಾಸಿಕ ಸಾರಸಬಾಗ್ ಪರಿಸರದಲ್ಲಿ ಮಾರ್ಚ್ 9 ರಂದು ನಡೆದ ‘ರಮಜಾನ್ ಈದ್’ನ ಮರುದಿನ ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರ ಜನಸಮೂಹ ಜಮಾಯಿಸಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಸಕಲ ಹಿಂದೂ ಸಮಾಜ, ಪತಿತ ಪಾವನ ಸಂಘಟನೆ, ಸ್ವಾತಂತ್ರ್ಯವೀರ ಸಾವರಕರ್ ವಿಚಾರ ಮಂಚ್, ಮಹಾರಾಷ್ಟ್ರ ಮಂದಿರ ಮಹಾಸಂಘ, ಸ್ವಾತಂತ್ರ್ಯವೀರ ಸಾವರಕರ್ ಯುವ ವಿಚಾರ ಮಂಚ್ ಮತ್ತು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ಹಲವು ಹಿಂದುತ್ವನಿಷ್ಠ ಸಂಘಟನೆಗಳು ಒಟ್ಟಾಗಿ ‘ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನ’ ನಡೆಸಿದ್ದವು. ಈ ಕುರಿತಾದ ಮನವಿಯನ್ನು ಪುಣೆ ಪೊಲೀಸ್, ಪುಣೆ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ನೀಡಲಾಗಿತ್ತು. ಸಾರಸಬಾಗ್ ಉದ್ಯಾನವನ ಪರಿಸರದಲ್ಲಿರುವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಟ್ರಸ್ಟಿಗಳು ಕೂಡ ಬಕ್ರೀದ್ ನಂತರ ಸಾರಸಬಾಗ್ ಉದ್ಯಾನವನವನ್ನು ಬಂದ್ ಮಾಡಲು ಸರಕಾರ ಮತ್ತು ಆಡಳಿತಕ್ಕೆ ಮನವಿ ಮಾಡಿದ್ದರು. ತದನಂತರ, ‘ಪ್ರಸ್ತುತ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಇದೇ ಹಿನ್ನೆಲೆಯಲ್ಲಿ ಸುರಕ್ಷತೆಯ ಕಾರಣಗಳಿಗಾಗಿ ಸಾರಸಬಾಗ್ ಉದ್ಯಾನವನವನ್ನು ಮುಚ್ಚಲು ನಿರ್ಧರಿಸಲಾಗಿದೆ’ ಎಂದು ಮೇಯರ್ ಸೌ. ಮಂಜುಷಾ ನಾಗಪುರೆ ಅವರು ಮೇ 26 ರಂದು ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ನೀಡಿದ್ದಾರೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ